ಮಂಗಳೂರು: ನಮ್ಮ ಕುಡ್ಲ ವತಿಯಿಂದ ನವೆಂಬರ್ 4 ರಂದು ಗುರುವಾರ ಸಂಜೆ 5 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗೂಡು ದೀಪ ಸ್ಪರ್ಧೆ ನಡೆಯಲಿದೆ, ಮೂರುವಿಭಾಗಗಳಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಸಾಂಪ್ರದಾಯಿಕ, ಆಧುನಿಕ ಹಾಗೂ ವಿಶೇಷ ಮಾದರಿಯ ಗೂಡು ದೀಪಗಳಿಗೆ ಸ್ಪರ್ಧೆಗೆ ಅವಕಾಶ ನೀಡಲಾಗಿದೆ ಎಂದು ಕಾರ್ಯಕ್ರಮದ ನಿರ್ವಾಹಕ ಕದ್ರಿ ನವನೀತ್ ಶೆಟ್ಟಿ ಇಂದು ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪ್ರಥಮ ಹಾಗೂ ದ್ವತೀಯ ಸ್ಥಾನ ಪಡೆಯುವ ಗೂಡುದೀಪಗಳಿಗೆ ಚಿನ್ನದ ಪದಕವನ್ನು ಬಹುಮಾನವಾಗಿ ನೀಡಲಾಗುವುದು. ತೀಪುಗಾರರಿಗೆ ಮೆಚ್ಚುಗೆ ಪಡೆದ ಗೂಡುದೀಪಗಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ತುಳುನಾಡಿನಲ್ಲಿ ಜನಿಸಿ, ತುಳು ಮಣ್ಣಿನ ಮಹತ್ವವನ್ನು ದೇಶವಿದೇಶಗಳಲ್ಲಿ ಹರಡಿ ಖ್ಯಾತಿವೆತ್ತು, ಶಿಕ್ಷಣ – ಸಂಸ್ಕೃತಿ – ಸಮಾಜಸೇವೆ – ಉದ್ಯಮ ರಂಗ ಇತ್ಯಾದಿ ಕ್ಷೇತ್ರಗಳಲ್ಲಿ ಶ್ರೇಷ್ಠ ಮಟ್ಟದ ಸಾಧನೆ ಮಾಡಿ ನಾಡಿಗೆ ಗೌರವ ತಂದು ಕೊಟ್ಟ ವ್ಯಕ್ತಿಗಳಿಗೆ ಕೊಡಮಾಡುವ “ನಮ್ಮ ತುಳುವೆರ್” ವಿಶೇಷ ಪ್ರಶಸ್ತಿಯನ್ನು ಈ ಬಾರಿ ಡಾ. ದಯಾನಂದ ಪೈ, ಸೆಂಚುರಿ ಬಿಲ್ಡರ್ ನ ಆಡಳಿತ ನಿರ್ದೇಶಕರು ಇವರಿಗೆ ನೀಡಲಾಗುವುದು. ಗೂಡುದೀಪ ಪಂಥಧ ಸಂದರ್ಭದಲ್ಲಿ ತುಳುನಾಡಿನ ವ್ಯಾಪ್ತಿಯೊಳಗೆ ಸಾಹಿತ್ಯ – ಕಲೆ ಮತ್ತು ಸಾಂಸ್ಕೃತಿಕ ರಂಗದಲ್ಲಿ ವಿಶೇಷ ಸೇವೆ ಸಲ್ಲಿಸಿದವರಿಗೆ ಪ್ರತಿವರ್ಷ “ನಮ್ಮ ಕುಡ್ಲ ಪ್ರಶಸ್ತಿ” ಯನ್ನು ಕೊಡುತ್ತಿದ್ದೇವೆ. ಅದರಂತೆ 2010 ನೇ ಸಾಲಿಗೆ ಸುಪ್ರಸಿದ್ದ ನಾಟಕ ಕರ್ತೃ, ನಟ ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರನ್ನು ಆಯ್ಕೆ ಮಾಡಿದ್ದೇವೆ ಹಾಗೆಯೇ ಶ್ರೀ ಚಂದ್ರಶೇಖರ್ ಸುವರ್ಣ, ಸುವರ್ಣ ಆಟ್ಸ್ ಮುಲ್ಕಿ ಇವರಿಗೆ ನಮ್ಮ ಕುಡ್ಲ ಗೌರವ ಸನ್ಮಾನವನ್ನು ಮಾಡಲಾಗುವುದು. ನಮ್ಮ ಕುಡ್ಲ ಬಾಲ ಪ್ರತಿಭೆ ಪ್ರಶಸ್ತಿ ಗೌರವವನ್ನು ಪ್ರತಿಬಾನ್ವಿತ ಬಾಲ ಕಲಾವಿದೆ ಮಯೂರಿ ಉಳ್ಳಾಲ್ ಅವರಿಗೆ ನೀಡಲಾಗುವುದು ಎಂದು ತಿಳಿಸಿದರು.
ಗೂಡು ದೀಪ ಸ್ಪರ್ಧೆಯ ಅಂಗವಾಗಿ ಕುದ್ರೋಳಿ ಕ್ಷೇತ್ರದಲ್ಲಿ ರಾಜೇಶ್ ಮತ್ತು ಬಳಗದವರಿಂದ “ತುಳು ಸಂಗೀತ ವೈಭವ” ಹಾಗೂ ದಿನೇಶ್ ಅತ್ತಾವರ, ಕು. ವಿಭಾಲಕ್ಷ್ಮಿ, ಮಯೂರಿ ಉಲ್ಲಾಳ್ ಅವರಿಂದ ನೃತ್ಯ ಕಾರ್ಯಕ್ರಮವಿದೆ. ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ ಅನೇಕ ಗಣ್ಯರು ಅತಿಥಿಗಳಾಗಿ ಪಾಳ್ಗೊಳ್ಳುವರು. ಆರಂಭದಿಂದ ಮುಕ್ತಾಯದವರೆಗೆ ಗೂಡುದೀಪ ಸ್ಪರ್ಧೆಯ ವರ್ಣರಂಜಿತ ಕಾರ್ಯಕ್ರಮವು ಕರಾವಳಿಯ ಅತ್ಯಧಿಕ ಪ್ರಸಾರ ವ್ಯಾಪ್ತಿಯ ನಮ್ಮ ಕುಡ್ಲ ವಿ4 ಲೈನ್ ಚಾನೆಲ್ ನಲ್ಲಿ ನೇರ ಪ್ರಸಾರಗೊಳ್ಳಲಿರುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಮ್ಮ ಕುಡ್ಲ ಚಾನೆಲಿನ ಶ್ರೀ ಹರೀಶ್ ಕರ್ಕೇರಾ, ನಿರ್ದೇಶಕರು, ಶ್ರೀ ಸುರೇಶ್ ಕರ್ಕೇರಾ, ನಿರ್ಮಾಪಕರು, ಶ್ರೀ ಮೋಹನ್ ಕರ್ಕೇರಾ, ನಿರ್ಮಾಪಕರು, ಶ್ರೀ ಲೀಲಾಕ್ಷ ಕರ್ಕೇರಾ, ನಿರ್ಮಾಪಕರು ಹಾಗೂ ಶ್ರೀ ಕದ್ರಿ ನವನೀತ್ ಶೆಟ್ಟಿ, ನಿರ್ವಾಹಕಕರು, ಉಪಸ್ಥಿತರಿದ್ದರು.
Click this button or press Ctrl+G to toggle between Kannada and English