ಮಂಗಳೂರು : ಕರಾವಳಿಯಲ್ಲಿ ಜೆಡಿಎಸ್ ತನ್ನ ನೆಲೆಯನ್ನು ಕಂಡುಕೊಳ್ಳುವ ಸಮಯದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಜಿ. ಹೆಗಡೆ ಮತ್ತು ನಾಗರಾಜ ಶೆಟ್ಟಿ ಹಾಗು ಇತರೆ ನಾಯಕರು ಪಕ್ಷಕ್ಕೆ ರಾಜಿನಾಮೆ ನೀಡಿರುವುದರಿಂದ ಪಕ್ಷಕ್ಕೆ ಯಾವುದೇ ರೀತಿಯ ನಷ್ಟವಿಲ್ಲ, ಇದು ಕರಾವಳಿಯಲ್ಲಿ ಬೇರೆ ಪಕ್ಷಗಳೊಂದಿಗೆ ಕೈ ಜೋಡಿಸಿ ಪಕ್ಷಕ್ಕೆ ಹಿನ್ನಡೆ ಉಂಟುಮಾಡಲು ನಡೆಸುತ್ತಿರುವ ಸಂಚು ಇದರಿಂದ ಪಕ್ಷಕ್ಕೆ ಯಾವುದೇ ರೀತಿಯ ಹಿನ್ನಡೆ ಉಂಟಾಗಲಾರದು ಎಂದು ಸುಶೀಲ್ ನೊರೊನ್ಹ ತಿಳಿಸಿದರು.
ಸೋಮವಾರ ಎಂ.ಜಿ.ಹೆಗಡೆ ಪತ್ರಿಕಾ ಘೋಷ್ಠಿ ನಡೆಸಿ ರಾಜಿನಾಮೆ ಸಲ್ಲಿಸಿರುವ ಬಗ್ಗೆ ಮಾತನಾಡಿರುವ ಹಿನ್ನಲೆಯಲ್ಲೇ ಮಂಗಳವಾರ ಸುಶೀಲ್ ನೊರೊನ್ಹ ಹಾಗೂ ಇತರರು ಪತ್ರಿಕಾ ಘೋಷ್ಠಿ ಕರೆದು ಈ ಬಗ್ಗೆ ಪ್ರತಿಕ್ರಿಯಿಸಿದರು. ಇತರೆ ಎಲ್ಲಾ ಪಕ್ಷಗಳಲ್ಲೂ ತಮ್ಮ ಸ್ವಾರ್ಥವನ್ನು ಸಾಧಿಸಲು ಹೊರಟು ಅದಕ್ಕೆ ಅಡ್ಡಿಯಾದಾಗ ಆ ಪಕ್ಷಗಳನ್ನು ಬಿಟ್ಟ ಇವರು ಜೆಡಿಎಸ್ ಪಕ್ಷ ಸೇರಿದಂದಿನಿಂದ ಇಲ್ಲೂ ತಮ್ಮ ಪ್ರಾಬಲ್ಯವನ್ನು ಸಾಧಿಸಲು ಹೋರಟರು ಆದರೆ ಇಲ್ಲಿ ಅದು ಸಾಧ್ಯವಾಗದೇ ಇದ್ದಾಗ ರಾಜಿನಾಮೆಯ ನಾಟಕ ವಾಡುತ್ತಿದ್ದಾರೆ ಎಂದರು.
ಮಾಜಿ ಸಚಿವ ನಾಗರಾಜ ಶೆಟ್ಟಿ ಹಾಗೂ ಹೆಗಡೆ, ತಾವು ಪಕ್ಷಕ್ಕೆ ಸೇರಿದ ದಿನದಿಂದ ಪಕ್ಷದಲ್ಲಿನ ಎಲ್ಲಾ ಅಧಿಕಾರಗಳನ್ನು ತಮ್ಮ ಕೈವಶ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಅವರ ಈ ಆಸೆಗೆ ಜಿಲ್ಲಾಧ್ಯಕ್ಷರು ಅಡ್ಡಿಯಾದ ಕಾರಣ ಅವರನ್ನು ಪಕ್ಷದಿಂದ ಕೆಳಗಿಳಿಸುವಂತೆ ರಾಜ್ಯಾಧ್ಯಕ್ಷರಲ್ಲಿ ಬೇಡಿಕೆ ಇಟ್ಟರು ಆದರೆ ಅದು ನೆರವೇರದೆ ಇದ್ದಾಗ ಬೇರೆ ದಾರಿ ಕಾಣದೆ ರಾಜಿನಾಮೆ ನೀಡುತ್ತಿದ್ದಾರೆ. ಅಲ್ಲದೆ ಪಕ್ಷಕ್ಕೆ ರಾಜೀನಾಮೆ ನೀಡಿರುವ ನಾಯಕರು ಪಕ್ಷ ತೊರೆಯುವುದರಿಂದ ಪಕ್ಷಕ್ಕೆ ಯಾವುದೇ ರೀತಿಯ ನಷ್ಟವಿಲ್ಲ ಏಕೆಂದರೆ ಇವರೆಲ್ಲ ಬೇರೆ ಪಕ್ಷಗಳಿಂದ ವಲಸೆ ಬಂದವರೇ ಹೊರತು ಪಕ್ಷದಲ್ಲಿನ ಮೂಲ ಕಾರ್ಯಕರ್ತರಾಗಲೀ ನಾಯಕರಾಗಲೀ ಪಕ್ಷ ತೊರೆದಿಲ್ಲ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಷ್ಟ್ರೀಯ ಸಮಿತಿ ಸದಸ್ಯ ಹೈದರ್ ಪರ್ತಿಪಾಡಿ, ಮನಪಾ ಸದಸ್ಯ ಅಝೀಝ್ ಕುದ್ರೋಳಿ, ಜಿಲ್ಲಾ ಉಪಾಧ್ಯಕ್ಷ ರಾಮಕೃಷ್ಣ ಶೆಟ್ಟಿ, ಗೋಪಾಲಕೃಷ್ಣ ಅತ್ತಾವರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುನೀರ್ ಮುಕ್ಕಚ್ಚೇರಿ, ಶ್ರೀನಿವಾಸ ಆಳ್ವ ಹಾಗೂ ಧನರಾಜ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English