`ಅಂದದ ಮನೆಗೊಂದು ಚಂದದ ಬುಟ್ಟಿ,

8:49 PM, Friday, October 22nd, 2010
Share
1 Star2 Stars3 Stars4 Stars5 Stars
(No Ratings Yet)
Loading...

ಅಂದದ ಮನೆಗೊಂದು ಚಂದದ ಬುಟ್ಟಿಮಂಗಳೂರು:  ಯಂತ್ರಗಳಿಗೆ ಜೋತುಬೀಳುವ ಈಗಿನ ಸಮುದಾಯ ಕರಕುಶಲ ವಸ್ತುಗಳ ತಯಾರಿಯನ್ನು ಮರೆತು ಬಿಟ್ಟಿದ್ದಾರೆ. ಗ್ರಾಮೀಣ ಮಟ್ಟದಿಂದ ಉಗಮವಾದ ಗುಡಿಕೈಗಾರಿಕೆಗಳು ಈಗ ವಿರಳವಾಗುತ್ತಿದೆ. ಎಲ್ಲೆಂದರಲ್ಲಿ ಯಾಂತ್ರೀಕೃತ ವಸ್ತುಗಳು ಮಾರುಕಟ್ಟೆಗೆ ಬರುತ್ತಿದೆ.
ಕೈ ಕೆಲಸದಿಂದಲೇ ಬುಟ್ಟಿ ತಯಾರಿಸುವ ಆಂದ್ರದ ನಾಲ್ಕು ಜನ ಯುವಕರು ಮಂಗಳೂರಿನ ಲೇಡಿಹಿಲ್ ಬಳಿ ರಸ್ತೆಯ ಪಕ್ಕದಲ್ಲಿ ಬಗೆಬಗೆಯ ಬುಟ್ಟಿಗಳನ್ನು ಯಂತ್ರಗಳು ತಯಾರಿಸುವ ಕೆಲಸಕ್ಕಿಂತ ಅಚ್ಚುಕಟ್ಟಾಗಿ ಮಾಡಿ ಮಾರಾಟ ಮಾಡುತ್ತಿದ್ದಾರೆ.

ಅಂದದ ಮನೆಗೊಂದು ಚಂದದ ಬುಟ್ಟಿ
ಜಾಮಿನಿ ಬೆತ್ತ, ನಾಡಿ ಬೆತ್ತಗಳ ಜೊತೆಗೆ ಪ್ಲಾಸ್ಟಿಕ್ ವಯರ್ಗಳನ್ನು ಬಳಸಿ ಮೂರರಿಂದ ನಾಲ್ಕು ದಿನಗಳಲ್ಲಿ ಬಗೆ ಬಗೆಯ ಬುಟ್ಟಿಗಳನ್ನು ತಯಾರಿಸುವ ಕಾಯಕ ಈ ಯುವಕರದ್ದು.

ಅಂದದ ಮನೆಗೊಂದು ಚಂದದ ಬುಟ್ಟಿ
ವೆಂಕಟೇಶ್, ಅನಿಲ್ ಕಮಾರ್, ಸೀನು, ರವೀಂದ್ರ ನಾಲ್ಕು ಜನ ಸೇರಿ ಹೈದರಾಬಾದಿನಿಂದ ತರಿಸಿದ ಬೆತ್ತಗಳಿಂದ  ತಮ್ಮ ಕೈಚಳಕ ಉಪಯೋಗಿಸಿ ಬುಟ್ಟಿಗಳಿಗೆ ಆಕಾರ ನೀಡುತ್ತಾರೆ. ಇದನ್ನು 200 ರಿಂದ 4000 ವರೆಗಿನ ಬೆಲೆಗೆ ಮಾರಾಟಮಾಡುತ್ತಾರೆ, ಬಿಳಿ ಬಣ್ಣದ ಬೆತ್ತದ ಜೊತೆಗೆ ಕೇಸರಿ, ಬಿಳಿ, ಹಸಿರು ಬಣ್ಣದ ವಯರ್ಗಳನ್ನು ಸೇರಿಸಿ ಅಲಂಕಾರಿಕ ಬುಟ್ಟಿಗಳು, ಹೂದಾನಿಗಳು, ಹೂಜಿ ಮಾದರಿಯ ಬುಟ್ಟಿಗಳನ್ನು ತಯಾರಿ ಮಾಡುತ್ತಾರೆ.

ಚಿತ್ರಗಳು : ಸುರೇಶ್ ವಾಮಂಜೂರ್

ಅಂದದ ಮನೆಗೊಂದು ಚಂದದ ಬುಟ್ಟಿ
ಆಂದ್ರದಿಂದ ಮೈಸೂರಿಗೆ ಹೋಗಿ ವ್ಯಾಪಾರ ಮುಗಿಸಿ, ಅಲ್ಲಿಂದ ಮಂಗಳೂರಿಗೆ ಬಂದಿರುವುದಾಗಿ ಯುವಕರು ಹೇಳುತ್ತಾರೆ. ಮಂಗಳೂರಿನ ಗ್ರಾಹಕರು ಬುಟ್ಟಿಗಳನ್ನು ಇಷ್ಟಪಡುತ್ತಾರೆ. ಇಲ್ಲಿನ ಗ್ರಾಹಕರು ನಮ್ಮ ಶ್ರಮಕ್ಕೆ ಚೌಕಾಸಿಮಾಡದೆ ಬೆಲೆಕೊಡುತ್ತಾರೆ ಎಂದು ಬುಟ್ಟಿ ಮಾರುವ ಯುವಕರು ಹೇಳುತ್ತಾರೆ.

ಅಂದದ ಮನೆಗೊಂದು ಚಂದದ ಬುಟ್ಟಿ

ಅಂದದ ಮನೆಗೊಂದು ಚಂದದ ಬುಟ್ಟಿ

ಅಂದದ ಮನೆಗೊಂದು ಚಂದದ ಬುಟ್ಟಿ

ಅಂದದ ಮನೆಗೊಂದು ಚಂದದ ಬುಟ್ಟಿ

ಅಂದದ ಮನೆಗೊಂದು ಚಂದದ ಬುಟ್ಟಿ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English