ಸುರತ್ಕಲ್ : ರಾಷ್ಟ್ರೀಯ ಹೆದ್ದಾರಿ 66 ಎನ್‌ಐಟಿಕೆ ಬಳಿ ಇರ್ಕಾನ್ ಸಂಸ್ಥೆಯು ನಿರ್ಮಿಸಲು ಉದ್ದೇಶಿಸಿರುವ ಟೋಲ್ ಗೇಟ್ ಸಂಗ್ರಹ ಕೇಂದ್ರಕ್ಕೆ ಎನ್‌ಐಟಿಕೆ ಹಾಗು ಸುರತ್ಕಲ್ ನಾಗರೀಕ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಬುಧವಾರ ಸುರತ್ಕಲ್ ಬಂದ್‌ಗೆ ಕರೆ ನೀಡಲಾಗಿದೆ.
ಎನ್‌ಐಟಿಕೆ ಬಳಿ ಶಾಲೆಗಳು ಹಾಗು ಇಂಜಿನಿಯರಿಂಗ್ ಕಾಲೇಜು, ಕ್ಯಾಂಪಸ್ ಇರುವುದರಿಂದ ವಾಹನಗಳ ಸಾಲುಗಳು, ಅವುಗಳ ಕರ್ಕಶ ಶಬ್ದಗಳು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧಕ್ಕೆ ಉಂಟಾಗುವುದಲ್ಲದೆ, ಸುರಕ್ಷತೆಗೂ ಅಡ್ಡಿ ಉಂಟಾಗಬಹುದು, ಅಲ್ಲದೆ ಟೋಲ್‌ಗೇಟ್ ನಿರ್ಮಾಣಕ್ಕೆ ಕನಿಷ್ಟ ಆರು ಲೇನ್‌ಗಷ್ಟು ಜಾಗದ ಅವಶ್ಯಕತೆ ಇದ್ದು . ಅಗ್ನಿಶಾಮಕ, ಆ್ಯಂಬುಲೆನ್ಸ್ ಸೇರಿದಂತೆ ತುರ್ತು ವಾಹನಗಳ ಆಗಮನ ನಿರ್ಗಮನಕ್ಕೆ ವಿಶೇಷ ದ್ವಾರ ಬೇಕಾಗುತ್ತದೆ. ಆದರೆ ಎನ್‌ಐಟಿಕೆ ಬಳಿ ಇಷ್ಟು ಸ್ಥಳಾವಕಾಶ ವಿಲ್ಲ ಮಾತ್ರವಲ್ಲ ಮ.ನ.ಪಾ ವ್ಯಾಪ್ತಿಯಲ್ಲಿ ಟೋಲ್‌ಗೇಟ್ ನಿರ್ಮಿಸಬಾರದು ಎಂಬ ಕಾನೂನು ಇರುವುದರಿಂದ ನಿರ್ಮಿಸಲು ಸಾಧ್ಯವಿಲ್ಲ, ನಿರ್ಮಿಸಲು ಬಿದುವುದಿಲ್ಲ ಎಂದು ನಾಗರೀಕ ಸಮಿತಿ ಎಚ್ಚರಿಸಿತು.
ಕಳೆದ ಮೂರು ದಿನಗಳಿಂದ ಈ ಪ್ರದೇಶದಲ್ಲಿ ಅಧಿಕಾರಿಗಳು ಹಾಗು ನಾಗರೀಕರ ನಡುವೆ ತೀವ್ರ ವಾಗ್ವಾದ ನಡೆಯುತ್ತಿದ್ದು ಮಂಗಳವಾರ ಅಧಿಕಾರಿಗಳು ಪೊಲೀಸ್ ರಕ್ಷಣೆಯೊಂದಿಗೆ ಭೇಟಿ ನೀಡಿದಾಗ ಅಧಿಕಾರಿಗಳು ಹಾಗು ಸ್ಥಳೀಯರ ನಡುವೆ ಮಾತಿನ ಚಕಮಕಿ ಏರ್ಪಟಿತು. ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ಸಹಾಯಕ ಕಮೀಷನರ್ ಸದಾಶಿವ ಪ್ರಭು ಹಾಗು ತಹಶೀಲ್ದಾರ್ ರವಿಚಂದ್ರ ನಾಯಕ್ ಮತ್ತು ನಾಗರಿಕ್ಕರ ನಡುವೆ ಮಾತುಕತೆ ನಡೆದರು ಟೋಲ್ ಗೇಟ್ ಗೆ ಸ್ಪಷ್ಟ ವಿರೋಧ ವ್ಯಕ್ತವಾಯಿತು.
ಟೋಲ್ ಗೇಟ್ ವಿರೋಧಿಸಿ ಇಂದು ಸ್ವಯಂ ಬಂದ್ ಗೆ ಕರೆ ನೀಡಲಾಗಿದ್ದು, ಈ ಸ್ಥಳದಲ್ಲಿ ಪ್ರತಿಭಟನೆ ನಡೆಯಲಿದೆ.
Click this button or press Ctrl+G to toggle between Kannada and English