ಮಂಗಳೂರು : ಆದಿನಾಥೇಶ್ವರ ಟ್ರಾನ್ಸ್‌ಪೋರ್ಟ್ ಕಂಪನಿಯ ಮ್ಯಾನೇಜರ್ ಪ್ರಶಾಂತ್ ಕೊಲೆ ಪ್ರಕರಣಕ್ಕೆ ಸಂಬಧಪಟ್ಟಂತೆ ಮಂಗಳೂರು ಗ್ರಾಮಾಂತರ ಇನ್‌ಸ್ಪೆಕ್ಟರ್ ಹಾಗೂ ಎಸಿಪಿ ಜಗನ್ನಾಥ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ.
ರವಿವಾರ ರಾತ್ರಿ ೧೧.೨೫ ರ ವೇಳೆಗೆ ಸುಮಾರು ಆರರಿಂದ ಏಳು ಮಂದಿಯ ಹಂತಕರ ತಂಡ ಪ್ರಶಾಂತ್ ಮೇಲೆ ಗುಂಡು ಹಾರಿಸಿ ಬಳಿಕ ಮಾರಕಾಸ್ತ್ರಗಳಿಂದ ಕಡಿದು ಪರಾರಿಯಾಗಿದೆ. ಕೊಲೆ ನಡೆದ ಸ್ಥಳಕ್ಕೆ ಬೆರಳಚ್ಚು ಹಾಗೂ ಶ್ವಾನದಳತಂಡ ಭೇಟಿ ನೀಡಿ ತನಿಖೆ ನಡೆಸಿದೆ. ಪೊಲೀಸರಿಗೆ ಆರೋಪಿಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ ಎನ್ನಲಾಗಿದೆ.
ಕೊಲೆಗೀಡಾದ ಪ್ರಶಾಂತ್ ಮೇಲೆ ಈವರೆಗೆ ಯಾವುದೇ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ ಆದರೆ ಇತ್ತೀಚೆಗೆ ಕೊಲೆಗೀಡಾದ ಸಂದರ್ಭ ಪೊಲೀಸರು ಈತನನ್ನು ಕರೆದು ವಿಚಾರಣೆ ನಡೆಸಿದ್ದರೆನ್ನಲಾಗಿದೆ. ಬಿಜೈ ರಾಜ ಸಹಚರರು ಈತನ ಮೇಲೆ ಕಣ್ಣಿಟ್ಟಿದ್ದರೆನ್ನಲಾಗಿದ್ದು ಇದಕ್ಕೆ ಪೂರಕವಾಗಿ ಪ್ರಶಾಂತ್ ಕೊಲೆ ಬಳಿಕ ಖಾಸಗಿ ಚಾನೆಲ್ ಒಂದಕ್ಕೆ ಭೂಗತ ಪಾತಕಿ ವಿಕ್ಕಿ ಯಾನೆ ವಿಜಯ್ ಶೆಟ್ಟಿ ಕರೆ ಮಾಡಿ ಪ್ರಶಾಂತ್ ಕೊಲೆ ಮಾಡಿದ್ದು ತನ್ನ ಸಹಚರರೆ ಎಂದದ್ದಾನೆ.
ಹಂತಕರು ಪ್ರಶಾಂತ್ ಮೇಲೆ ನಗರದ ವೆಲೆನ್ಸಿಯಾದ ಮಂಗಳಾ ಬಾರ್ ಎದುರು ಭೀಕರ ಹಲ್ಲೆ ನಡೆಸಿದ್ದು ಪ್ರಶಾಂತ್‌ನ ತಲೆ, ಕೈ, ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದ.
Click this button or press Ctrl+G to toggle between Kannada and English