ವರ್ಗಾವಣೆಗೊಂಡ ಜಿಲ್ಲಾಧಿಕಾರಿ ವೇಲುಸಾಮಿ ಪೊನ್ನುರಾಜ್ ಅವರಿಗೆ ನಾಗರಿಕರ ಆತ್ಮೀಯ ವಿದಾಯ.

9:28 PM, Tuesday, October 26th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಜಿಲ್ಲಾಧಿಕಾರಿ ವೇಲುಸಾಮಿ ಪೊನ್ನುರಾಜ್ ಅವರಿಗೆ ನಾಗರಿಕರ ಆತ್ಮೀಯ ವಿದಾಯಮಂಗಳೂರು: ಸುಮಾರು ಒಂದೂವರೆ ವರ್ಷಕಾಲ ಉಡುಪಿಯಿಂದ ಮಂಗಳೂರಿಗೆ ಬಂದು ಇಲ್ಲಿ ಆಡಳಿತ ನಡೆಸಿ, ಈಗ ಶಿವಮೊಗ್ಗಕ್ಕೆ ವರ್ಗಾವಣೆಗೊಂಡು ಹೋಗುತ್ತಿರುವ ದ.ಕ (ಮಾಜಿ) ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಅವರಿಗೆ ಇಂದು ಹಾರ್ಧಿಕ ವಿದಾಯ, ಹಾಗೂ ಹೊಸದಾಗಿ ದಿಲ್ಲಿಯಿಂದ ಬಂದು ಇಲ್ಲಿ ಜಿಲ್ಲಾಧಿಕಾರಿಯಾಗಿರುವ ಸುಭೋಧಯಾದವ (ಐಎಎಸ್) ಅವರಿಗೆ ಸಂತೋಷಪೂರ್ವಕ ಸ್ವಾಗತ ಬಯಸುವ ಸಮಾರಂಭವೊಂದನ್ನು ಜಿಲ್ಲಾ ಕಛೇರಿಯ ಸಭಾಂಗಣದಲ್ಲಿ ಇಂದು ಮಂಗಳವಾರ ಬೆಳಿಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ಅವರು ನಡೆಸಿಕೊಟ್ಟರು.

ಪ್ರಭಾಕರ ಶರ್ಮಶರ್ಮರು ತಮ್ಮ ಹಿಂದಿನ ಅನುಭವಗಳನ್ನು ನೆನೆಪಿಗೆ ತಂದುಕೊಂಡು ವರ್ಗಾವಣೆಯಾಗಿ ಮಂಗಳೂರು ಬಿಡುತ್ತಿರುವ ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಅವರಿಗೆ ಶುಭಚಿಂತನೆ ಕೋರಿ ವಿದಾಯ ಹೇಳಿದರು. ಅದೇ ಕಾಲಕ್ಕೆ ಹೊಸ ಜಿಲ್ಲಾಧಿಕಾರಿಯಾಗಿ ಬಂದರು ನಗರ ಮಂಗಳೂರಿಗೆ ಬಂದು ಕರ್ತವ್ಯ ಸ್ವೀಕರಿಸಿರುವ ಸುಭೋಧಯಾದವರನ್ನು ಸ್ವಾಗತಿಸಿ ಹಿತವಚನ ಶುಭ್ಭೇಚ್ಛೆಗಳನ್ನು ಸೂಚಿಸಿದರು.
ಪೊನ್ನುರಾಜ್ ಮಂಗಳೂರಿಗೆ ಬಂದಾಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಅವಕಾಶವಿತ್ತು, ಅವನ್ನು ನಿಷ್ಠೆಯಿಂದ ಸ್ವೀಕರಿಸಿ ಹೋರಾಡಿ ಉತ್ತಮ ಮುಂದಾಳುತನ ಪ್ರದರ್ಶಿಸಿದ್ದಾರೆ ಎಂದು ಶರ್ಮ ಹೇಳಿದರು. ಮಂಗಳೂರು ಮಹಾನಗರಪಾಲಿಕೆಯ ಆಯುಕ್ತ ಡಾ. ವಿಜಯಪ್ರಕಾಶರು ಮಾತನಾಡಿ, ಪೊನ್ನುರಾಜ್ ಮಂಗಳೂರಿನ ರಥಬೀದಿಯನ್ನು ಅಗಲಮಾಡುವ ಸ್ತುತ್ಯ ಕೆಲಸ ಕೈಗೆತ್ತಿ ಸಾಧಿಸಿ ಜನಸಾಮಾನ್ಯರಿಗೂ ವಾಹನಗಳಿಗೂ ನೆರವಾದರು ಎಂದರು.

ವೇಲುಸಾಮಿ ಪೊನ್ನುರಾಜ್ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪೊನ್ನುರಾಜ್, ತಾನು ಮಾಡಿದ ಕೆಲಸಕಲಾಪಗಳ ಬಗ್ಗೆ ತನಗೆ ತೃಪ್ತಿಯುಂಟಾಗಿದೆ ಎಂದರು. ಪೊಲೀಸ್ ನಿರೀಕ್ಷಕರಾದ ಡಾ. ಎ. ಸುಬ್ರಹ್ಮಣ್ಯೇಶ್ವರ ರಾವ್ ಜತೆಗೆ ತಾವು ದುಡಿದ ದಿನಗಳನ್ನು ಸ್ಮರಿಸಿಕೊಂಡರು. ಕಳೆದ 21 ತಿಂಗಳು ಮಂಗಳೂರಿನಲ್ಲಿದ್ದ ತಮಗೆ ಈ ಅವಧಿಯು ಪ್ರಿಯವಾಗಿದೆಯೆಂದು ಸೂಚಿಸಿದರು.

ವೇಲುಸಾಮಿ ಪೊನ್ನುರಾಜ್ಹೊಸ ಜಿಲ್ಲಾಧಿಕಾರಿ ಸುಭೋಧಯಾದವರು ಮಾತನಾಡಿ, ಪೊನ್ನುರಾಜ್ರ ಜನಪ್ರಿಯತೆಯ ಕಾರ್ಯಗಳಿಂದಾಗಿ ತನ್ನ ಜವಾಬ್ದಾರಿ ಈಗ ಮತ್ತಷ್ಟು ಗುರುತರವಾಗಿದೆಯೆಂದರು. ಅಗಲುವ ಜಿಲ್ಲಾಧಿಕಾರಿ (ಶಿವಮೊಗ್ಗದ) ವಿ. ಪೊನ್ನುರಾಜರಿಗೆ ಶಾಲು, ಉಡುಗೊರೆ, ಹೂ ಹಣ್ಣಿನ ಉಪಚಾರದೊಂದಿಗೆ ಸನ್ಮಾನಿಸಲಾಯಿತು.

ವೇಲುಸಾಮಿ ಪೊನ್ನುರಾಜ್
ಉಡುಪಿ ಜಿಲ್ಲಾಧಿಕಾರಿ ಪಿ ಹೆಮಲತಾ, ಕೆನರಾ ಚೇಂಬರ್ ಅಧ್ಯಕ್ಷ ಮೋಹನ್ ದಾಸ್ ಪ್ರಭು, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರದೀಪ ಕಲ್ಕೂರ, ಉಪ ಪೊಲೀಸ್ ಕಮಿಷನರ್ ಅರ್. ರಮೇಶ್, ಅಡಿಷನಲ್ ಎಸ್ ಪಿ. ಪ್ರಭಾಕರ್ ಹಾಗೂ ಜಿಲ್ಲಾಧಿಕಾರಿ ಕಛೇರಿಯ ಅಧಿಕಾರಿಗಳು, ಗಣ್ಯರು, ನಾಗರಿಕರು ಈ ಸಭೆಯಲ್ಲಿ ಸೇರಿದ್ದರು.

ವೇಲುಸಾಮಿ ಪೊನ್ನುರಾಜ್ ಅವರಿಗೆ ನಾಗರಿಕರ ಆತ್ಮೀಯ ವಿದಾಯ

ವೇಲುಸಾಮಿ ಪೊನ್ನುರಾಜ್ ಅವರಿಗೆ ನಾಗರಿಕರ ಆತ್ಮೀಯ ವಿದಾಯ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English