ವೋಟ್ ಬ್ಯಾಂಕ್ ರಾಜಕೀಯ 2020ರ ಅಭಿವೃದ್ಧಿಶೀಲ ಭಾರತದ ಕನಸಿಗೆ ಮಾರಕ : ಅರುಣ್ ಜೇಟ್ಲಿ

5:45 PM, Monday, April 29th, 2013
Share
1 Star2 Stars3 Stars4 Stars5 Stars
(No Ratings Yet)
Loading...

Arun Jaitley ಮಂಗಳೂರು : ಭಯೋತ್ಪಾದನೆ, ವೋಟ್ ಬ್ಯಾಂಕ್ ರಾಜಕೀಯ ಕಲಾಂ ರ ಕನಸಾದ  2020ರ ಅಭಿವೃದ್ಧಿಶೀಲ ಭಾರತದ ಕನಸಿಗೆ ಮಾರಕವಾಗಲಿದೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಹೇಳಿದರು. ಅವರು ಸಿಟಿಜನ್ ಕೌನ್ಸಿಲ್ ವತಿಯಿಂದ ನಗರದ ಸಂಘ ನಿಕೇತನದಲ್ಲಿ  ಶನಿವಾರ ಆಯೋಜಿಸಲಾದ ‘ಭಾರತ-2020 ರ ಸಾಧ್ಯತೆ ಮತ್ತು ಸವಾಲುಗಳು ಎಂಬ  ವಿಚಾರದ ಕುರಿತು ಉಪನ್ಯಾಸ ನೀಡಿದರು.

ಅವರು ಪ್ರಸ್ತುತ ಭಯೋತ್ಪಾದನೆ, ಪಾಕಿಸ್ತಾನದ ಗಡಿ ತಕರಾರು ಇನ್ನೊಂದೆಡೆ ನೆರೆ ರಾಷ್ಟ್ರ ಚೀನಾದ ಆಕ್ರಮಣಗಳು ಹಾಗು ಆರ್ಥಿಕ ಕುಸಿತ ದೇಶದ ಭದ್ರತೆಗೆ ಅಪಾಯವನ್ನು ತಂದೊಡ್ಡುತ್ತಿವೆ. ವೋಟ್ ಬ್ಯಾಂಕ್ ರಾಜಕೀಯದಿಂದ ನಮ್ಮ ಅಭಿವೃದ್ಧಿಶೀಲ ಭಾರತದ ಕನಸಿಗೆ ಧಕ್ಕೆಯಾಗುತ್ತಿದೆ. ದೇಶದ ಸಾರ್ವಭೌಮತೆ ಉಳಿಸಿಕೊಳ್ಳಲು ಪ್ರಬುದ್ಧ ಹಾಗೂ ಗುಣಮಟ್ಟದ ನಾಯಕತ್ವದ ಅಗತ್ಯವಿದೆ. ನಾಯಕತ್ವ ಸಾಮರ್ಥ್ಯದಿಂದ ಬರಬೇಕೇ ಹೊರತು ಕುಟುಂಬದ ಹೆಸರಿನಿಂದಲ್ಲ ಎಂದರು.

ಒಂದೆಡೆ ಪಾಕಿಸ್ತಾನ, ಚೀನಾದ ಆಕ್ರಮಣಗಳು, ಮತ್ತೂಂದೆಡೆ ಭಾರತದ ಆರ್ಥಿಕ ಕುಸಿತ, ಭ್ರಷ್ಟಾಚಾರ, ಮುಂತಾದ ಹತ್ತಾರು ಸಮಸ್ಯೆಗಳನ್ನು ಭಾರತ ತನ್ನ ಮಡಿಲಲ್ಲಿ ಇಟ್ಟುಕೊಂಡು ಕಲಾಂ ಅವರ ಕನಸಿನ 2020 ನನಸು ಮಾಡುವುದು ಸುಲಭಸಾಧ್ಯವಲ್ಲ ರಾಜಕೀಯದಲ್ಲಿ ದಿಟ್ಟ ನಿಲುವು ಇಲ್ಲದಿರುವಾಗ ಕನಸನ್ನು ನನಸು ಮಾಡಲು ಸಮರ್ಥ ನಾಯಕತ್ವದ ಅಗತ್ಯೆತೆ ಇದೆ ಎಂದು ಅವರು ಹೇಳಿದರು.

ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಬ್ರಿಗೇಡಿಯರ್‌ ಪಿ.ಎನ್‌. ರೈ ಮತ್ತು ಕರಾವಳಿ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಎಸ್‌.ಗಣೇಶ್‌ ರಾವ್‌ ಮಾತನಾಡಿದರು. ಸಿಟಿಜನ್ಸ್‌ ಕೌನ್ಸಿಲ್‌ನ ಅಧ್ಯಕ್ಷ ಭಾಸ್ಕರ್‌ ದೇವಸ್ಯ ಹಾಗೂ ಸಂಚಾಲಕ ಎಂ.ಕೆ. ಸುವೃತ್‌ ಕುಮಾರ್‌ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English