ಮಂಗಳೂರು : ಎಐಸಿಸಿ ಆಧ್ಯಕ್ಷೆ ಸೋನಿಯಾ ಗಾಂದಿ ಮಂಗಳೂರಿಗೆ ಏಪ್ರಿಲ್ 25 ರ ಬದಲಿಗೆ ಏಪ್ರಿಲ್ 27 ಕ್ಕೆ ಭೇಟಿ ನೀಡಲಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಹೇಳಿದರು. ಅವರು ಸೋಮವಾರ ಕದ್ರಿಯಲ್ಲಿರುವ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿಯಲ್ಲಿ ನಡೆದ ಪತ್ರಿಕಾಘೋಷ್ಟಿಯಲ್ಲಿ ಈ ವಿಚಾರವಾಗಿ ಮಾತನಾಡಿದರು.
ಲೋಕಸಭಾ ಅಧಿವೇಶನದ ಹಿನ್ನಲೆಯಲ್ಲಿ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಮಾಡುವ ಆರೋಪಗಳಿಗೆ ಸರ್ಕಾರದ ಪರವಾಗಿ ಸಮರ್ಥವಾದ ಉತ್ತರ ನೀಡಬೇಕಾರಿವುದರಿಂದ ಸೋನಿಯಾ ಗಾಂಧಿ ಯವರ ಉಪಸ್ಥಿತಿ ಅಗತ್ಯವಾಗಿದ್ದು ಈ ಕಾರಣದಿಂದಾಗಿ ಅವರ ರಾಜ್ಯ ಭೇಟಿಯನ್ನು ಎಪ್ರಿಲ್ 25 ಕ್ಕೆ ಬದಲಾಗಿ ಎಪ್ರಿಲ್27ಕ್ಕೆ ಮುಂದೂಡಿರುವುದಾಗಿ ಅವರು ತಿಳಿಸಿದರು.
ಈ ಸಂದರ್ಭ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಭೇಟಿ ನೀಡಿದ ಬಿಜೆಪಿ ನಾಯಕರುಗಳ ಬಗ್ಗೆ ಮಾತನಾಡಿದ ಜನಾರ್ಧನ ಪೂಜಾರಿ ಬಿಜೆಪಿ ಪಕ್ಷದಲ್ಲಿದ್ದ ಭ್ರಷ್ಟರು ಈಗಾಗಲೆ ಬಿಜೆಪಿ ಬಿಟ್ಟು ತೆರಳಿದ್ದಾರೆ ಎಂದು ಬಿಜೆಪಿ ನಾಯಕಿ ಸುಷ್ಮ ಸ್ವರಾಜ್ ಇತ್ತೀಚೆಗೆ ನಡೆದ ಸಾರ್ವಜನಿಕ ಸಭೆಯಲ್ಲಿ ನುಡಿದಿದ್ದರು, ಇದಕ್ಕೆ ಪ್ರತಿಕ್ರಿಯಿಸಿದ ಅವರು ಕೆಲವರೆ ಭ್ರಷ್ಟಾ ನಾಯಕರು ಬಿಜೆಪಿ ತೊರೆದಿದ್ದರು ಭ್ರಷ್ಟ ಹಗರಣಗಳಲ್ಲಿ ಸಿಲುಕಿದ್ದ ಕಟ್ಟಾ ಸುಬ್ರಹ್ಮಣ್ಯ, ವೆಂಕಯ್ಯನಾಯ್ಡು ಮೊದಲಾದವರು ಇನ್ನೂ ಪಕ್ಷದಲಿದ್ದಾರೆ. ಅವರ ವಿರುದ್ದ ಸರ್ಕಾರ ಯಾವುದೇ ಕ್ರಮವನ್ನು ಇದುವರೆಗು ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮಾಜಿ ಮೇಯರ್ ಅಶ್ರಫ್, ಬಲರಾಜ್ ರೈ, ಮೂಡಾದ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್, ಕೃಪಾ ಆಳ್ವ, ಕಳ್ಳಿಗೆ ತಾರನಾಥ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English