ಜಿಲ್ಲಾ ಕಾರಾಗೃಹ, ರಶೀದ ಮಲಬಾರಿಯಿಂದ ಕೈದಿ ಮೇಲೆ ಹಲ್ಲೆ

1:03 PM, Saturday, April 13th, 2013
Share
1 Star2 Stars3 Stars4 Stars5 Stars
(No Ratings Yet)
Loading...

Rashid Malbari, Muneer Ahamad ಮಂಗಳೂರು : ಮಂಗಳೂರಿನಲ್ಲಿ ಕಂಪ್ಯೂಟರ್ ಮತ್ತು ಎಲೆಕ್ರಾನಿಕ್ ಕಳವು ಗೈದ ಆರೋಪದ ಮೇಲೆ ಈ ಹಿಂದೆ ಪೊಲೀಸ್  ಮಾಹಿತಿದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮುನೀರ್ ಅಹ್ಮದ್ ಮೇಲೆ ಜಿಲ್ಲಾ ಕಾರಾಗೃಹದಲ್ಲಿ ರಶೀದ್ ಮಲಬಾರಿ ಮತ್ತು ಇತರರು  ಹಲ್ಲೆ ಮಾಡಿರುವ ಬಗ್ಗೆ ವರದಿಯಾಗಿದೆ.

ಪೊಲೀಸ್ ಇಲಾಖೆಗೆ ಮಾಹಿತಿದಾರನಾಗಿ ಸಹಕರಿಸುತ್ತಿದ್ದ ಮುನೀರ್ ಅಹ್ಮದ್ ಕಳ್ಳತನದ ಆರೋಪದ ಮೇಲೆ ಜಿಲ್ಲಾ ಕಾರಾಗೃಹದಲ್ಲಿದ್ದು ಈತನ ಮೇಲೆ ರಶೀದ ಮಲಬಾರಿ ಹಲ್ಲೆ ನಡೆಸಿದ್ದಾನೆ. ಪೊಲೀಸ್  ಕ್ರೈಮ್ ಬ್ರಾಂಚ್  ಆಗಾಗ ಜೈಲಿಗೆ ಭೇಟಿ  ನೀಡುತ್ತಿದ್ದು ಜೈಲಿನಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ  ಮುನೀರ್ ಅಹ್ಮದ್ ಮಾಹಿತಿ ನೀಡುತ್ತಾನೆ ಎಂದು ಸಂಶಯಗೊಂಡ  ಹಿನ್ನಲೆಯಲ್ಲಿ ಈತನ  ಮೇಲೆ ಶುಕ್ರವಾರ ಜಿಲ್ಲಾ ಕಾರಾಗೃಹದಲ್ಲಿ ಹಲ್ಲೆ ನಡೆಸಲಾಗಿದೆ.

ರಶೀದ ಮಲಬಾರಿ ಜೊತೆಗೆ ಮದೂರಿ ಸುಬ್ಬು ಮತ್ತು ಹೈದರ್ ಎಂಬ ಇನ್ನಿಬ್ಬರು ಮುನೀರ್ ಅಹ್ಮದ್ ಮೇಲೆ ಹಲ್ಲೆ ಮಾಡಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English