ದ.ಕ. ಬಸ್ಸು ಮಾಲಕರ ಸಂಘ ಹಾಗೂ ಕೆನರಾ ಬಸ್ಸು ಮಾಲಕರ ಸಂಘದಿಂದ ಹೆದ್ದಾರಿ ದುರಸ್ತಿಗೆ ಆಗ್ರಹ

9:52 PM, Monday, October 25th, 2010
Share
1 Star2 Stars3 Stars4 Stars5 Stars
(No Ratings Yet)
Loading...

ದ.ಕ. ಬಸ್ಸು ಮಾಲಕರ ಸಂಘ ಹಾಗೂ ಕೆನರಾ ಬಸ್ಸು ಮಾಲಕರ ಸಂಘಮಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಪಂಪುವೆಲ್ ನಿಂದ ತಲಪಾಡಿವರೆಗೆ ರಸ್ತೆಗಳಲ್ಲಿ ಭಾರಿ ಗಾತ್ರದ ಹೊಂಡಗಳು ಬಿದ್ದಿದ್ದು ರಸ್ತೆಗಳು ಹೆಚ್ಚು ಕಡಿಮೆ ಸಂಪೂರ್ಣ ಕೆಟ್ಟು ಹೋಗಿವೆ. ಮಾತ್ರವಲ್ಲದೆ ನೇತ್ರಾವತಿ ಸೇತುವೆ ಮೇಲಿನ ಕಾಂಕ್ರೀಟ್ ಅಲ್ಲಲ್ಲಿ ಹೊಂಡ ಬಿದ್ದು ಕಬ್ಬಿಣದ ರಾಡ್ಗಳು ಮೇಲೆ ಬಂದು ಮಳೆ ನೀರು ಕಾಂಕ್ರೀಟ್ನ ಒಳ ಭಾಗಕ್ಕೆ ಹರಿಯುತ್ತಿದ್ದು ಯಾವುದೇ ಸಂದರ್ಭದಲ್ಲಿ. ಸೇತುವೆ ಬಿರುಕು ಬಿದ್ದು ಅಪಾಯವಾಗುವ ಸಂಭವವಿದೆ ಎಂದು ಕೆನರಾ ಬಸ್ಸು ಮಾಲಕರ ಸಂಘದ ಅಧ್ಯಕ್ಷರಾದ ಶ್ರೀ ರಾಜವರ್ಮ ಬಲ್ಲಾಳ್ ಇಂದು ನಗರದ ವುಡ್ ಲ್ಯಾಂಡ್ಸ್ ಹೋಟೇಲಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಳಿಸಿದರು.
ಈಗಾಗಲೇ ನಿರಂತರ ಡಿಸೇಲ್ ದರ ಏರಿಕೆ, ಬಿಡಿ ಭಾಗಗಳು, ಟಯರ್, ರಬ್ಬರ್, ಆಯಿಲ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಬಸ್ಸು ನಿವರ್ಾಹಣ ವೆಚ್ಚ ವಿಪರೀತ ಜಾಸ್ತಿಯಾಗಿದ್ದು ಬಸ್ಸು ಮಾಲಕರು ಕಂಗಾಲಾಗಿರುವ ಈ ಸನ್ನಿವೇಶದಲ್ಲಿ ಛಿದ್ರಛಿದ್ರಗೊಂಡಿರುವಂತಹ ರಸ್ತೆಗಳಿಂದ ಬಸ್ಸುಗಳ ಸ್ಟ್ರಿಂಗ್ ಪ್ಟೇಟ್ ಗಳು ಹಾಗೂ ಟಯರುಗಳು ಹೌಸಿಂಗ್ ಬಸ್ಸಿನ ಹಿಂಭಾಗ ಹಾನಿಯಾಗುತ್ತದೆ. ಬಸ್ಸುಗಳು ಸಮಯಕ್ಕೆ ಸರಿಯಾಗಿ ತಲುಪುತ್ತಿಲ್ಲ ಎಂದು ಅವರು ಹೇಳಿದರು.
ದ.ಕ ಬಸ್ಸು ಮಾಲಕರ ಸಂಘದ ಅಧ್ಯಕ್ಷರಾದ ಶ್ರೀ ಪಿ. ಭಾಸ್ಕರ್ ಸಾಲಿಯಾನ್ ಮಾತನಾಡಿ ಬಸ್ಸು ಮಾಲಕರ ಸ್ಥಿತಿ ಶೋಚನೀಯವಾಗಿದೆ. ಮಾತ್ರವಲ್ಲದೆ ಬಸ್ಸಿನಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಮತ್ತು ನೋವುಗಳನ್ನು ಅನುಭವಿಸುತ್ತಿದ್ದಾರೆ. ಎರಡು ತಿಂಗಳ ಹಿಂದೆ ತಾ| 23/07/2010 ಮತ್ತು 25/08/2010 ರಂದು ಮಾನ್ಯ ಜಿಲ್ಲಾಧಿಕಾರಿಯವರ ಮೂಲಕ  ಸಮಬಂಧಪಟ್ಟ ಇಲಾಖೆಗೆ ಮನವಿಯನ್ನು ನೀಡಿರುತ್ತೇವೆ. ಆದರೆ ಸಂಬಂಧಪಟ್ಟ ಇಲಾಖೆಗಳು ಯಾವುದೇ ರೀತಿಯಲ್ಲಿ ಸ್ಪಂದಿಸಿರುವುದಿಲ್ಲ. ಈಗ ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ಪಂಪುವೆಲ್ ನಿಂದ ತಲಪಾಡಿಯವರೆಗೆ ರಸ್ತೆಗಳು ಸಂಪೂರ್ಣ ಛಿದ್ರಛಿದ್ರಗೊಂಡಿದೆ ಮಾತ್ರವಲ್ಲದೆ ವಾಹನಗಳನ್ನು ಈ ರಸ್ತಯಲ್ಲಿ ಚಲಾಯಿಸುವುದು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಬಂದಿದೆ ಎಂದು ಅವರು ಹೇಳಿದರು.
ಬಹಳ ಕೆಟ್ಟು ಹೋದ ಹಾಗೂ ಅಪಾಯಕಾರಿ ಹಂತದಲ್ಲಿರುವ ಈ ರಾಷ್ಟ್ರೀಯ ಹೆದ್ದಾರಿಯನ್ನು ತಕ್ಷಣವೇ ದುರಸ್ಥಿಗೊಳಿಸಬೇಕೆಂದು ದ.ಕ. ಬಸ್ಸು ಮಾಲಕರ ಸಂಘ ಹಾಗೂ ಕೆನರಾ ಬಸ್ಸು ಮಾಲಕರ ಸಂಘ ಮನವಿ ಮಾಡಿಕೊಳ್ಳುತ್ತದೆ. ಒಂದು ವೇಳೆ ಶೀಘ್ರವಾಗಿ ಈ ಸಮಸ್ಯೆಗಳನ್ನು ಪರಿಹರಿಸದಿದ್ದಲ್ಲಿ ನಾವುಗಳು ಅನಿವಾರ್ಯವಾಗಿ ಬಸ್ಸು ಓಡಿಸಲು ಸಾಧ್ಯವಿಲ್ಲದಂತಹ ಈ ಪರಿಸ್ಥಿತಿಯಲ್ಲಿ ತಾ 27/10/10 ರ ಪ್ರತಿಭಟನೆಯು ಕೇವಲ ಸಾಂಕೇತಿಕವಾಗಿರುವುದು. ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆಯನ್ನು ಮಾಡಬೇಕಾಗುವುದು ಎಂದು ಕಾಮರ್ಿಕ ಸಂಘಟನೆಯ ನಾಯಕ ಐವನ್ ಡಿಸೋಜ ಹೇಳಿದರು.
ಸಾರ್ವಜನಿಕ ಪ್ರಯಾಣಿಕರು ವಿದ್ಯಾಥರ್ಿ ಸಮುದಾಯದ ಹಾಗೂ ಸುದ್ದಿ ಮಾಧ್ಯಮಗಳು ಹಾಗೂ ಜಿಲ್ಲಾಡಳಿತ ನಮ್ಮೊಂದಿಗೆ ಸಹಕರಿಸಬೇಕೆಂದು ಕೆನರಾ ಬಪ್ರಧಾನ ಕಾರ್ಯದಶರ್ಿಯವರಾದ ಶ್ರೀ ಅಝೀಝ್ ಪತರ್ಿಪಾಡಿ, ಜ್ಯೋತಿ ಪ್ರಸಾದ್ ಹೆಗ್ಡೆ ಕೋಶಾಧಿಕಾರಿ ಕೆನರಾ ಬಸ್ಸು ಮಾಲಕರ ಸಂಘ, ನೆಲ್ಸನ್ ಪಿರೇರಾ ಮತ್ತು ಸುದೇಶ್ ಮರೋಳಿ, ಕೋಶಾಧಿಕಾರಿ ದ.ಕ. ಬಸ್ಸು ಮಾಲಕರ ಸಂಘ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English