ಮಂಗಳೂರು: ಜಿಲ್ಲಾ ಸಶಸ್ತ್ರ ಮತ್ತು ಪೊಲೀಸ್ ಇಲಾಖೆಯ ವತಿಯಿಂದ ಮಂಗಳೂರು ಪೊಲೀಸ್ ಮುಖ್ಯ ಕಛೇರಿಯ ಮುಂಭಾಗದಲ್ಲಿ ಇಂದು ಬೆಳಿಗ್ಗೆ ಪೊಲೀಸ್ ಸಂಸ್ಮರಣಾ ದಿನಾಚರಣೆಯನ್ನು ಆಚರಿಸಲಾಯಿತು.
ಕರ್ತವ್ಯದಲ್ಲಿರುವಾಗಲೇ ತಮ್ಮ ಪ್ರಾಣತೆತ್ತ, ಸಮಾಜದ ಹಿತಕ್ಕಾಗಿ ದುಡಿದ ಹುತಾತ್ಮರನ್ನು ಪ್ರತಿವರ್ಷ ನೆನಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹುತಾತ್ಮರಿಗೆ ಗೌರವ ಸಲ್ಲಿಸಿದ ಬಳಿಕ ಹೇಳಿದರು.
ಹುತಾತ್ಮ ಪೊಲೀಸ್ರಿಗೆ ವರ್ಷಕ್ಕೊಮ್ಮೆ ಗೌರವ ಸಲ್ಲಿಸುವ ಬದಲು, ಅವರಿಗೆ ಗುಡಿ ಕಟ್ಟಿ ನಿತ್ಯ ಗೌರವ ಸಲ್ಲಿಸುವಂತಾಗಬೇಕು ಎಂದು ಜಿಲ್ಲಾ ಎಸ್. ಸುಬ್ರಹ್ಮಣ್ಯೇಶ್ವರ ರಾವ್ ಹೇಳಿದರು.
ಪರೇಡ್, ಕವಾಯತ್ ಹಾಗೂ ಕುಶಾಲು ತೋಪುಗಳನ್ನು ಸಿಡಿಸುವ ಮೂಲಕ ಹುತಾತ್ಮ ಪೊಲೀಸ್ರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಪರೇಡ್ ನ್ನು ಗುರುಪ್ರಸಾದ್ ನೇತೃತ್ವದಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ರಾಘವೇಂದ್ರ ನಡೆಸಿಕೊಟ್ಟರು.
ಮಂಗಳೂರು ಶಾಸಕ ಎನ್ ಯೋಗೀಶ್ ಭಟ್, ವಿಧಾನ್ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಜಿಲ್ಲಾ ಸಶಸ್ತ್ರ ನ್ಯಾಯಾಲಯದ ನ್ಯಾಯಾದೀಶ ದೇಶಪಾಂಡೆ, ಎಂ.ಆರ್.ಪಿ.ಎಲ್ ನ ಉಪ ನಿರ್ದೇಶಕರಾದ ಲಕ್ಷ್ಮಿ ಕುಮಾರನ್, ಐಜಿಪಿ ಅಲೋಕ್ ಮೋಹನ್ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English
November 24th, 2011 at 09:24:03
n9ZmuO oljjqliwujuy, [url=http://ydcpksmevuqa.com/]ydcpksmevuqa[/url], [link=http://yefiyfxdzebu.com/]yefiyfxdzebu[/link], http://oliryjxzzvjq.com/
November 9th, 2011 at 12:32:59
H7oCNX jnujcywwkvbz, [url=http://xiebmpeqnqge.com/]xiebmpeqnqge[/url], [link=http://qxsggdtmeufe.com/]qxsggdtmeufe[/link], http://ndfwxzoqrcou.com/