ಬಂಟ್ವಾಳ : ಕಾರಿಂಜೇಶ್ವರ ದೇವಸ್ಥಾನದ ಕೆರೆಯಲ್ಲಿ ಈಜಲೆಂದು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲದ ಘಟನೆ ಗುರುವಾರ ಮಧ್ಯಾಹ್ನನದ ವೇಳೆ ಸಂಭವಿಸಿದೆ. ಫಾರ್ಲ ನಿವಾಸಿಗಳಾದ ಥಾಮಸ್ ಮತ್ತು ಅರ್ಸಿಲ್ಲಾ ಡಿ ಮೆಲ್ಲೋ ದಂಪತಿ ಪುತ್ರ ಅಥ್ವಿನ್ ಡಿ ಮೆಲ್ಲೋ (20) ಮತ್ತು ಜಾನ್ ಹಾಗೂ ಲೀನಾ ಲಸ್ರಾದೊ ದಂಪತಿ ಪುತ್ರ ರೋಷನ್ ಲಸ್ರಾದೋ(17) ಮೃತಪಟ್ಟ ವಿದ್ಯಾರ್ಥಿಗಳಾಗಿದ್ದಾರೆ.
ಮಧ್ಯಾಹ್ನದ ವೇಳೆ ಕಾರಿಂಜೇಶ್ವರ ದೇವಸ್ಥಾನದ ಕೆರೆಗೆ ಈಜಲೆಂದು ಅಥ್ವಿನ್ ಡಿ ಮೆಲ್ಲೋ, ರೋಷನ್ ಲಸ್ರಾದೋ ಹಾಗು ಪ್ರಕಾಶ್ ವೇಗಸ್ ಈ ಮೂವರು ತೆರಳಿದ್ದರು. ಅಥ್ವಿನ್ ಮತ್ತು ರೋಷನ್ ಗೆ ಈಜಲು ತಿಳಿದಿರಲಿಲ್ಲ. ನೀರಿನಲ್ಲಿ ಆಡುತ್ತ ಕೆರೆಯ ಮಧ್ಯಭಾಗಕ್ಕೆ ತೆರಳಿದ ಇವರು ಈಜು ಬಾರದೇ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಕಂಡ, ಈಜು ಬರುತ್ತಿದ್ದ ಪ್ರಕಾಶ್ ವೇಗಸ್ ದಡ ಸೇರಿ ನೆರೆಹೊರೆಯವರನ್ನು ಕರೆದು ರಕ್ಷಣೆಗಾಗಿ ಮೊರೆ ಹೋದ. ಬಳಿಕ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾ ಚರಣೆ ನಡೆಸಿದರೂ ೪೫ ನಿಮಿಷಗಳ ಬಳಿಕ ಇಬ್ಬರ ಮೃತದೇಹಗಳು ಪತ್ತೆಯಾಗಿದೆ.
ಅಥ್ವಿನ್ ಡಿ ಮೆಲ್ಲೋ ಬಂಟ್ವಾಳದ ಕೆಪಿಟಿಯಲ್ಲಿ ಐಟಿಐ ವಿದ್ಯಾರ್ಥಿಯಾಗಿದ್ದು ಫಾರ್ಲ ಚರ್ಚ್‌ನ ಐಸಿವೈಎಂನ ಅಧ್ಯಕ್ಷರೂ ಆಗಿದ್ದರು.ರೋಷನ್ ಮೊಡಂಕಾಪುವಿನ ದೀಪಿಕಾ ಪಿ.ಯು ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ. ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Click this button or press Ctrl+G to toggle between Kannada and English