ಸುರತ್ಕಲ್ : ಸುರತ್ಕಲ್ ನಾಗರಿಕ ಹಿತರಕ್ಷಣೆ ಸಮಿತಿ ಆಶ್ರಯದಲ್ಲಿ ಎನ್‌ಐಟಿಕೆ ಬಳಿ ಸ್ಥಾಪಿಸಲು ಉದ್ದೇಶಿಸಿರುವ ಟೋಲ್ ಗೇಟ್ ಕೇಂದ್ರ ವಿರೋಧಿಸಿ ಬುಧವಾರ ನಡೆದ ಬಂದ್‌ಗೆ ಸುರತ್ಕಲ್ ಪರಿಸರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಯಿತು.
ಸುರತ್ಕಲ್‌ನಿಂದ ಎನ್‌ಐಟಿಕೆ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸಿದ್ದು, ಹೋಟೆಲ್ ಗಳು, ಅಂಗಡಿ ಮುಗ್ಗಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚುವ ಮೂಲಕ ಬಂದ್ ಗೆ ಉತ್ತಮ ಬೆಂಬಲ ವ್ಯಕ್ತವಾಯಿತು.
ಒಂದು ಟೋಲ್‌ಗೇಟ್‌ನಿಂದ ಇನ್ನೊಂದಕ್ಕೆ 60 ಕಿ.ಮೀ. ಅಂತರವಿರಬೇಕು ಎಂಬ ನಿಯಮಾವಳಿ ಇದೆ, ಅಲ್ಲದೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇದಕ್ಕೆ ಅವಕಾಶವಿಲ್ಲ. ಅಲ್ಲದೇ ಈಗಾಗಲೇ ಬ್ರಹ್ಮರಕೂಡ್ಲುವಿನಲ್ಲಿ ಅರಂಭಿಸಿರುವ ಟೋಲ್ ಗೇಟ್‌ನಿಂದ ಇಲ್ಲಿಗೆ 32 ಕಿ.ಮೀ. ಮಾತ್ರ ದೂರವಿರುವುದರಿಂದ ಇಲ್ಲಿ ಅರಂಭಿಸಲುದ್ದೇಶಿರುವ ಕೇಂದ್ರ ಪೂರ್ಣ ಅಕ್ರಮ ಈ ಯೋಜನೆ ಕೈಬಿಡುವ ತನಕ ಹೋರಾಟ ಮುಂದುವರಿಸಲಾಗುವುದು ಎಂದು ಪ್ರತಿಭಟನಾ ಸಭೆಯಲ್ಲಿ ನಿರ್ಧರಿಸಲಾಯಿತು.
ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಹೊಸಬೆಟ್ಟು, ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಕಾರ್ಪೊರೇಟರ್ ರೇವತಿ ಪುತ್ರನ್, ಸುಮಿತ್ರ ಕೆ., ಆಯಾಝ್, ಅಶೋಕ್ ಶೆಟ್ಟಿ, ಗುಣಶೇಖರ್ ಶೆಟ್ಟಿ, ಪ್ರತಿಭಾ ಆರ್. ಕುಳಾಯಿ, ಮಾಜಿ ಕಾರ್ಪೊರೇಟರ್ ಹರೀಶ್ ಕೆ. ಸುರತ್ಕಲ್, ಉದ್ಯಮಿಗಳಾದ ವೈ. ರಮಾನಂದ ರಾವ್, ಮಹಾಬಲ ಪೂಜಾರಿ ಕಡಂಬೋಡಿ, ಡಾ. ಇಬ್ರಾಹಿಂ, ಧನರಾಜ್, ಟಿ. ಎನ್. ರಮೇಶ್,. ನ್ಯಾಯವಾದಿ ಟಿ.ಎನ್. ರಾಘವೇಂದ್ರ ನೇತೃತ್ವ ವಹಿಸಿದ್ದರು.
ಪ್ರತಿಭಟನೆಯ ವೇಳೆ ಬಿಗು ಪೊಲೀಸ್ ಬಂದೋಬಸ್ತ್ ನ್ನು ಏರ್ಪಡಿಸಲಾಗಿತ್ತು.
Click this button or press Ctrl+G to toggle between Kannada and English