ಮಂಗಳೂರು : ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಟಿ. ಆರ್. ಜಗನ್ನಾಥ್ ನೇತೃತ್ವದ ಪಾಂಡೇಶ್ವರ ಪೊಲೀಸ್ ಠಾಣೆ ಮತ್ತು ಸಿಸಿಬಿ ಘಟಕದ ಇನ್ಸ್‌ಪೆಕ್ಟರ್‌ಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪ್ರಶಾಂತ್ (36) ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಆದಿನಾಥೇಶ್ವರ ಟ್ರಾನ್ಸ್‌ಪೊರ್ಟ್ ಕಂಪೆನಿಯ ಮ್ಯಾನೇಜರ್ ಕುಂಜತ್ತಬೈಲ್‌ನ ಪ್ರಶಾಂತ್ ನನ್ನು ಆರೋಪಿಗಳು ಎಪ್ರಿಲ್ 7 ರಂದು ರಾತ್ರಿ 11.25 ರ ವೇಳೆಗೆ ನಗರದ ವೆಲೆನ್ಸಿಯಾದ ಮಂಗಳಾ ಬಾರ್ ಬಳಿ ಮಾರಕಾಯುಧಗಳಿಂದ ಕಡಿದು ಕೊಲೆ ಮಾದಿದ್ದರು. ಆರೋಪಿಗಳಾದ ಜಪ್ಪಿನ ಮೊಗರು ತಂದೊಳಿಗೆ ಕೊಟ್ಯಪ್ಪಗುಡ್ಡೆಯ ಭವಾನಿ ಶಂಕರ ಯಾನೆ ಮನೋಜ್ ಯಾನೆ ಭವಾನಿ (32), ಕಾಸರಗೋಡು ಜಿಲ್ಲೆ ಉಪ್ಪಳ ಸಮೀಪದ ಸುಭಾಸ್ ನಗರದ (ಬೇಕೂರು) ಭವಿಷ್ ಯಾನೆ ಮುನ್ನ (24), ಕಲ್ಲಡ್ಕ ಗೋಳ್ತಮಜಲು ಗ್ರಾಮದ ಹೊಸೈಮಾರ್‌ನ ಪ್ರವೀಣ್ ಕೆ.ಪಿ. (24), ಆಕಾಶಭವನ, ಆನಂದನಗರದ ನವೀನ್ ಶೆಟ್ಟಿ ಯಾನೆ ಪಿಲಿ ನವೀನ (32) ನನ್ನು ಬಂಧಿಸಲಾಗಿದೆ.
ಬಿಜೈ ರಾಜ ಕೊಲೆಗೆ ಪ್ರತಿಕಾರವಾಗಿ ಪ್ರಶಾಂತ್ ನನ್ನು ಕೊಲೆ ಮಾಡಿರುವುದಾಗಿ ತಿಳಿದುಬಂದಿದ್ದು, ಆರೋಪಿಗಳು ಕೊಲೆಗೆ ಉಪಯೋಗಿಸಿದ್ದ ರಿವಾಲ್ವರ್, ತಲವಾರು ಮತ್ತು ಸಂಚಾರಕ್ಕೆ ಬಳಸಿದ್ದ ಕೆ.ಎ. 03- ಝಡ್ 6625 ಕ್ವಾಲಿಸ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ 8 ರಿಂದ 9 ಮಂದಿ ಭಾಗಿಯಾಗಿದ್ದಾರೆ. ಇನ್ನುಳಿದ ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತ ಮನೀಶ್ ಕರ್ಭೀಕರ್ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಡಿಸಿಪಿಗಳಾದ ಧರ್ಮಯ್ಯ ಮತ್ತು ಎಂ. ಮುತ್ತೂರಾಯ ಅವರು ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English