ಮಂಗಳೂರು : ಸುಮಾರು 16 ಸಾವಿರ ಲೀಟರ್ ಅನಿಲವನ್ನು ತುಂಬಿಕೊಂಡ ಟ್ಯಾಂಕರ್ ವೊಂದು ಮಂಗಳೂರಿನನಿಂದ ಬೆಂಗಳೂರಿಗೆ ಸಾಗುತ್ತಿದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಇಂದು ಬೆಳಗ್ಗೆ ೯ ಗಂಟೆಗೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಪೆರ್ನೆ ಬಳಿ ನಡೆದಿದೆ.
ಟ್ಯಾಂಕರ್ ಉರುಳಿಬಿದ್ದ ಪರಿಣಾಮ ಅನಿಲ ಸೋರಿಕೆ ಉಂಟಾಗಿ ಬೆಂಕಿ ಹೊತ್ತಿಕೊಂಡು ಟ್ಯಾಂಕರ್‌ನಲ್ಲಿದ್ದ ಚಾಲಕ ಹಾಗೂ ಕ್ಲಿನರ್ ಬೆಂಕಿಗಾಹುತಿಯಾಗಿದ್ದಾರೆ. ಮಾತ್ರವಲ್ಲದೆ ಬೆಂಕಿ ರಾಷ್ಟ್ರೀಯ ಹೆದ್ದಾರಿ 75 ರ ಸುಮಾರು 20 ಕ್ಕೂ ಹೆಚ್ಚಿನ ಮನೆಗಳಿಗೆ ವ್ಯಾಪಿಸಿದೆ. ಘಟನೆಯಲ್ಲಿ ಟ್ಯಾಂಕರ್ ನ ಚಾಲಕ, ಕ್ಲೀನರ್ ಸಹಿತ ಮನೆಯಲ್ಲಿದ್ದ ಮಹಿಳೆಯೊಬ್ಬರು ಹಾಗೂ ಮಕ್ಕಳಿಬ್ಬರು ಬೆಂಕಿಗಾಹುತಿಯಾಗಿದ್ದಾರೆ. ಟ್ಯಾಂಕರ್ ಗೆ ಹೊತ್ತಿಕೊಂಡ ಬೆಂಕಿಯ ತೀವ್ರತೆ ವ್ಯಾಪಕವಾಗಿದ್ದು ಸುಮಾರು ೧ ಕಿಮೀ ವರೆಗಿನ ಕಟ್ಟಡ ಹಾಗು ಮನೆಗಳಲ್ಲಿದ್ದವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಂಚಾರ ವ್ಯಚಸ್ಥೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದು, ಪೊಲೀಸ್ ಹಾಗು ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಬೆಂಕಿಯ ತೀಕ್ಷ್ಣತೆ ವ್ಯಾಪಕವಾಗಿದ್ದು ಸಮೀಪಕ್ಕೂ ಹೋಗಲಾರದ ಪರಿಸ್ಥಿತಿ ಇದೆ.
Click this button or press Ctrl+G to toggle between Kannada and English