ಮಂಗಳೂರು : ಒಡಿಯೂರು ಶ್ರೀಗಳ 50ನೇ ಜನ್ಮ ದಿನೋತ್ಸವವನ್ನು ಆಚರಿಸುವ ಸುಸಂದರ್ಭದಲ್ಲಿ ಒಡಿಯೂರು ಕ್ಷೇತ್ರದ ಹಿನ್ನಲೆ ಇರುವ ಪೌರಾಣಿಕ ಹಾಗೂ ಐತಿಹಾಸಿಗಳ ಕಥೆಯನ್ನಾಧರಿಸಿ ತಾರಾನಾಥ ವರ್ಕಾಡಿ ರಚಿಸಿದ `ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ’ ಯಕ್ಷಗಾನವನ್ನು ಇಂದು ನಗರದ ಪುರಭವನದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದೀಪ ಬೆಳಗಿಸುವ ಮೂಲಕ ರಂಗಾರ್ಪಣೆಗೈದರು.
ಧರ್ಮ ಮತ್ತು ಸಂಸ್ಕೃತಿಯ ಅನಾವರಣ ಆಗಬೇಕಾದರೆ ಕಲೆಯಿಂದ ಮಾತ್ರ ಸಾಧ್ಯ, ಒಡಿಯೂರು ಕ್ಷೇತ್ರ ಮಹಾತ್ಮೆಯನ್ನು ಯಕ್ಷಗಾನದ ಮೂಲಕ ಭಕ್ತರಿಗೆ ತಿಳಿಸುವ ಈ ಕಾರ್ಯ ಪ್ರಶಂಶನೀಯ ಎಂದು ಶ್ರೀ ಗುರುದೇವಾನಂದ ಸ್ವಾಮೀಜಿಯವರು ತಮ್ಮ ಅಶಿರ್ವಚನ ಭಾಷಣದಲ್ಲಿ ಹೇಳಿದರು.
ಯಕ್ಷಗಾನದ ಅನುಭವಗಳು, ಅದರಲ್ಲಿ ಬರುವ ಪಾತ್ರಗಳ ಮಹತ್ವವನ್ನು ಯಕ್ಷಗಾನ ಕಲಾವಿದ ಕುಂಬ್ಲೆ ಸುಂದರ ರಾವ್ ತಿಳಿಸಿದರು. ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಡಾ. ನಾರಾಯಣ ಶೆಟ್ಟಿ ಸೀಮಂತೂರು ಉಪಸ್ಥಿತರಿದ್ದರು.
ಒಡಿಯೂರು ಗುರುದೇವಾ ಸೇವಾಬಳಗ ಅಧ್ಯಕ್ಷ ಜಯಂತ್ ಜೆ. ಕೋಟ್ಯಾನ್ ಸ್ವಾಗತಿಸಿದರು.
ಮಧ್ಯಾಹ್ನ 3 ರಿಂದ ರಾತ್ರಿ 9 ರ ವರೆಗೆ ಜಿಲ್ಲೆಯ ಸುಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ `ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆಯಿತು.
Click this button or press Ctrl+G to toggle between Kannada and English