ಮಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಯೋಗೀಶ್ ಭಟ್, ಕಾಂಗ್ರೆಸ್ಸ್ ಅಭ್ಯರ್ಥಿ ಜೆ. ಆರ್. ಲೋಬೋ ನಾಮಪತ್ರ ಸಲ್ಲಿಕೆ

1:20 PM, Tuesday, April 16th, 2013
Share
1 Star2 Stars3 Stars4 Stars5 Stars
(No Ratings Yet)
Loading...

N Yogish Bhat files nominationಮಂಗಳೂರು : ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯೋಗೀಶ್ ಭಟ್ ಅವರು ಸೋಮವಾರ ಮಹಾನಗರ ಪಾಲಿಕೆಯಲ್ಲಿರುವ ಚುನಾವಣಾ ಕಚೇರಿಗೆ ಬಿಜೆಪಿ ಕಾರ್ಯಕರ್ತರೊಂದಿಗೆ ತೆರಳಿದ ಅವರು ನಾಮಪತ್ರ ಸಲ್ಲಿಸಿದರು.

ಐದನೇ ಬಾರಿ ಚುನಾವಣಾ ಕಣದಲ್ಲಿ ಭಾಗವಹಿಸುತ್ತಿರುವ ಬಿಜೆಪಿ ಅಭ್ಯರ್ಥಿ ಯೋಗೀಶ್ ಭಟ್ ಅವರು ತಮ್ಮ ಬೆಂಬಲಿಗರೊಂದಿಗೆ ಚೆಂಡೆ ವಾಧ್ಯ ಘೋಷಗಳೊಂದಿಗೆ ಮೆರೆವಣಿಗೆ ಮೂಲಕ  ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್,ನಿತಿನ್ ಕುಮಾರ್, ಶ್ರೀಕಾರ ಪ್ರಭು, ರಾಜ್ ಗೋಪಾಲ್ ರಾಯ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ  ಮಹಾನಗರ ಪಾಲಿಕೆಯಲ್ಲಿರುವ ಚುನಾವಣಾ ಕಚೇರಿಗೆ ನಾಮಪತ್ರ ಸಲ್ಲಿಸಲು ಆಗಮಿಸಿದ್ದ ಕಾಂಗ್ರೆಸ್ಸ್ ಅಭ್ಯರ್ಥಿ ಜೆ. ಆರ್. ಲೋಬೋ ಹಾಗು ಯೋಗೀಶ್ ಭಟ್ ಎದುರಾದ ಸಂದರ್ಭ ಪರಸ್ಪರರು ಶುಭ ಹಾರೈಸಿದರು.

JR Lobo files nominationಕಾಂಗ್ರೆಸ್ಸ್ ಅಭ್ಯರ್ಥಿ ಜೆ. ಆರ್. ಲೋಬೋ ನಾಮಪತ್ರ ಸಲ್ಲಿಸುವ ಮೊದಲು ಬಿಷಪ್‌ ಹೌಸ್‌, ಬಂದರ್‌ನ ಕೇಂದ್ರ ಜುಮ್ಮಾ ಮಸೀದಿ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ, ಬಳಿಕ ಅಳಕೆ ಮೈದಾನದಿಂದ ಮೆರವಣಿಗೆಯಲ್ಲಿ ಸಾಗಿ ಚುನಾವಣಾ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಶಾಸಕ ಯು.ಟಿ. ಖಾದರ್‌, ಮುಖಂಡರಾದ ಮಹಮ್ಮದ್‌ ಮಸೂದ್‌, ಇಬ್ರಾಹಿಂ ಕೋಡಿಜಾಲ್‌, ಐವನ್‌ ಡಿ’ಸೋಜಾ, ಕಳ್ಳಿಗೆ ತಾರನಾಥ ಶೆಟ್ಟಿ , ಕೆ. ಅಶ್ರಫ್‌, ಶಶಿಧರ ಹೆಗ್ಡೆ, ನವೀನ್‌ ಡಿ’ಸೋಜಾ, ಬಲರಾಜ ರೈ, ಸದಾಶಿವ ಉಳ್ಳಾಲ, ಲ್ಯಾನ್ಸಿಲಾಟ್‌ ಪಿಂಟೋ, ನಾಗೇಂದ್ರ ಕುಮಾರ್‌, ಮಿಥುನ್‌ ರೈ, ಭಾಸ್ಕರ ಮೊಲಿ, ಅರುಣ್‌ ಕ್ಯುವೆಲ್ಲೊ, ಡೆನ್ನಿಸ್‌ ಡಿಸಿಲ್ವ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English