ಕಾರ್ಯಕರ್ತರು ಪಾಂಡವರ ರಥದ ಸಾರಥಿಗಳಾಗಿ ಪಕ್ಷವನ್ನು ಮುನ್ನಡೆಸಲಿದ್ದಾರೆ : ಪ್ರಹ್ಲಾದ್ ಜೋಶಿ

2:00 PM, Saturday, March 30th, 2013
Share
1 Star2 Stars3 Stars4 Stars5 Stars
(No Ratings Yet)
Loading...

BJP samavesha ಮಂಗಳೂರು : ಬಿಜೆಪಿಯೊಳಗೆ  ಜಗಳವಾಡಿದವರಾರೂ ಈಗ ಬಿಜೆಪಿಯಲ್ಲಿಲ್ಲ,  ಅವರ ಬಗ್ಗೆ ಯಾರೂ ಚಿಂತಿಸುವುದು ಬೇಡ,  ಹಳೆಯದನ್ನು ಕ್ಷಮಿಸಿ, ನಮಗೆ ಮತ ನೀಡಿ ಎಂದು ಮತದಾರ ಬಂಧುಗಳಲ್ಲಿ ವಿನಂತಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಕಾರ್ಯಕರ್ತರಿಗೆ ಕರೆ ನೀಡಿದರು. ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು.

BJP samavesha ಜಗದೀಶ್ ಶೆಟ್ಟರ್, ಈಶ್ವರಪ್ಪ, ಆರ್. ಅಶೋಕ್, ಡಿ.ವಿ. ಸದಾನಂದ ಗೌಡ, ಪ್ರಹ್ಲಾದ ಜೋಶಿ ಹೀಗೆ ಪಂಚ ಪಾಂಡವರ ನೇತೃತ್ವದ ಬಿಜೆಪಿ ಯು ವಿಒಧಾನಸಭಾ ಚುನಾವಣೆಯನ್ನು ಎದುರಿಸಲು ಸಿದ್ದವಾಗಿ ನಿಂತಿದೆ. ಸಾವಿರಾರು ಕಾರ್ಯಕರ್ತರು ಪಾಂಡವರ ರಥದ ಸಾರಥಿಗಳಾಗಿ ಪಕ್ಷವನ್ನು ಮುನ್ನಡೆಸಲಿದ್ದಾರೆ. ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ ಮುಂದಿನ ಲೋಕಸಭಾ ಚುನಾವಣೆಗೆ ಇದು ಸೆಮಿಫೈನಲ್ ಇದ್ದಂತೆ. ಅದಕ್ಕಾಗಿ ಸಿದ್ಧರಾಗಿ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

ಮಾಜಿ ಮುಖ್ಯ ಮಂತ್ರಿ ಡಿ. ವಿ. ಸದಾನಂದ ಗೌಡ ಮಾತನಾಡಿ,  ಕಾಂಗ್ರೆಸ್ ನ 50 ವರ್ಷದ ಸಾಧನೆ  ಬಿಜೆಪಿಯು  ಕೇವಲ ೫ ವರ್ಷಗಳಲ್ಲಿ ಈ ಸಾಧನೆಯನ್ನು ಮಾಡಿದೆ. ಜನಾರ್ದನ ಪೂಜಾರಿ 50 ವರ್ಷಗಳ ಕಾಂಗ್ರೆಸ್ ಸಾಧನೆ ಹೇಳಿದರೆ, ನಮ್ಮ ಶ್ರೀನಿವಾಸ ಪೂಜಾರಿ ಐದು ವರ್ಷಗಳ ಬಿಜೆಪಿ ಸಾಧನೆ ಹೇಳುತ್ತಾರೆ. ವೀರಪ್ಪ ಮೊಯ್ಲಿ ಸಾಧನೆ ಹೇಳಲಿ. ಅದಕ್ಕೆ ಉತ್ತರ ನಳಿನ್ ಕುಮಾರ್ ಕಟೀಲ್ ಹೇಳುತ್ತಾರೆ. ಸಿದ್ಧರಾಮಯ್ಯರು ಹೇಳುವ ಸಾಧನೆಗೆ ಆರ್. ಅಶೋಕ್ ಉತ್ತರಿಸುತ್ತಾರೆ ಎಂದರು.

BJP samaveshaಉಪಮುಖ್ಯಮಂತ್ರಿ ಆರ್. ಅಶೋಕ್ ಮಾತನಾಡಿ, ಕೇಂದ್ರ ಸರಕಾರ ಕೋಮಾ ಸ್ಥಿತಿಯಲ್ಲಿದೆ.  ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಭಯೋತ್ಪಾದನೆ, ಅತ್ಯಾಚಾರಿಗಳು ಹೆಚ್ಚಾಗಿದ್ದಾರೆ. ಜೆಡಿಎಸ್‌ ಅಪ್ಪಧಿ-ಮಕ್ಕಳ ಪಕ್ಷವಾಗಿದ್ದು, ಕಾಂಗ್ರೆಸ್‌ ಕುಟುಂಬದ ಆಶ್ರಯದಲ್ಲಿ ಬಾಳುವ ಪಕ್ಷವಾಗಿದೆ. ಆದರೆ ಬಿಜೆಪಿ, ಕಾರ್ಯಕರ್ತರಿಂದ ಬದುಕುತ್ತಿರುವ ಪಕ್ಷವಾಗಿದೆ ಎಂದರು.

ಶಾಸಕರಾದ ಎನ್‌. ಯೋಗೀಶ್‌ ಭಟ್‌, ಕೃಷ್ಣ ಪಾಲೆಮಾರ್‌, ಎಸ್‌. ಅಂಗಾರ, ಮಲ್ಲಿಕಾ ಪ್ರಸಾದ್‌, ವಿಧಾನ ಪರಿಷತ್‌ ಸದಸ್ಯರಾದ ಮೋನಪ್ಪ ಭಂಡಾರಿ, ಕ್ಯಾ| ಗಣೇಶ್‌ ಕಾರ್ಣಿಕ್‌, ಪಕ್ಷದ ಪ್ರಮುಖ ನಾಯಕರಾದ ಸುಲೋಚನಾ ಜಿ.ಕೆ. ಭಟ್‌, ಕೊರಗಪ್ಪ ನಾೖಕ್‌, ಗಂಗಾಧರ ಗೌಡ, ರುಕ್ಮಯ ಪೂಜಾರಿ, ಪ್ರಭಾಕರ ಬಂಗೇರ, ಜಯರಾಂ ಶೆಟ್ಟಿ, ಬಾಕಿಲ ಹುಕ್ರಪ್ಪ, ಬಾಲಕೃಷ್ಣ ಭಟ್‌, ಪ್ರತಾಪ್‌ಸಿಂಹ ನಾಯಕ್‌ ಮುಂತಾದವರು ಉಪಸ್ಥಿತರಿದ್ದರು.

ಈ ಸಮಾವೇಶದಲ್ಲಿ  ಬಿಜೆಪಿ ಯಿಂದ ರೂರವಾಗಿ ಜೆಡಿಎಸ್ ಸೇರಿದ್ದ ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡರು.

BJP samavesha

BJP samavesha

BJP samavesha

BJP samavesha

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English