ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಅಗತ್ಯತೆ ಇದೆ : ವರುಣ್‌ ಗಾಂಧಿ

5:03 PM, Saturday, April 27th, 2013
Share
1 Star2 Stars3 Stars4 Stars5 Stars
(No Ratings Yet)
Loading...

Varun Gandhiಬಂಟ್ವಾಳ : ಕರ್ನಾಟಕ ಸ್ವಾಭಿಮಾನಿ, ಸಂಸ್ಕಾರಯುತವಾದ ಪ್ರದೆಶವಾಗಿದ್ದು, ಇಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಅಗತ್ಯತೆ ಇದೆ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಂಸದ ವರುಣ್‌ ಗಾಂಧಿ ನುಡಿದರು. ಅವರು ಸುಕ್ರವಾರ ಬಿ.ಸಿ.ರೋಡಿನಲ್ಲಿ ಬಿಜೆಪಿ ಬಂಟ್ವಾಳ ಕ್ಷೇತ್ರ ಅಭ್ಯರ್ಥಿ ಉಳಿಪಾಡಿ ರಾಜೇಶ್‌ ನಾಯ್ಕ ಪರವಾಗಿ ಏರ್ಪಡಿಸಲಾದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಚುನಾವಣೆಯಲ್ಲಿ ಮತದಾರ ಹಾಕುವ ಪ್ರತಿಯೊಂದು ಮತ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸಲಿದ್ದು, ರಾಜ್ಯದ ಮತದಾರರು ರಾಷ್ಟ್ರದ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತಚಲಾಯಿಸಬೇಕು ಎಂದರು. ಬಂಟ್ವಾಳ ಅಭ್ಯರ್ಥಿ ರಾಜೇಶ್ ನಾಯ್ಕ ಒಬ್ಬ ಉತ್ತಮ ವ್ಯಕ್ತಿಯಾಗಿದ್ದು ನಾನು ಅವರನ್ನು ಸುಧೀರ್ಘ ಅವಧಿಯಿಂದ ತಿಳಿದಿದ್ದು ಅವರೊಬ್ಬ ಸಾತ್ವಿಕ, ಪ್ರಾಮಾಣಿಕ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದಾರೆ. ಅವರು ಈ ಕ್ಷೇತ್ರದಲ್ಲಿ ಗೆದ್ದರೆ ಈ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುವರು ಎಂಬ ನಂಬಿಕೆ ತಮಗಿದೆ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು.

ಯಾವುದೇ ಸುಳ್ಳು ಭರವಸೆ ನೀಡದೆ,  ಸತ್ಯದ ಮೂಲಕ, ವಂಚನೆ ಇಲ್ಲದೆ, ನೇರವಾದ ನುಡಿನಡೆಯಲ್ಲಿ ಮತದಾರರ ವಿಶ್ವಾಸಕ್ಕೆ ಧಕ್ಕೆ ಆಗದಂತೆ, ಪಕ್ಷಕ್ಕೆ ದ್ರೋಹ ಬಗೆಯದಂತೆ ಸೇವೆ ಸಲ್ಲಿಸುತ್ತೇನೆ ಎಂದು ಬಂಟ್ವಾಳ ವಿಧಾನ ಸಭಾ ಬಿಜೆಪಿ ಅಭ್ಯರ್ಥಿ ಉಳಿಪಾಡಿ ರಾಜೇಶ್‌ ನಾಯ್ಕ ನುಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English