ಮಂಗಳೂರು : ಮೈಸೂರಿನ ಸ್ವಯಂ ಸೇವಾ ಸಂಸ್ಥೆ ಯೊಂದು ನೀಡಿದ ಮಾಹಿತಿ ಆಧಾರದ ಮೇಲೆ ಬೆಂಗಳೂರಿನ ಸಿಐಡಿ ಪೊಲೀಸರು ಮಕ್ಕಳ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ನಗರದ ಕುಳಾಯಿ ಬಳಿ ಮಂಗಳವಾರ ಬಂದಿಸಿದ್ದಾರೆ. ಹಾಸನ ಜಿಲ್ಲೆಯ ತಾರಾ ಹಾಗು ಚಿಕ್ಕಮಗಳೂರಿನ ದೀಪಾ ಬಂಧಿತ ಆರೋಪಿಗಳಾಗಿದ್ದಾರೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ತಿರುಗಾಡುತ್ತಿದ್ದ ಶ್ವೇತಾ ಎಂಬ ಬಾಲಕಿಯನ್ನು ಮೈ ಸೂರಿನ ಸ್ವಯಂ ಸೇವಾ ಸಂಸ್ಥೆಯ ಸಿಬ್ಬಂದಿಗಳು ಸಂಸ್ಥೆಗೆ ಕರೆತಂದ ಸಂದರ್ಭ ಬಾಲಕಿಯು ಮಕ್ಕಳ ಕಳ್ಳಸಾಗಾಣಿಕೆ ಮಾಡುತ್ತಿದ್ದ ತಾರಾಳ ಬಗ್ಗೆ ಮಾಹಿತಿ ನೀಡಿದ್ದಾಳೆ. ಈ ಮಾಹಿತಿಯನ್ನು ಸ್ವಯಂ ಸೇವಾ ಸಂಸ್ಥೆ ಯು ಸಿಒಡಿ ಪೊಲೀಸರಿಗೆ ತಿಳಿಸಿದ್ದು ಮಾಹಿತಿಯನ್ನರಿತ ಪೊಲೀಸರು ಕುಳಾಯಿಯಲ್ಲಿರುವ ಮನೆ ಮೇಲೆ ದಾಳಿ ನಡೆಸಿ ಮಹಿಳೆಯನ್ನು ಬಂದಿಸಿದ್ದಾರೆ. ವಿಚಾರಣೆ ವೇಳೆ ಬೇರೆ ಬೇರೆ ಕಡೆಗಳಿಗೆ ಮಕ್ಕಳನ್ನು ಕಳುಹಿಸಿದ ಮಾಹಿತಿ ಲಭಿಸಿದ್ದು ಮಕ್ಕಳನ್ನು ಕೂಡಲೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಹಿಂದೆ ಬಾರಾ ಗರ್ಲ್ ಆಗಿ ಕೆಲಸ ನಿರ್ವಹಿಸುತ್ತಿದ್ದ ತಾರ ಅನೇಕ ಬಡ ಕುಟುಂಬಗಳ ಬಾಲಕಿಯರನ್ನು ಸಾಕಲೆಂದು ಕರೆತಂದು ನಂತರ ಮಕ್ಕಳನ್ನು ಈ ದಂಧೆಗೆ ದೂಡುತ್ತಿದ್ದಳು. ಈಕೆಯ ಬಗ್ಗೆ ಮಾಹಿತಿ ನೀಡಿದ್ದ ಶ್ವೇತಾ ತಾರಾಳ ಸಂಬಂಧಿಯ ಮಗಳೇ ಆಗಿದ್ದಾಳೆ. ರಕ್ಷಿಸಲ್ಪಟ್ಟಿರುವ ಮಕ್ಕಳನ್ನು ಮಂಗಳೂರಿನ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡುವುದಾಗಿ ತಿಳಿಸಲಾಗಿದೆ. ಸಿಐಡಿ ಮುಖ್ಯಸ್ಥ ಮುಖರ್ಜಿ, ಹಾಗೂ ಸುರತ್ಕಲ್ ಠಾಣೆ ಪೊಲೀಸರು ತನಿಖೆಯಲ್ಲಿ ಪಾಲ್ಗೊಂಡಿದ್ದು, ಈಕೆಗೆ ಸ್ಥಳೀಯ ಸುರತ್ಕಲ್ ಪೊಲೀಸರ ಬೆಂಬಲವಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದ್ದು, ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English