ಆಸ್ಟ್ರೇಲಿಯಾಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಶ್ರೀಲಂಕಾ, ತಮಿಳುನಾಡು ನಿರಾಶ್ರಿತರ ರಕ್ಷಣೆ, ಆರೋಪಿಗಳ ಬಂಧನ

3:54 PM, Saturday, April 27th, 2013
Share
1 Star2 Stars3 Stars4 Stars5 Stars
(No Ratings Yet)
Loading...

Human trafficking ಮಂಗಳೂರು : ತಮಿಳುನಾಡು ಮತ್ತು ಶ್ರೀಲಂಕಾದ ನಿರಾಶ್ರಿತರನ್ನು ಅಕ್ರಮವಾಗಿ ಆಸ್ಟ್ರೇಲಿಯಾಕ್ಕೆ  ಕಳ್ಳಸಾಗಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಮಂಗಳೂರು ಕರಾವಳಿ ಕಾವಲು ಪೊಲೀಸ್, ಸಿಸಿಬಿ ಪೊಲೀಸ್ ಮತ್ತು  ಬೆಳ್ತಂಗಡಿ ಪೊಲೀಸ್ ರು ನಡೆಸಿದ  ಜಂಟಿ ಕಾರ್ಯಚರಣೆಯಲ್ಲಿ ಪತ್ತೆಹಚ್ಚಿ ನಿರಾಶ್ರಿತರನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

ತಮಿಳುನಾಡಿನ ತಿರುವೆಳ್ಳೂರು ನಿವಾಸಿಗಳಾದ ದೋರಿಂಗ್ಟನ್ (40), ನಿಕ್ಸನ್ ದಾರ್ವಿನ್, ಶ್ರೀಲಂಕಾ ಪ್ರಜೆ, ಚೆನ್ನೈಯಲ್ಲಿ ವಾಸವಿರುವ ತಾವರಸ (46), ರಾಮನಾಥಪುರಂ ನಿವಾಸಿಗಳಾದ ಕಣ್ಣನ್ (31) ಹಾಗೂ ಕಾರ್ತಿಕೇಯನ್(40) ಬಂಧಿತ ಆರೋಪಿಗಳಾಗಿದ್ದಾರೆ. ಇವರು ತಮಿಳುನಾಡಿನ ಭವಾನಿ ಸಾಗರ್ ಮತ್ತು ತಿರುವೆಳ್ಳೂರು ಶ್ರೀಲಂಕಾ ನಿರಾಶ್ರಿತರ ಕ್ಯಾಂಪ್‌ನಿಂದ 88 ಮಂದಿ ನಿರಾಶ್ರಿತರನ್ನು ಆಸ್ಟ್ರೇಲಿಯಾಕ್ಕೆ ಅಕ್ರಮ ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ.

ಆರೋಪಿಗಳು ಶ್ರೀಲಂಕಾ ಮತ್ತು ತಮಿಳುನಾಡಿನ ನಿರಾಶ್ರಿತರನ್ನು ಸುಮಾರು 80 ರಿಂದ 1 ಲಕ್ಷ ರೂಪಾಯಿಗಳಿಗೆ ಖರೀದಿಸಿ ಆಸ್ಟ್ರೇಲಿಯಾಕೆ ಸಾಗಿಸಲು ಸಿದ್ದತೆತೆ ನಡೆಸಿದ್ದು ಇದಕ್ಕೆ ಮುಂಗಡವಾಗಿ 20 ರಿಂದ 30 ಸಾವಿರ ರೂಪಾಯಿಗಳನ್ನು ನೀಡಲಾಗಿದ್ದು ನಿರಾಶ್ರಿತರು ಆಸ್ಟ್ರೇಲಿಯಾವನ್ನು ತಲುಪಿದ ನಂತರ ಉಳಿದ ಹಣವನ್ನು ಕೊಡುವ ಒಪ್ಪಂದ ಮಾಡಿಕೊಂಡಿದ್ದರು. ಈ ಮಾನವ ಕಳ್ಳಸಾಗಾಟದಲ್ಲಿ 29 ಪುರುಷರು, 22 ಮಹಿಳೆಯರು, 18 ಬಾಲಕರು ಹಾಗೂ 19 ಬಾಲಕಿಯರು ಸೇರಿದಂತೆ ಒಟ್ಟು ೮೮ ಮಂದಿ ನಿರಾಸ್ರಿತರನ್ನು ರಕ್ಷಿಸಲಾಗಿದೆ. ಇವರಲ್ಲಿ 20 ಕ್ಕೂ ಹೆಚ್ಚು ಮಂದಿ 14  ವರ್ಷದೊಳಗಿವರಾಗಿದ್ದಾರೆ.

ಮಂಗಳೂರು ಕರಾವಳಿ ಕಾವಲು ಪೊಲೀಸ್ ಪಡೆಯ ಇನ್‌ಸ್ಪೆಕ್ಟರ್ ಗಂಗೀ ರೆಡ್ಡಿ, ಸಿಸಿಬಿ ಇನ್‌ಸ್ಪೆಕ್ಟರ್ ವೆಂಕಟೇಶ ಪ್ರಸನ್ನ, ಎಸ್‌ಐ ಶ್ಯಾಮ ಸುಂದರ್, ಕರಾವಳಿ ಕಾವಲುಪಡೆಯ ಎಎಸ್‌ಐ ಭಾಸ್ಕರ ಶೆಟ್ಟಿ, ಸಿಬ್ಬಂದಿಗಳಾದ ಕೆ. ವಿಜಯ, ಆನಂದ, ಶಶಿಧರ್, ಲೋಕೇಶ್, ನರೇಶ್, ನಾಸಿರ್, ರಫೀಕ್, ಚಾಲಕ ಮಹಾಬಲ ನಾಯ್ಕ, ಸಿಸಿಬಿ ಸಿಬ್ಬಂದಿಗಳಾದ ಶಶಿಧರ್ ಶೆಟ್ಟಿ, ಗಣೇಶ್ ಎಂ.ಪಿ., ಗಣೇಶ್ ಕಲ್ಲಡ್ಕ, ಚಂದ್ರಶೇಖರ್ ಕೆ.ಎನ್, ದಿನೇಶ್ ಬೇಕಲ್, ಚಾಲಕ ತೇಜಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಡಿಸಿಐಬಿ, ಮಂಗಳೂರು ದಕ್ಷಿಣ ಮತ್ತು ಉತ್ತರ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಬೆಳ್ತಂಗಡಿ ಠಾಣೆ ಪೊಲೀಸರು ಕಾರ್ಯಾಚರಣೆಗೆ ಸಹಕಾರ ನೀಡಿದ್ದರು.

88 ಮಂದಿ ನಿರಾಶ್ರಿತರನ್ನು  ಶುಕ್ರವಾರ ಸಂಜೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳಲ್ಲಿ ತಮಿಳುನಾಡಿಗೆ ಕಳುಹಿಸಲಾಯಿತು. ಅಲ್ಲಿಂದ ಅವರವರು ಈ ಹಿಂದೆ ಇದ್ದ ಕ್ಯಾಂಪ್‌ಗಳಿಗೆ ಮರಳಿ ಸೇರಿಸಲಾಗುವುದು ಎಂದು ಕ್ಯೂ ಬ್ರ್ಯಾಂಚ್ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English