ದ.ಕ ಜಿಲ್ಲಾಧ್ಯಕ್ಷರ ಸರ್ವಾಧಿಕಾರ ಧೋರಣೆ; ಕಾರ್ಯಕರ್ತರೂ ಸೇರಿದಂತೆ ಪ್ರಮುಖ ನಾಯಕರ ರಾಜೀನಾಮೆ

1:28 PM, Tuesday, March 26th, 2013
Share
1 Star2 Stars3 Stars4 Stars5 Stars
(No Ratings Yet)
Loading...

JDS in districtಮಂಗಳೂರು : ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಜಿ.ಹೆಗ್ಡೆ ಸೇರಿದಂತೆ  ಪಕ್ಷದ ಪ್ರಮುಖ 10ಮಂದಿ ನಾಯಕರು,50 ಮಂದಿ ಕಾರ್ಯಕರ್ತರು  ಒಟ್ಟು 60ಮಂದಿ ಸದಸ್ಯರು  ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜಿನಾಮೆ ನೀಡಿರುವುದಾಗಿ ತಿಳಿಸಿದರು.ಸೋಮವಾರ ನಗರದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು ಜನತಾದಳ ಪಕ್ಷವನ್ನು ಕರಾವಳಿ ಭಾಗದಲ್ಲಿ ಮುನ್ನಡೆಸಲು ಸ್ವತ; ಪಕ್ಷದ ರಾಜ್ಯಾಧ್ಯಕ್ಷ  ಹೆಚ್. ಡಿ .ಕುಮಾರಸ್ವಾಮಿ ಕೋರಿ ಅಹ್ವಾನ ನೀಡಿದ್ದರಿಂದ ಅವರ ಮನವಿಯನ್ನು ಪುರಸ್ಕರಿಸಿ ಪಕ್ಷವನ್ನು ಸೇರಿ ಪಕ್ಷವನ್ನು ಸಂಘಟಿಸಲು ಪ್ರಾಮಾಣಿಕ ಪ್ರಯತ್ನ  ಮಾಡಿದ್ದೆವು. ಆದರೆ  ಜಿಲ್ಲಾಧ್ಯಕ್ಷರಾದ ಎಂ.ಬಿ.ಸದಾಶಿವ, ಕಾರ್ಯಾಧ್ಯಕ್ಷ ಮೊಹಮ್ಮದ್ ಕುಂಞ್ ಹಾಗೂ ವಸಂತ ಪೂಜಾರಿ ಮೊದಲಾದವರ  ಸ್ವಾರ್ಥ ಮನೋಭಾವದಿಂದಾಗಿ ಮನನೊಂದು ಪಕ್ಷಕ್ಕೆ  ರಾಜಿನಾಮೆ ನೀಡಿರುವುದಾಗಿ ಅವರು ತಿಳಿಸಿದರು.

ಅಲ್ಲದೆ ಜಿಲ್ಲಾಧ್ಯಕ್ಷರ ಸ್ವಾರ್ಥ ಸಾಧನೆ, ಸರ್ವಾಧಿಕಾರಿ ದೋರಣೆ ಮತ್ತು ಹೊಸಬರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಲ್ಲಿನ  ವಿರೋಧ ಮನೋಭಾವ ಪಕ್ಷದ ಅಭಿವೃದ್ಧಿಯನ್ನು ನಿಷ್ಕ್ರಿಯಗೊಳಿಸುವಿಕೆ ಮೊದಲಾದವುಗಳಿಂದ ಬೇಸತ್ತು  ರಾಜ್ಯಾಧ್ಯಕ್ಷ ರಲ್ಲಿ ಈ ಬಗ್ಗೆ ಹೇಳಿದ್ದರೂ ಈ ವಿಷಯವಾಗಿ ಅವರು  ಯಾವುದೇ ಸಮರ್ಪಕ ನಿರ್ಧಾರವನ್ನು ಕೈಗೊಳದೆ ಇರುವುದರಿಂದ ಈ ನಿರ್ಧಾರ ಕೈಗೊಂಡಿದ್ದೇವೆ ಒಂದು ವೇಳೆ ಜಿಲ್ಲಾಧ್ಯಕ್ಷರನ್ನು ಪದಚ್ಯುತಿಗೊಳಿಸಿದರೆ ಪಕ್ಷಕ್ಕೆ ಮತ್ತೆ ಸೇರುವುದಾಗಿ ಎಂ.ಜಿ.ಹೆಗ್ಡೆ  ಹೇಳಿದರು.

ಜೆಡಿಎಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಡಿ.ಎಂ.ಅಸ್ಲಂ ಹಾಗೂ ಇನ್ನೊರ್ವ ಪ್ರಮುಖ ನಾಯಕ ಶಶಿರಾಜ್ ಶೆಟ್ಟಿಯವರ ಉಚ್ಹಾಟನೆ ನೋವು ತಂದಿದ್ದು,  ನಗರದ ಖ್ಯಾತ ಉದ್ಯಮಿ ಎ.ಸದಾನಂದ ಶೆಟ್ಟಿ ಪಕ್ಷದಲ್ಲಿನ ಗೊಂದಲದಿಂದಾಗಿ ಮುಂದಿನ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ನಾಗರಾಜ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಎಂ.ಜಿ.ಹೆಗಡೆ, ಕೊಣಾಜೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಶೌಕತ್ ಆಲಿ, ಉದಯ ಕುಮಾರ್, ರಂಜಿತ್ ಮಲ್ಲಿ, ಪ್ರದೀಪ್ ಕರ್ಕೇರ, ಸುದರ್ಶನ್ ಬಂಟ್ವಾಳ್ ಸೇರಿದಂತೆ ಹಲವು ಮಂದಿ ನಾಯಕರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English