ಕಾರ್ಯಾಚರಣೆ ವೇಳೆ ಮೃತಪಟ್ಟ ಪೇದೆ ರಾಜಪ್ಪ ರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ

11:38 AM, Saturday, April 6th, 2013
Share
1 Star2 Stars3 Stars4 Stars5 Stars
(No Ratings Yet)
Loading...

caonstable Rajappa ಮಂಗಳೂರು : ಮುಲ್ಕಿ ಠಾಣಾ ವ್ಯಾಪ್ತಿಯ ಬಪ್ಪನಾಡು ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ ಮೃತಪಟ್ಟ ಮುಲ್ಕಿ ಠಾಣಾ ಸಿಬ್ಬಂದಿ ರಾಜಪ್ಪ(೩೦) ಅವರಿಗೆ ಶುಕ್ರವಾರ ಸಂಜೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಅಂತಿಮ ನಮನ ಸಲ್ಲಿಸಲಾಯಿತು.

ಈ ವೇಳೆ ಅವರ ಅಂತಿಮ ನಮನಕ್ಕೆ ಗರ್ಭಿಣಿ ಪತ್ನಿ ಹಾಗೂ ಮನೆಯವರು ಆಗಮಿಸಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಪಶ್ಚಿಮ ವಲಯ ಐಜಿಪಿ ಸೇರಿದಂತೆ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಹೂಗುಚ್ಛ ಅರ್ಪಿಸುವ ಮುಖಾಂತರ ಮೃತ ಪೇದೆಯ ಆತ್ಮಕ್ಕೆ ಚಿರಶಾಂತಿ ಕೋರಿದರು. ಕುಶಾಲ ತೋಪುಗಳನ್ನು ಹಾರಿಸುವುದರ ಮೂಲಕ  ಸರ್ಕಾರಿ ಮರ್ಯಾದೆ ಯೊಂದಿಗೆ ರಾಜಪ್ಪಗೆ ಅಂತಿಮ ನಮನ ಸಲ್ಲಿಸಲಾಯಿತು

ಸಾಗರ ರಕ್ಷಾ ಕವಚ ಕಾರ್ಯಾಚರಣೆ ನಿಮಿತ್ತ  ರಾ.ಹೆ ೬೬ ರ ಮುಲ್ಕಿ ಠಾಣಾ ವ್ಯಾಪ್ತಿಯ ಬಪ್ಪನಾಡು ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ ಉಡುಪಿ ಕಡೆಯಿಂದ ಮಂಗಳೂರನ ಕಡೆಗೆ ಅತಿ ವೇಗವಾಗಿ ಸಾಗಿಬಂದ ಲಾರಿಯನ್ನು ರಾಜಪ್ಪ ನಿಲ್ಲಿಸುವಂತೆ ಸೂಚನೆ ನೀಡಿದ್ದು, ಲಾರಿ ಚಾಲಕ ವೇಗವನ್ನು ಒಮ್ಮೆಲೆ ಜಾಸ್ತಿ ಮಾಡಿ ರಾಜಪ್ಪ ಅವರ ಮೇಲೆಯೇ ಚಲಾಯಿಸಿ ಪರಾರಿಯಾಗಿದ್ದ. ಈ ಅಪಘಾತದಿಂದ ಏನೂ ತೋಚದಂತಾದ ಸಿಬ್ಬಂದಿಗಳು ಲಾರಿಯ ನಂಬರನ್ನು ಕಲೆ ಹಾಕುಷ್ಟರಲ್ಲಿ ಲಾರಿ ಅಲ್ಲಿಂದ ಮರೆಯಾಗಿದೆ. ಇದರಿಂದ ಈ ಲಾರಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರಿಗೆ ತೊಡಕುಂಟಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English