ಕುಂದಾಪುರ : ಕುಂದಾಪುರ ಸಮೀಪದ ಅಂಕದಕಟ್ಟೆ ಎಂಬಲ್ಲಿ ಸುಮತಿ ಎಂಬುವವರಿಗೆ ಸೇರಿದ ಮನೆಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಅಗ್ನಿ ದುರಂತದಿಂದಾಗಿ ಮನೆ ಹಾಗು ಮನೆಯೊಳಗಿನ ವಸ್ತುಗಳು ಸಂಪೂರ್ಣ ಹತ್ತಿ ಉರಿದಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಸುಮತಿ ಎಂಬುವವರು ಈ ಮನೆಯಲ್ಲಿ ಅವರ ತಮ್ಮ ತಮ್ಮಂದಿರಾದ ರವಿಕುಮಾರ್, ಪ್ರತಾಪ್ ರೊಂದಿಗೆ ವಾಸವಾಗಿದ್ದು ರಾತ್ರಿ ೧.೩೦ ರ ಸುಮಾರಿಗೆ ವಸ್ತುಗಳು ಬೀಳುವ ಸದ್ದು ಕೇಳಿ ಮನೆಮಂದಿ ಎಚ್ಚರಗೊಂಡಿದ್ದಾರೆ. ಆದರೆ ಆ ವೇಳೆಗಾಗಲೇ ಬೆಂಕಿ ಹತ್ತಿ ಉರಿಯುತ್ತಿದ್ದು ಏನೂ ಮಾಡಲು ತೋಚದಂತಾದ ಮನೆಮಂದಿ ಅಕ್ಕಪಕ್ಕದ ಮನೆಯವರನ್ನು ಕರೆದಿದ್ದಾರೆ. ಕೂಡಲೇ ಸ್ಥಳಿಯರು ಆಗಮಿಸಿ ನೀರು ಹಾಯಿಸುವ ಮೂಲಕ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.
ಸ್ಥಳೀಯರು ಕೂಡಲೇ ಕುಂದಾಪುರ ಅಗ್ನಿಶಾಮಕಕ್ಕೆ ವಿಷಯ ತಿಳಿಸಿದ್ದು, ಸಿಬ್ಬಂಧಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾದರು. ಆದೆರೆ ಈ ವೇಳೆಗಾಗಲೇ ಬೆಂಕಿ ಮನೆ ತುಂಬ ಸಂಪೂರ್ಣ ಆವರಿಸಿದ್ದು ಮನೆಯೊಳಗಿನ ಪಾತ್ರೆ, ಒಡವೆ, ದಾಖಲೆ ಪತ್ರ ಸೇರಿದಂತೆ ಎಲ್ಲವು ಬೆಂಕಿಗೆ ಆಹುತಿಯಾಗಿತ್ತು. ವಸ್ತುಗಳು ಹಾಗೂ ಮನೆಯೂ ಸೇರಿದಂತೆ ಅಂದಾಜು ೧೦ ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ.
ಕೋಟೇಶ್ವರ ಪಂಚಾಯತ್ ಗ್ರಾಮ ಲೆಕ್ಕಿಗರಾದ ಜಗದೀಶ್, ಕಂದಾಯ ಅಧಿಕಾರಿ ಆನಂದ ದಾಮ್ಲೆ, ಗ್ರಾಮ ಸಹಾಯಕ ಕ್ರಷ್ಣ, ಕುಂದಾಪುರ ಆರೋಗ್ಯ ಅಧಿಕಾರಿ ಡಾ. ರಾಮರಾವ್ ಸ್ಥಳಕ್ಕೆ ಆಗಮಿಸಿ ನಷ್ಟದ ಬಗ್ಗೆ ಪರಿಶೀಲಿಸಿ ಪರಿಹಾರದ ಭರವಸೆ ನೀಡಿದರು. ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
Click this button or press Ctrl+G to toggle between Kannada and English