ಉಡುಪಿಯಲ್ಲೂ ತನ್ನ ಜಯದ ಖಾತೆ ತೆರೆದ ಕಾಂಗ್ರೆಸ್

6:54 PM, Wednesday, May 8th, 2013
Share
1 Star2 Stars3 Stars4 Stars5 Stars
(No Ratings Yet)
Loading...

Udupi Resultಉಡುಪಿ : ಉಡುಪಿ ಜಿಲ್ಲೆಯ ಒಟ್ಟು 5 ವಿಧಾನಸಭಾ ಕ್ಷೇತ್ರಗಳಲ್ಲಿ 3 ರಲ್ಲಿ ಕಾಂಗ್ರೆಸ್, 1 ಬಿಜೆಪಿ ಹಾಗು 1 ಸ್ಥಾನ ಪಕ್ಷೇತರರ ಪಾಲಾಗಿದೆ. ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಬಹುಮತವನ್ನು ಸಾಧಿಸಿದಂತೆ ಉಡುಪಿಯಲ್ಲಿಯು 3 ಸ್ಥಾನ ಪಡೆದು ಪ್ರಾಬಲ್ಯ ಮೆರೆದಿದೆ.

ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ಒಟ್ಟು 86,868  ಮತಗಳನ್ನು ಪಡೆದು ಬಿಜೆಪಿ ಯ ಸುಧಾಕರ್ ಶೆಟ್ಟಿ ಯವರನ್ನು 39,524 ಮತಗಳ ಮೂಲಕ ಪರಾಭವಗೊಳಿಸಿದ್ದಾರೆ.

ಇನ್ನು ಕಾರ್ಕಾಳದಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಒಟ್ಟು 65,039  ಮತಗಳನ್ನು ಪಡೆದು ಜಯ ಸಾಧಿಸಿದರೆ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ್ ಭಂಡಾರಿ 60,785 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದಾರೆ.

ಕಾಪು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ಕಾಂಗ್ರೆಸ್ ಅಭ್ಯರ್ಥಿ ವಿನಯಕುಮಾರ್ ಸೊರಕೆ ವಿರುದ್ದ 1,855 ಮತಗಳ ಅಂತರದಲ್ಲಿ ಸೋತಿದ್ದಾರೆ.

ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ್ ಪೂಜಾರಿ 82,277 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಬಿಎಂ ಸುಕುಮಾರ್ ಶೆಟ್ಟಿ 51,128 ಮತಗಳನ್ನು ಪಡೆಯುವ ಮೂಲಕ ಒಟ್ಟು 31,149 ಮತಗಳಿಂದ ಸೋಲನ್ನನುಭವಿಸಿದ್ದಾರೆ.

ಇನ್ನು ಬಿಜೆಪಿ ಯಿಂದ ಹೊರಹೋಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ 80,563 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಮಲ್ಯಾಡಿ ಶಿವರಾಮ್ ಶೆಟ್ಟಿ ವಿರುದ್ದ ಜಯ ಸಾಧಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English