ಆಕರ್ಷಕ ಕಲಾಮೇಳಗಳೊಂದಿಗೆ ಆಳ್ವಾಸ್ ನುಡಿಸಿರಿ ಪ್ರಾರಂಭ

9:45 PM, Friday, October 29th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಆಳ್ವಾಸ್ ನುಡಿಸಿರಿ 2010ಮೂಡಬಿದ್ರೆ : ಕನ್ನಡ ಮನಸ್ಸು ಮತ್ತು ಜೀವನ ಮೌಲ್ಯಗಳು ಎಂಬ ಪರಿಕಲ್ಪನೆಯಡಿ ಮೂಡಬಿದ್ರೆಯ ಶ್ರೀಮತಿ ಆನಂದ ಆಳ್ವಾ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿ ಸಿರಿಯನ್ನು ಖ್ಯಾತ ಕವಿಗಳಾದ ಡಾ. ಎಚ್.ಎಸ್. ವೆಂಕಟೇಶ ಮೂರ್ತಿಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಆಳ್ವಾಸ್ ನುಡಿಸಿರಿ 2010ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಇತರ ಗಣ್ಯರು ಮರದ ಕುಂಡಿಕೆಯಲ್ಲಿ ಇರಿಸಲಾದ ಭತ್ತದ ತೆನೆಗೆ ತಾಮ್ರದ ಕಲಸದಲ್ಲಿ ಹಾಲೆರೆಯುವ ಮೂಲಕ ನುಡಿಸಿರಿಯ ಆರಂಭಕ್ಕೆ ಸಾಕ್ಷ್ಯರಾದರು. ವೇದಿಕೆಯ ಮುಂಭಾಗದಲ್ಲಿ ಇರಿಸಲಾದ ಮರದ ಮಂಚಕ್ಕೆ ಭತ್ತದ ತೆನೆಗಳನ್ನು ಬೀಸುವ ಮೂಲಕ ಕಲಾವಿದರು ಉದ್ಘಾಟನೆಗೆ ಮತ್ತಷ್ಟು ಮೆರುಗು ನೀಡಿದರು. ದಕ್ಷಿಣ ಭಾರತದ ಬಡುಗು ಹಾಗೂ ತೆಂಕು ತಿಟ್ಟಿನ ಯಕ್ಷಗಾನ ವೇಷದಾರಿಗಳು ನುಡಿಸಿರಿಯ ಪ್ರೇಕ್ಷಕರಿಗೆ ಮನರಂಜನೆ ನೀಡಿದರು. ತುಳುನಾಡಿನ ಭೂತಾರಾಧನೆಯ ಪಾತ್ರವಂತು ವೇದಿಕೆಯನ್ನು ಇನ್ನಷ್ಟು ಶ್ರೀಮಂತ ಗೊಳಿಸಿತು.

ಆಳ್ವಾಸ್ ನುಡಿಸಿರಿ 2010

ಆಳ್ವಾಸ್ ನುಡಿಸಿರಿ 2010ಡೊಳ್ಳುಕುಣಿತ, ಚೆಂಡೆ, ಡೋಲು, ತಟ್ಟೀರಾಯ, ಪಲ್ಲಕ್ಕಿಸವಾರಿ ಇನ್ನು ಹಲವಾರು ನೃತ್ಯ ವೈವಿದ್ಯಗಳು ಸಾಂಸ್ಕ್ರತಿಕ ಮೆರವಣಿಗೆಯನ್ನು ಚೆಂದಗಾಣಿಸಿತು.
ವೇದಿಕೆಯಲ್ಲಿ ಉದ್ಘಾಟಕರಾದ ಡಾ| ಎಚ್, ಎಸ್, ವೆಂಕಟೇಶಮೂರ್ತಿ, ಮೂಡಬಿದ್ರೆ ಶಾಸಕರಾದ ಕೆ. ಅಭಯಚಂದ್ರ ಜೈನ್, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಜಯಶ್ರೀ ಎ. ಶೆಟ್ಟಿ, ಡಾ| ಮೋಹನ್ ಆಳ್ವಾ, ಹಾಗೂ ಆನಂದ ಆಳ್ವಾ ಆಸೀನರಾಗಿದ್ದರು.

ಆಳ್ವಾಸ್ ನುಡಿಸಿರಿ 2010ಸಮ್ಮೇಳನಾಧ್ಯಕ್ಷ ಸ್ಥಾನದಿಂದ ಮಾತನಾಡಿದ ಸಾಹಿತಿಗಳಾದ ವೈದೇಹಿ ಯವರು ಆಳ್ವಾಸ್ ನುಡಿಸಿರಿಯ ನೆಪದಲ್ಲಿ ಇವತ್ತು ನಿಮ್ಮೊಂದಿಗೆ ಮಾತನಾಡುವ ಭಾಗ್ಯ ನನಗೆ ಕೂಡಿ ಬಂದಿದೆ. ನನ್ನನ್ನು ವಾಗ್ಮಿಯಾಗಿ ಅಲ್ಲ, ಲೇಖಕಿಯಾಗಿ ಕರೆದಿರುವುದರಿಂದ ನನ್ನ ಭಾಷಣದ ಬಗ್ಗೆ ನಿಮಗೆ ಯಾವ ಭ್ರಮೆಗಳೂ ಇರುವುದಿಲ್ಲ ಎಂಬ ಧೈರ್ಯದಿಂದಿದ್ದೇನೆ. ಆದ್ದರಿಂದ ನಾನು ನಿರುಮ್ಮ ಳತೆಯಿಂದ ನಿಮ್ಮೊಂದಿಗೆ ಇಂದು ಹೇಳಿಕೊಳ್ಳಬೇಕು ಎಂದು ಕಂಡದ್ದನ್ನು ಹೇಳಿಕೊಳ್ಳಲು, ನಿವೇ ದಿಸಿ ಕೊಳ್ಳಲು ಹೊರಟಿದ್ದೇನೆ.
ಆಳ್ವಾಸ್ ನುಡಿಸಿರಿ 2010ನಮ್ಮೆಲ್ಲ ಜನಪದ ಕವಿಗಳ, ಕನ್ನಡದ ಆಧುನಿಕ ಪೂರ್ವ ಆಧುನಿಕೋತ್ತರ ಮಹತ್ವದ ಲೇಖಕಿಯರ ಲೇಖಕರ, ಚಿಂತಕರ, ನನ್ನ ಸಹ ಲೇಖಕಿಯರ ಲೇಖಕರ, ಮುಂಬರಲಿರುವ ಸಾಲುಸಾಲು ಬರಹ ಗಾರರ ಕಲಾವಿದರ ಸಂತತ ಹರಿವಿನ ನಡುವೆ ಇವತ್ತು ನಾನೊಂದು ಹನಿಬಿಂದುವಾಗಿ ಇಲ್ಲಿ ನಿಂತಿದ್ದೇನೆ.

ಆಳ್ವಾಸ್ ನುಡಿಸಿರಿ 2010ಈ ಸಂದರ್ಭದಲ್ಲಿ ನನ್ನ ತಂದೆ ತಾಯಿ, ಅತ್ತೆ ಮಾವ, ಪತಿ, ನನ್ನೆಲ್ಲ ಸೋದರ ಸೋದರಿಯರನ್ನು, ಕುಟುಂಬಸ್ಥರನ್ನು, ಗೆಳೆಯ ಗೆಳತಿಯರನ್ನು, ಅಕ್ಷರಲೋಕಕ್ಕೆ ಕಣ್ತೆರೆಸಿದ ಎಲ್ಲ ಗುರುಗಳನ್ನು, ಸದಾ ಪ್ರೋತ್ಸಾಹದ ನುಡಿಗಳಿಂದ ಬರೆಯಲು ಉತ್ತೇಜಿಸುತ್ತಿದ್ದ ಶ್ರೀಮತಿ ಅನುಪಮಾ ನಿರಂಜನರನ್ನು, ನನ್ನ ಬರವಣಿಗೆಯ ಆಕಾಶವನ್ನು ವಿಸ್ತರಿಸಿದ ಶ್ರೀ ಪಿ. ಲಂಕೇಶ್ ಹಾಗೂ ನನ್ನ ಪ್ರಜ್ಞೆಯನ್ನು ಬೆಳಗಿ ದ ಶ್ರೀ ಕೆ.ವಿ. ಸುಬ್ಬಣ್ಣ ನವರನ್ನು ಗೌರವ ಪ್ರೀತ್ಯಾದರಪೂರ್ವಕ ನೆನೆಯುತಿದ್ದೇನೆ.
ಇಂದು ಕನ್ನಡ ಮನಸ್ಸು ಮತ್ತು ಜೀವನ ಮೌಲ್ಯಗಳು, ಧರ್ಮ, ನಮ್ಮ ಪರಿಸರ ಮುಂತಾದವುಗಳ ಕುರಿತು ಇಲ್ಲಿ ನಾವೆಲ್ಲರೂ ಕೂಡಿ ನಡೆಯುವ ಜಿಜ್ಞಾಸೆ, ಆತ್ಮನಿರೀಕ್ಷಣೆಗಳು ಖಂಡಿತವಾಗಿಯೂ ಒಂದು ಅರ್ಥಪೂರ್ಣ ಯೋಚನಾಕ್ರಮವನ್ನು ಬೆಳೆಸುತ್ತದೆಂದು ನನ್ನ ನಂಬಿಕೆ ಹಾಗೂ ಆಶಯ ವಾಗಿದೆ.

ಆಳ್ವಾಸ್ ನುಡಿಸಿರಿ 2010ವಿವಿಧ ಪ್ರಕಾರಗಳ ಮೂಲಕ ಇಲ್ಲಿ ನಡೆಯಲಿರುವುದು ಚಿಂತನಯಜ್ಞ. ಹೊಸನಾಡೊಂದನು ಕಟ್ಟು ವ ಕನಸಿನಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳ, ಹೊಸ ಪೀಳಿಗೆಯ, ಸಮ್ಮುಖದಲ್ಲಿ ನಡೆಯುತ್ತಿರುವ ಈ ಕಾರ್ಯ ಇವತ್ತಿನ ಅಗತ್ಯ ಕೂಡ. ಕನಸುಗಳೇ ನಿಧಾನ ಸಾಯುತ್ತಿರುವ ಅಥವಾ ಕನಸುಗಳ ಏಕತಾನತೆಯ ಈ ಹೊತ್ತಿನಲ್ಲಿ, ಬೌದ್ಧಿಕವಾಗಿಯೂ ಸಾಮಾಜಿಕವಾಗಿಯೂ ಕ್ರಿಯಾಶೀಲಮಾರ್ಗ ವನ್ನು ಶೋಧಿಸಿಕೊಂಡು ಹೊರಟಿರುವುದು, ತನ್ನ ಸಂಕಲ್ಪಗಳನ್ನು ಸಾಧಿಸುವತ್ತ ನವನವೀನ ಪರಿ ಕಲ್ಪನೆಗಳನ್ನು ಹೊಂದಿರುವುದು, ಅದಕ್ಕಾಗಿ ಕರ್ತೃತ್ವ ಶಕ್ತಿಯುಳ್ಳ ಎಳೆಯರ ಸುಮನಸ್ಕರ ಒಂದು ಪಡೆಯನ್ನೇ ಕಟ್ಟಿರುವುದು – ಈ ಎಲ್ಲವೂ ಶ್ರೀ ಮೋಹನ ಆಳ್ವ ಅವರನ್ನು ಅತ್ಯಂತ ವಿಸ್ಮಯಾಭಿ ಮಾನದಿಂದ ನೋಡುವಂತೆ ಮಾಡಿವೆ. ಇತ್ತೀಚೆಗೆ ನೆರೆಪೀಡಿತರಿಗೆ ಸ್ಪಂದಿಸಿದ ರೀತಿಯಂತೂ ಸಂಸ್ಥೆಯನ್ನು ಇನ್ನೊಂದೇ ಎತ್ತರಕ್ಕೆ ಒಯ್ದಿದೆ. ಪ್ರಕೃತ ‘ನುಡಿಸಿರಿ’ಯ ಕಲ್ಪನೆಯೂ ಸೇರಿ ‘ಆಳ್ವಾಸ್ ಕನ್ನಡ ಮನಸ್’ ಅನ್ನು ಹಾರ್ದಿಕವಾಗಿ ನಾನು ಅಭಿನಂದಿಸುತ್ತಿದ್ದೇನೆ.
ಅದೇನು ಪಕ್ಕಾ ಹಾಡುಗಾರಿಕೆ ಎನ್ನುವಂತಿಲ್ಲ. ಕಂಠ ಹೇಗಿದೆಯೋ ಹಾಗೆ ಯಾವ ಅಂಜಿಕೆ ಅಳು ಕು ಇಲ್ಲದೆ, ದೇವರಲ್ಲವೆ; ಅವನೇ ಕೊಟ್ಟ ದನಿಯಲ್ಲವೆ; ಹೇಗೆ ಹಾಡಿದರೂ ತಪ್ಪಿಲ್ಲ ಎಂಬ ಗಟ್ಟಿ ನಂಬಿಕೆಯಲ್ಲಿ ಧೈರ್ಯ ವಾಗಿ ನಡೆಯುವ ಹಾಡುಗಾರಿಕೆ. ಭಕ್ತಿಗೂ ಅದಕ್ಕೂ ತಾಳೆ ಇರುತ್ತಲೂ ಇರಲಿಲ್ಲ. ಸಂಪ್ರದಾಯವೋ ಪದ್ಧತಿಯೋ ಎಂದ ಮೇಲೆ ಎಷ್ಟೋ ಸಲ ‘ಶಾಸ್ತ್ರ’ಕ್ಕೆ ಮಾಡುವ ‘ಭಜನೆಯ ಕೆಲಸ’ವೇ ಅದಾಗಿದ್ದರೂ ಅದರ ಪರಿಣಾಮ ಮಾತ್ರ ಈಗ ಯೋಚಿಸಿದರೆ ವಿಶೇಷ ವೆನಿಸುತ್ತದೆ. ಹಾಗೆ ನೋಡಿದರೆ ನಮಗಂದು ಸ್ವರಸಂಸ್ಕಾರ ಮತ್ತು ಕಾವ್ಯಸಂಸ್ಕಾರ ನೀಡುತಿ ದ್ದುದು ಮುಖ್ಯವಾಗಿ ಈ ನಿತ್ಯಭಜನೆಯೇ. ಅಂದು ಹಾಗೆ ನಮ್ಮೊಳಗಿಳಿಯುತ್ತಿದ್ದ ದಾಸರಪದ ಗಳು, ವಚನಗಳು, ಶ್ಲೋಕಗಳು -ಒಂದೇ ಎರಡೆ.
ತಾಳುವಿಕೆಗಿಂತನ್ಯ ತಪವು ಇಲ್ಲ -ಎಂದ,
ಉಕ್ಕು ಹಾಲಿಗೆ ನೀರ ಇಕ್ಕುವಂದದಿ ತಾಳು-
ತಲ್ಲಣಿಸದಿರು ಕಂಡ್ಯ ತಾಳು ಮನವೆ-
ಬುದ್ಧಿಯೊಳು ತನುಮನವ ತಿದ್ದಿ ಕೊಳ್ಳಲು ಬೇಕು – ಎಂದ ಕನ್ನಡ ಮನಸ್ಸು ನಮ್ಮದು.
ಟೇಪ್‌ರೆಕಾರ್ಡರ್‌ನ ಆಗಮನ ದಿಂದ, ಅದರದು ಪಾಪ ಏನೂ ತಪ್ಪಿಲವಾದರೂ, ಮನೆಮನೆಗಳಲ್ಲಿ ನಮ್ಮದೇ ಪೆಟೆಪೆಟೆ ಸ್ವರದಲ್ಲಾದರೂ ಹೀಗೆ ಎರಡು ಹಾಡು ಹೇಳಿಕೊಳ್ಳುವ ಧೈರ್ಯ ಹೊರಟು ಹೋಯಿತು. ಧ್ವನಿಮುದ್ರಿಕೆಯ ತಂತ್ರಜ್ಞಾನದಿಂದ ಸಾವಿರ ಲಾಭ ವಾದರೂ ಹಣತೆ ದೀಪದಂತೆ ಮನೆ ಮನೆಗಳನ್ನು ಬೆಳಗುತಿದ್ದ, ನಿತ್ಯದ ಹಾಡುವಿಕೆಯಿಂದ ಧಮನಿಯೊಳಗೆ ಲೀಲಾಜಾಲವಾಗಿ ಸೇರಿ ಹೋಗುತಿದ್ದ ದಾಸರ ಪದಗಳ ಅಭಂಗಗಳ ಭಜನೆಗಳ ಆ ಶಬ್ಧಾಂಬುಧಿಗಳು ಬತ್ತಿ ಹೋಗಿ ಬಿಟ್ಟವಲ್ಲ. ‘ನಿತ್ಯ ಭಜನೆ’ ಒಂದು ಗೇಲಿಯ ಶಬ್ದವಾಯಿತು. ನಮ್ಮದೇ ದನಿಯಲ್ಲಿ ಸಣ್ಣಗೆ ಹಾಡುತ್ತ ಕೆಲಸ ಸಾಗಿಸುವ ಬದುಕಿನ ಮಾರ್ಗವನ್ನೇ ಬದಲಿಸಿ ಕೊಂಡೆವು ನಾವು.
ಭಾಷೆ ಕಳೆಯುವುದು ಯಾವಾಗ? ಹೀಗೆ, ನಮ್ಮ ಬದುಕಿನ ಕ್ರಮವೇ ಬದಲಾದಾಗ. ಗದ್ದೆ ಹೋಯ್ತು, ಪ್ರಕೃತಿ ಹೋಯ್ತು, ನಮ್ಮ ಕಾಯಕಗಳ ಸ್ವರೂಪವೇ ಬದಲಾಯ್ತು.
ಅದರೊಂದಿಗೆ ಮನಸ್ಸೂ ಭಾಷೆಯೂ ಸಹಜವಾಗಿಯೇ ಬದಲಾಗುವುದಷ್ಟೆ? ಬದಲಾಗುವುದೋ ಕಳೆದುಹೋಗುವುದೋ ‘ಸುಸಂಸ್ಕೃತ’ ಎಂಬ ಹೆಸರಿನಲ್ಲಿ ಕೃತಕ ವಾಗುತ್ತ ಹೋಗುವುದೋ ತಿಳಿ ಯದಂತಹ ಒಂದು ಪ್ರಕ್ರಿಯೆ.
ಕನ್ನಡದಂತಹ ಹಲವು ಭಾಷೆಗಳು ಎಚ್ಚರಗೊಂಡು ಅಸ್ಮಿತೆಯಿಂದ ಕಾರ್ಯ ನಿರ್ವಹಿಸಬೇಕಾದ ಕಾಲ ಇವತ್ತು ತೀವ್ರವಿದೆ.ಕನ್ನಡ ಶಾಲೆಗಳು ಆತಂಕದಲ್ಲಿವೆ. ಕನ್ನಡ ಮಾಧ್ಯಮ ಕೀಳರಿಮೆಯಿಂದಿದೆ, ಇಂಗ್ಲಿಷ್ ಮಾಧ್ಯಮ ಶೂಸು ಸಾಕ್ಸು ದಿಸ್ಸುದ್ಯಾಟುಗಳಿಂದ ನಮ್ಮನ್ನು ಸಾಗರ ದಾಟಿಸುತ್ತೇನೆ ಎನ್ನುತ್ತ ಒಯ್ಯುತ್ತಿದೆ ಎಲ್ಲಿಗೆ? ಯಾವ ಗುಹೆಯೊಳಗೆ? ಆಧುನಿಕ ಕಿಂದರಿಜೋಗಿ ಕತೆಯಿದು. ನಾವು ಆಹ್ವಾನಿಸದೆಯೆ ಇಲ್ಲಿಗೆ ಬಂದು ನಮ್ಮ ಊರುಮನೆ ಶಾಲೆಗಳನ್ನು ಆಕ್ರಮಿಸಿ, ಅವಕಾಶವೆಂಬ ಕಿಂದರಿ ಮೂಲಕ ಪ್ರಾಥಮಿಕದಲ್ಲೇ ಮರುಳು ಗೈದು ಪ್ರಾದೇಶಿಕ ಭಾಷೆಗಳನ್ನೆಲ್ಲ ಒಯ್ದು ಗುಹೆಯೊಳಗೆ ಸಮಾಧಿ ಮಾಡುತ್ತಿರುವ ಜೋಗಿಯಂತಿದೆ, ಇಂಗ್ಲಿಷ್. ನೆನಪಿದೆಯೆ, ಗುಡ್ಡದೊಳಗೆ ಮಾಯ ವಾಗದೆ ಉಳಿದ ಮಗು? – ಅದು ಯಾವುದು? ಹೆಚ್ಚು ಅವಕಾಶದ ಇನ್ನೊಂದರ ಮೋಹ- ಅತಿಮೋಹ-ದಲ್ಲಿ ಕನ್ನಡ ಬೇಡ ಅಂದರೆ ಕನ್ನಡ ರಂಗಭೂಮಿ, ಸಿನೆಮಾ, ಸಾಹಿತ್ಯ ಸಂಗೀತ ಜನಪದಕಾವ್ಯ, ಒಟ್ಟಾರೆ ಇಲ್ಲಿನ ಬಾಳಿ ಬದುಕಿದ ಮಂದಿ ಸಾವಧಾನ ದಲ್ಲಿ ಕಟ್ಟಿಕೊಂಡು ಬಂದ ಒಂದು ಮಹಾನ್ ಪರಂಪರೆಯೇ ಬೇಡ ಅಂದ ಹಾಗಾದೀತು. ಭಾಷೆಯೆಂಬುದು ಕೇವಲ ಅಕ್ಷರಗಳ ಗುಂಪಲ್ಲವಷ್ಟೆ? ಅದು ಭಾವ ಕೋಶದ ಸಮ್ಯಕ್ ಬೀಗದ ಕೈ ಎಂಬುದನ್ನು ಮರೆತರೆ ಹೇಗೆ?
ಮೊನ್ನೆ ನಮ್ಮೂರಿನ ಹೊರವಲಯಕ್ಕೆ ಹೋಗಿದ್ದಾಗ ಹಸಿರು ರೇಶ್ಮೆಯಂಥ ಹೊಳಪು ಬೀರುತ್ತ ಗಾಳಿಗೆ ತುಯ್ಯುತಿದ್ದ ಗದ್ದೆಗಳನ್ನು ಕಂಡೆ. ಯಾಕೋ ನಾನು ಭೂತಕಾಲದಲ್ಲಿ ನಿಂತಿದ್ದೇನೆ ಅನಿಸಿತು. ಅದಕ್ಕೆ ಸರಿಯಾಗಿ ನನ್ನ ಜತೆಗಿದ್ದ ಅಲ್ಲಿನವರು ‘ಇದೊಂದು ನೂರು ನೂರೈವತ್ತು ಎಕರೆ, ಮಾರಾಟ ಆಗಿ ಆಯ್ತು. ಓ ಇಂಥವರು ಅಗ್ಗಕ್ಕೆ ಹೊಡ ಕೊಂಡರು’ ಎಂದರು. ಮಾರಲೇ ಬೇಕಿತ್ತು. ಮುಂದೆ ಇದನ್ನೆಲ್ಲ ಯಾರು ಮಾಡುತ್ತಾರೆ? ಮಕ್ಕಳೆಲ್ಲ ಎಜುಕೇಟೆಡ್, ದೊಡ್ಡ ಕೆಲಸ, ದೂರ ಇದ್ದಾರೆ, ಅವರಿಗೆ ಬೇಡವಂತೆ, ಲೇಬರ್ ಪ್ರಾಬ್ಲಂ ಬೇರೆ, ಮನೆಯಲ್ಲಿರುವುದು ಮುದುಕ ಮುದುಕಿ, ಇದನ್ನೆಲ್ಲ ಎಷ್ಟು ದಿನ ನೋಡಿಕೊಂಡಾರು, ಬೇರೆ ದಾರಿ ಇಲ್ಲ, ಇನ್ನೆಲ್ಲ ಹೀಗೆಯೇ’ ಎಂದರು.
ಇಲ್ಲಿ ಬಹುಮಹಡಿ ಕಟ್ಟಡ ಬರುತ್ತದೆ ಯಂತೆ ಎಂದರು. ನದಿ ನದಗಳು ಕಾಡು ಗದ್ದೆಗಳು ನಂದಿ ಹೋಗುವ ಕಾಲದಲ್ಲಿ ಬಂದು ನಿಂತಿರುವೆವೆ?
ಮನುಷ್ಯನನ್ನು ಕಂಡರೂ ಇವನಿಂದ ಏನು ಲಾಭ ಎಂಬಲ್ಲಿಗೆ ಬಂದು ತಲುಪಿದೇವೆ. ಅದೇನು ಅಚ್ಚರಿಯಲ್ಲ. ಆನೆ ಕಾಣದ ಮೇಲೆ ಇರುವೆ ಕಾಣದ ಮೇಲೆ ಮನುಷ್ಯನೂ ಕಾಣದೆ ಹೋಗು ತ್ತಾನೆ ಎಂಬುದೇ ನಿಯಮ. ಒಟ್ಟಾರೆ ಇದು ಅಂತರ್ಸಂಬಧದ ವಿಷಯ. ಹರಿವ ನೀರನ್ನೂ ಬಿಡದೆ ಕಾಡುವ, ನಿಂತ ಬಂಡೆಗಳನ್ನೂ ಬಿಡದೆ ದೋಚುವ ಲಾಭಕೋರರು ನಮ್ಮೊಳಗೇ ಇರುವರಲ್ಲ. ಓಡಿಸುವುದು ಹೇಗೆ?
ಕಾಲ ಸದಾ ಪರಿವರ್ತನಶೀಲವಾದ್ದು. ಸರಿಯೆ. ಆದರೆ ಪರಿವರ್ತನೆಯ ನೆಪ ದಲ್ಲಿ ಎಲ್ಲೆಲ್ಲೋ ತಧಿಭೃತವಾಗಿ ನಮ್ಮನ್ನು ನಾವು ಯಾವುದಕ್ಕೆ ಮಾರಿಕೊಂಡೆವು?
ನಾವೊಂದು ಅಪಕಲ್ಪನೆಯ ಯುಗಕ್ಕೆ ಮಾರಿಕೊಂಡೆವು ಅಂತ ಅನಿಸುತ್ತಿಲ್ಲವೆ?
ಸೌಂದರ್ಯದ ಬಗ್ಗೆ ಶ್ರೀಮಂತಿಕೆಯ ಬಗ್ಗೆ ಸ್ವಾತಂತ್ರ್ಯದ ಬಗ್ಗೆ ಶಿಕ್ಷಣದ ಬಗ್ಗೆ… ಮಹಿಳೆಯ ಬಗ್ಗೆ ಅಪಕಲ್ಪನೆ… ಬಿಡಿ. ಅವಳ ಒಳಗೊಂದು ಜೀವ ಇದೆಯೆಂಬ ಕಲ್ಪನೆಯೇ ಇಲ್ಲದ ಕಲ್ಪನೆ ಅದು.
ತೀರ ಇತ್ತೀಚೆಗೆ ಇದೇ ನಮ್ಮ ‘ಬೆಳಗಾಗಿ ನಾನೆದ್ದು ಯಾರ್‍ಯಾರ ನೆನೆಯಲಿ… ಎಳ್ಳು ಜೀರೀಗೆ ಬೆಳೆವಂಥ ಭೂತಾಯ ಎದ್ದೊಂದು ಗಳಿಗೆ ನೆನೆದೇನು’ ಎನುವಂಥ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ರಾಜಕಾರಣಿಗಳಿಂದಲೇ ಅನುಮತಿ ಗಿಟ್ಟಿಸಿ ಎಸ್ ಇ ಜಡ್‌ನವರು – ರಾತಾ ರಾತ್ರಿ ಬಾಗಿಲು ತಟ್ಟಿ ‘ಮನೆ ಖಾಲಿ ಮಾಡಿ.’ ಲಾರಿಗಟ್ಟಲೆ ಮಣ್ಣನ್ನು ತೆನೆ ಕಟ್ಟಿದ ಪೈರಿನ ಮೇಲೆ ಸುರಿದು ‘ಈ ಜಾಗ ನಿಮ್ಮದಲ್ಲ, ಬಿಡಿ’ ಎಂದದ್ದು ನೆನಪಿಸಿಕೊಳ್ಳಿ. ಭ್ರೂಣಹತ್ಯೆ ಇನ್ನು ಬೇರೆ ಇದೆಯೇನು? ಗ್ರೆಗರಿಯೆಂಬ ಕೃಷಿ ಜೀವಿಯ ಮನೆ ಕೆಡವಿ ತೋಟ ಹುಡಿ ಗೈದು, ನಿಂತ ನೆಲದಲ್ಲೆ, ದನ ಎಮ್ಮೆ ಕೋಳಿಗಳೂ ಸೇರಿದ, ಆ ಇಡೀ ಕುಟುಂಬವನ್ನು ಪರದೇಶಿ ಮಾಡಿದರು. ಹಿಂದೀ ಸಿನೆಮಾಗಳಲ್ಲಿ ನೋಡಿದ್ದೆವು ಇದನ್ನೆಲ್ಲ. ಅದು ಇತ್ತೀಚೆಗೆ ನಮ್ಮದುರಿಗೇ ಪ್ರತ್ಯಕ್ಷ ಕಂಡಂತಾಯ್ತು….
ಅಭಿವೃದ್ಧಿಯ ಬಗ್ಗೆ ಅಪಕಲ್ಪನೆ.
ಪ್ರಜಾಪ್ರಭುತ್ವದ ದುಷ್ಕಾಲವಿದು. ನಾವೆಲ್ಲಿದ್ದೇವೆ? ನಮ್ಮದೇ ಆಡಳಿತದಲ್ಲಿ ದೀವಾ? ನಾವು ನಾವಾಗಿ ಇದೀವಾ? ನಮ್ಮ ಮನಸ್ಸೇ ಇದು? ಇದು ನಾವೇ ಹೌದೇ? ಅಂತ ನಮ್ಮನ್ನ ನಾವೇ ಮುಟ್ಟಿ ಕೊಳ್ಳುವಂತಹ ಸ್ಥಿತಿ.
ಪೂರ್ವಾತಿಪೂರ್ವ ಕಾಲದಲ್ಲಿ ಒಬ್ಬ ಗಂಡ ಹೆಂಡತಿ ಮಕ್ಕಳು ಇದ್ದರಂತೆ. ಒಂದಿನ ಆಹಾರ ಉರುವಲು ಇತ್ಯಾದಿ ತರಲು ಅವರು ಹೊರಗೆ ಹೋಗುವವರು ಮನೆಗೊಂದು ಜನ ಮಾಡಿ, ಮಕ್ಕಳನ್ನು ಅವರ ವಶ ಕೊಟ್ಟು, ದಯಮಾಡಿ ನಾವು ಹಿಂದಿರುಗಿ ಬರುವವರೆಗೆ ಬೆಂಕಿ ನಂದದಂತೆ ನೋಡಿಕೊಳ್ಳಿ ಎಂದು ಹೊರಟು ಹೋದರಂತೆ. ಹೋದವರು ಎಷ್ಟು ಹೊತ್ತಾದರೂ ಬರಲಿಲ್ಲ. ಬೆಂಕಿ ಉರಿಯುತ್ತ ಉರಿಯುತ್ತ ಇದ್ದ ಉರುವಲೆಲ್ಲ ಖಾಲಿಯಾಯಿತು. ಬೆಂಕಿ ನಂದದಂತೆ ನೋಡಿಕೊಳ್ಳಬೇಕಲ್ಲ, ಇನ್ನೇನು ಮಾಡುವುದು? ವಿಧಿಯಿಲ್ಲದೆ ಆತ ಅವರ ಮಕ್ಕಳನ್ನೇ ಒಂದೊಂದಾಗಿ ಕಡಿದು ಒಲೆಗೆ ತುಂಬಿ ಬೆಂಕಿ ಕಾದ ನಂತೆ. ದಂಪತಿಗಳು ಮನೆಗೆ ಬಂದು ನೋಡುತ್ತಾರೆ, ಬೆಂಕಿ ಉರಿಯುತ್ತಿದೆ. ಸಂತೋಷವಾಯ್ತು. ‘ಅದು ಸರಿ ಮಕ್ಕಳೆಲ್ಲಿ?’ ‘ಒಲೆಗೆ ಹಾಕಿದೆ. ನೀವು ಬೆಂಕಿ ನಂದದಂತೆ ನೋಡಿಕೋ ಎಂದಿರಲ್ಲ’. ಎಂದನಂತೆ ಆತ. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಕಂಡಾಗೆಲ್ಲ ನನಗೆ ನೆನಪಾಗುವುದು ಈ ಕತೆ.
ಜವಾಬ್ದಾರಿ ಹೊತ್ತ ಮಂದಿ ಏನೋ ವಹಿವಾಟು ನಡೆಸಿಕೊಂಡು ಹೋಗುತ್ತಿ ದ್ದಾರೆ ಅಂತ ದೃಢವಾಗಿ ನಂಬಿಕೊಂಡು ನಾವು ಮನೆಮಂದಿ ನಮ್ಮ ನಮ್ಮ ಕೆಲಸ ಕಾರ್ಯ ಕಷ್ಟ ಸುಖ ಹಸಿವೆ ಊಟ ಹಾಡು ಹಸೆ ಕಂಬನಿ ನಗೆ ಮಾತುಕತೆ ಗಳಲ್ಲಿ ನಮ್ಮಷ್ಟಕ್ಕೆ ಮರೆತುಕೊಂಡಿರುವ ಹೊತ್ತಿಗೆ ವಹಿವಾಟು ವಹಿಸಿದ ಮಂದಿ ಹಣದ, ಅಭಿವೃದ್ಧಿಯ ಹುಚ್ಚು ಹಂಬಲ ದಲ್ಲಿ ಇಡೀ ಇಡೀ ಮನೆ ಆಸ್ತಿ ಪಾಸ್ತಿ ಸರ್ವಸ್ವವನ್ನೂ ಅಡವಿಟ್ಟ ಸುದ್ದಿ ಬಂದು, ಕವಿಯುವ ಕನ್ನೆತ್ತರು ಕಟ್ಟಿದಂತಹ ಮೌನದ ಹಾಗೆ. ಒಡಲಿಗೆ ಬೆಂಕಿ ಬಿದ್ದಂತಹ ಏನು ಮಾತು ಹೇಗೆ ಮಾತು ತೋಚದ ಆಘಾತಗಳು ಇವೆಲ್ಲ. ಒಂದಲ್ಲ ಎರಡಲ್ಲ ಸಾಲು ಸಾಲು.॒.. ಗಂಗಡಿಕಲ್ಲು, ಕುದುರೆ ಮುಖ, ಪಶ್ಚಿಮ ಘಟ್ಟ, ಶರಾವತಿ ಕೊಳ್ಳ, ಕೈಗಾ, ನರ್ಮದಾ ತುಂಗಭದ್ರಾ… ನೇತ್ರಾವತಿ ನದಿ, ಮೊನ್ನೆ ಮೊನ್ನೆಯಷ್ಟೇ – ಎಸ್ ಇ ಜಡ್.
ನಮ್ಮ ಅಂದಿನ ಪ್ರಾಥಮಿಕ ಪಠ್ಯ ದಲ್ಲಿ ‘ಮೈನಾಹಕ್ಕಿ ಹಾಡಿತು ಹಾಡು…’ ಎಂಬೊಂದು ಹಾಡಿತ್ತು. ಮೈನಾಹಕ್ಕಿ ಯೊಂದು ಮರದ ಮೇಲೆ ಗೂಡು ಕಟ್ಟಿಕೊಂಡು ಮೊಟ್ಟೆ ಇಟ್ಟು ಮರಿ ಮಾಡಿ ಸುಖದಿಂದಿರುವಾಗ, ತುಂಟಾ ಬಂದ ಕಣ್ಣನಿಕ್ಕಿ| ಹೊಡೆಯುವೆನೆಂದಾ ಕಲ್ಲು ಹೆಕ್ಕಿ| ಮರಿಗಳು ಚಿಲಿಪಿಲಿ ಎಂದವು ಬಿಕ್ಕಿ| ಬೇಡಾ ಎಂದಿತು ಮೈನಾ ಹಕ್ಕಿ| ಆದರೆ ಆ ಹುಡುಗ ಕೇಳಿದನೆ? ಊಹೂಂ. ನೋಡೀ ನೋಡೀ ಗುರಿಯನ್ನಿಟ್ಟ| ತುಂಟಾ ಹುಡುಗಾ ಹೊಡೆದೇ ಬಿಟ್ಟ| ಹಾರಿತು ಹಕ್ಕಿ ಒಮ್ಮೆಲೆ ಚೀರಿ| ಹಿಂದೆಯೆ ಹೋದವು ಮರಿಗಳು ಹಾರಿ| ಇದು ಮ.ಶ.ರಾ. (ಮಚ್ಚೇರಿ ಶಂಕರ ನಾರಾಯಣ ರಾವ್) ಎಂಬ ಮಕ್ಕಳ ಕವಿ ಬರೆದ ಕವನ. ನಮ್ಮ ಗೋವಿಂದ ಮಾಸ್ಟರು ಪಾಠ ಮಾಡುವಾಗ ಈ ಕವನ ನಾಟಕವಾಗಿ ಬಿಡುತ್ತಿತ್ತು. ಅವರು ಸ್ವತಃ ಮೈನಾ ಹಕ್ಕಿಯಾಗಿ ಕೈಯೆತ್ತಿ ‘ಬೇಡಾ…’ ಎಂದು ರಾಗವತ್ತಾಗಿ ಎಳೆದು ಹಾಡುವಾಗ ನಮಗೆ ತಳಮಳ ವಾಗುತಿತ್ತು. ಇಡೀ ಪದ್ಯವನ್ನು ಅವರು ಅಭಿನಯಪೂರ್ವಕ ಹಾಡುವ ಹೊತ್ತಿಗೆ ನಮಗೆ ಅಯ್ಯೊ, ಆ ತುಂಟ ಹುಡುಗ ಹಾಗೆ ಏಕೆ ಮಾಡಿದನಪ್ಪ, ಮಾಡಬಾರ ದಿತ್ತು ಅಂತೆಲ್ಲ ಅನಿಸಿ ಬೇಸರವಾಗು ತ್ತಿತ್ತು. ಹೀಗೆ ಒಂದು ಹಾಡು ಅದು ನಾಟಕವೂ ಆಗಿ ಹಾಡೂ ಆಗಿ ಪ್ರಾಣಿ ಪಕ್ಷಿ ಪರಿಸರ ಎಲ್ಲದರ ಬಗ್ಗೆ ಪ್ರೀತಿ ಯನ್ನು ಬಾಲ ಮನಸ್ಸಿಗೆ ತಾಯಿಹಾಲಿನ ಹರಿವಿನಷ್ಟು ಸುಲಲಿತವಾಗಿ ಉಣಿಸುತ್ತಿತ್ತು. ಅಂದು ಹಕ್ಕಿಸಂಸಾರದ ಒಂದು ಪದ್ಯ ವಾಗಿ ತಲೆಯಲ್ಲಿ ಹೊಕ್ಕಿದ ಅದು ಇಂದು ಹೊಸಹೊಸ ಅರ್ಥ ಬಿಟ್ಟುಕೊಳ್ಳುತ್ತಿದೆ. ಗುಳೆ ಎಬ್ಬಿಸುವುದು, ತಲಾಂತರದಿಂದ ಬಾಳಿ ಬಂದ ಜಾಗವನ್ನು ಬಿಟ್ಟು ಓಡಿಸು ವುದು, ಇತ್ಯಾದಿ ಇವೆಲ್ಲದರ ರೂಪಕ ಎನಿಸುತ್ತಿದೆ. ಕಾಡುಗಳು ತರುಲತೆ ಮೃಗಪಕ್ಷಿಕೀಟ ವಿಹೀನವಾಗುವುದನ್ನು, ನದಿಗಳು ಜಲವಿಹೀನವಾಗುವುದನ್ನು, ಗದ್ದೆ ತೋಟಗಳು ಸಿಮೆಂಟಿನ ಮನೆ ಕಾರ್ಖಾನೆಗಳಾಗುವುದನ್ನು, ಬೆಟ್ಟ ಗುಡ್ಡ ಗಳು ಅಳಿದು ಹೊಸತಾಗಿ ಬೂದಿ ಗುಡ್ಡೆ ಗಳೇಳುವುದನ್ನು ಸುಮ್ಮನೆ ಒಮ್ಮೆ ಊಹಿಸಿಕೊಳ್ಳಿ…. ಲೇಖಕ ಕಲಾವಿದರಾದಿ ಯಾಗಿ ನಮ್ಮ ಕನ್ನಡಮನಸ್ಸುಗಳು ಸಂಘಟನೆಗಳು ಈವಿರುದ್ಧ ನಡೆಸಿದ ಹೋರಾಟ ನೆನಸಿಕೊಳ್ಳಿ….
ಪ್ರತಿಯೊಂದು ಸರಕಾರ ಬಂದಾಗಲೂ ಜನ ಅಳಿದುಳಿದ ಆಸೆಗಳನ್ನು ಒಗ್ಗೂಡಿಸು ತ್ತಾರೆ. ನಿರೀಕ್ಷೆ ಆವಾಹಿಸಿಕೊಂಡು ಸರಕಾರದತ್ತ ಮುಖವೆತ್ತುತ್ತಾರೆ. ಪ್ರತಿ ಸಲವೂ ಆಸೆಗಣ್ಣಿಗೆ ಮಣ್ಣು ಬೀಳುತ್ತದೆ. ಸ್ವಾರ್ಥಪ್ರಭುತ್ವಗಳು ಯಾವತ್ತೂ ನೋವಿಗೆ ಸತ್ಯಕ್ಕೆ ಸಹಜಕ್ಕೆ ಸ್ಪಂದಿಸುವುದಿಲ್ಲ. ಅಪರಾಧ ಮಾಡುತ್ತ ಸಮರ್ಥಿಸಿ ಕೊಳ್ಳುತ್ತವೆ. ಎದುರು, ನಂಬಿ ಅಧಿಕಾರ ಕೊಟ್ಟು ಒಡೆಯರಾದರೂ ಸೇವಕರಂತೆ ಕೈಕಟ್ಟಿ ನಿಂತಿರುವ ನಾವು. ಮೊದಲೇ ನಾಳೆ ಹೇಗೋ ಏನೋ ಎಂಬ ವಿಚಿತ್ರ ತಲ್ಲಣದಲ್ಲಿ ಇಂದನ್ನು ಕಳೆಯುತ್ತಿದ್ದೇವೆ. ಇಂದಿರುವ ಗಿಡ ನಾಳೆಗಿಲ್ಲ, ಈ ಹೂವು ನಾಳೆಗಿಲ್ಲ. ಈ ಚಿಟ್ಟೆ ಈ ಹಕ್ಕಿ ಕೀಟ ಕೆರೆ ಕೊಳ್ಳ ನಾಳೆಗಿಲ್ಲ-ಎಂಬ ಕಳವಳವೇ ಸಾಕಿತ್ತು. ಈಗ ನೋಡಿದರೆ ಈ ಗುಡ್ಡ ವಿಲ್ಲ. ಈ ನದಿಯೇ ಇರಲಿಕ್ಕಿಲ್ಲ… ಎಂಬ ಪರಿಸ್ಥಿತಿ! ಕೆರೆಯಂ ಕಟ್ಟಿಸು ಎನ್ನುತ್ತ ಮಗುವಿಗೆ ಹಾಲೂಡಿ ಬೆಳೆಸಿದ ಪರಂಪರೆಯ ಕನ್ನಡ ಮನಸ್ಸು ನಮ್ಮದು. ಆ ಮಕ್ಕಳು ಬೆಳೆಯುತಿದ್ದಂತೆ ‘ಕೆರೆಯಂ ಮುಚ್ಚಿಸು ಸಮುಚ್ಚಯಂ ಕಟ್ಟಿಸು’ ಎಂಬುದಕ್ಕೆ ಕಿವಿಗೊಡಬೇಕಾಯಿತೆ? ಕೆರೆ ಕಟ್ಟಿಸಿದವರ (ಬತ್ತಿಸಿದವರ ಮುಚ್ಚಿಸಿ ದವರ) ಕತೆಗಳಿವೆ, ಆದರೆ ಎಂದಾದರೂ ನದಿ ಸೃಷ್ಟಿಸಿದ ಮನುಷ್ಯರ ಕುರಿತು ಕೇಳಿದ್ದುಂಟೆ? ಅದು ಸಂಪೂರ್ಣ ಪ್ರಕೃತಿದತ್ತ. ತನ್ನ ತಾನೇ ಶೋಧಿಸಿ ಕೊಂಡು ಪ್ರವಹಿಸುವ ಪಾತ್ರ. ಭೂಮಿ ಯೊಡಲ ಸಂಜೀವಿನಿ. ಎಲ್ಲ ಗೊತ್ತಿದ್ದೂ ತಿಳಿವು ತಳ್ಳಿಕೊಂಡು ಜೀವಜಾಲದ ಮೂಲಕ್ಕೇ ಕೈ ಹಾಕಹೊರಟಿರುವ ಪ್ರಭುತ್ವದ ಧೋರಣೆಗಳ ಅರ್ಥವೇನು?
ಸದಾ ಮಂಥನದ ಜಗವಿದು. ಕುದಿತವೋ ಮಂಥನವೋ, ಒಮ್ಮೆ ವಿಷ ಬಂದೇ ಬರುತ್ತದೆ, ಪ್ರಪಂಚದಲ್ಲಿಯೂ ಜೀವನದಲ್ಲಿಯೂ, ದೈನಂದಿನ ಬದುಕಿ ನಲ್ಲಿಯೂ, ನಮ್ಮ ಮನಸ್ಸಿನಲ್ಲಿಯೂ, ನಿತ್ಯವೂ. ಆಗೆಲ್ಲ ನಂಜನ್ನು ಜಗಕೆ ಬಿಡದೆ ನುಂಗಿ ಬಿಡುವ ನಂಜುಂಡರ ಹಾಗೂ ಅವರೊಳಗೆ ಅದು ಇಳಿದು ಅನಾಹುತ ಮಾಡದಂತೆ ಕಂಠದಲ್ಲೇ ಒತ್ತಿಡುವ ಉಮೆಯರ ಸಂಖ್ಯೆ ವಿಪುಲ ವಿತ್ತು. ಈಗ ಅಂಥವರ ಸಂಖ್ಯೆ ಕ್ಷಯಿ ಸಿದೆ. ಸಮಸ್ಯೆಯ ಮೂಲವಿರುವುದು ಇಲ್ಲಿ, ಹೀಗೆ, ತ್ಯಾಜ್ಯದ ವಿಲೇವಾರಿಯಲ್ಲಿ. ಅದೇ ಎಲ್ಲಕ್ಕಿಂತ ಕಷ್ಟದ್ದು. ಎಂತಲೇ ವಿಷಯುಕ್ತ ತ್ಯಾಜ್ಯಗಳೇ ದೇಶವನ್ನು ಆಪೋಶನ ತೆಗೆದುಕೊಳ್ಳಲು ಹೊರಟಿವೆ.
ಜೀವ – ಜೀವನಗಳನ್ನು ಬಲಿ ಕೊಟ್ಟಾದರೂ ಉದ್ಯಮಗಳು ಉಳಿಯ ಬೇಕೆ? ಯಾರಿಗಾಗಿ? ಜನಪರ ಕಾಳಜಿ ಇದೇ ಎನುವ ಯಾವುದೇ ಸರಕಾರ ದೆದುರು ಇಂದು ಜನಮನ ಗೆಲ್ಲುವ ಒಂದು ಅಪೂರ್ವ ಅವಕಾಶವಿದೆ. ಅವಿವೇಕಕ್ಕೆ ಹುಚ್ಚು ಅಮಲಿಗೆ ಬಲಿ ಯಾಗದೆ ಫಲವತ್ತಾದ ನೆಲಗದ್ದೆ ತೋಟ ಚರಾಚರ ಜೀವಿಗಳ ಬದುಕುವ ಹಕ್ಕಿಗೆ ಸ್ಪಂದಿಸುವ (ಭೂಮಿಯನ್ನು ಗುಡಿಸಿ ಗುಂಡಾಡಿಸಲೆಂದೇ ಇರುವ ಕಡಿಮೆ ಸಂಖ್ಯೆಯ ಲಾಭಕೋರರ ಮಾತನ್ನು ಧಿಕ್ಕರಿಸಿ) ಜನಮತಕ್ಕೆ ಸ್ಪಂದಿಸುವ ಸುವರ್ಣ ಅವಕಾಶವಿದು. ನೋವಿಗೆ ಬದುಕಿಗೆ ಸ್ಪಂದಿಸುವ ಸರಕಾರಗಳಿಗೆ ಯಾವತ್ತೂ ಸೋಲಿಲ್ಲವೆಂಬುದನ್ನು ಮನಗಂಡು ತಕ್ಷಣವೇ ಅದು ಕಾರ್ಯೋನ್ಮುಖವಾಗಬೇಕು.
ಇದು ಉದ್ದ ಮಾತು ಆಡುವ ಸಮಯವಲ್ಲ. ಕಾಲವೂ ಅಲ್ಲ. ಸಂಕ್ಷಿಪ್ತ ಹೇಳಬೇಕೆಂದರೆ – ಗಣಿಗಾರಿಕೆ ಈ ಕ್ಷಣ ನಿಲ್ಲಬೇಕು. ಅಭಿವೃದ್ದಿಗೊಂದು ಮಿತಿ ಯಿಲ್ಲ. ಆ ಮಿತಿಯನ್ನು ನಾವೇ ನಿರ್ಧರಿಸಬೇಕು. ನಮಗಿಷ್ಟು ಸಾಕು ಎಂಬುದು ಇವತ್ತಿನ ಮಂತ್ರವಾಗಬೇಕು. ನದಿ ಒಣಗಿದಲ್ಲಿ ಲೋಕಜೀವನ ಒಣಗುತ್ತದೆಯಾಗಿ ನದಿಗೆ ನೀರಿಗೆ, ‘ಜೀವನ’ ಎಂಬ ಹೆಸರೂ ಇದೆ ಎಂದು ಹೇಳಿದರು.
ಇಂದಿನಿಂದ ಮೂರು ದಿನಗಳ ಕಾಲ ಮೂಡಬಿದ್ರಿಯ ರತ್ನಾಕರ ವರ್ಣಿವೇದಿಕೆ, ಗಾನಯೋಗಿ ಪುಟ್ಟರಾಜ ಗವಾಯಿ ಸಭಾಂಗಣದಲ್ಲಿ ವಿಚಾರ ಗೋಷ್ಠಿಗಳು, ಕವಿ ಸಮಯ, ಕವಿ ನಮನ, ಮಾತಿನ ಮಂಟಪ, ನ್ಥತ್ಯ ರೂಪಕ,ನಾಟಕ, ಸುಗಮ ಸಂಗೀತ, ಪ್ರಶಸ್ತಿ ಪುರಸ್ಕಾರಗಳು ನಡೆಯಲಿವೆ
ಆಳ್ವಾಸ್ ನುಡಿಸಿರಿಯ ನೆಪದಲ್ಲಿ ಇವತ್ತು ನಿಮ್ಮೊಂದಿಗೆ ಮಾತನಾಡುವ ಭಾಗ್ಯ ನನಗೆ ಕೂಡಿ ಬಂದಿದೆ. ನನ್ನನ್ನು ವಾಗ್ಮಿಯಾಗಿ ಅಲ್ಲ, ಲೇಖಕಿಯಾಗಿ ಕರೆದಿರುವುದರಿಂದ ನನ್ನ ಭಾಷಣದ ಬಗ್ಗೆ ನಿಮಗೆ ಯಾವ ಭ್ರಮೆಗಳೂ ಇರುವುದಿಲ್ಲ ಎಂಬ ಧೈರ್ಯದಿಂದಿದ್ದೇನೆ. ಆದ್ದರಿಂದ ನಾನು ನಿರುಮ್ಮ ಳತೆಯಿಂದ ನಿಮ್ಮೊಂದಿಗೆ ಇಂದು ಹೇಳಿಕೊಳ್ಳಬೇಕು ಎಂದು ಕಂಡದ್ದನ್ನು ಹೇಳಿಕೊಳ್ಳಲು, ನಿವೇ ದಿಸಿ ಕೊಳ್ಳಲು ಹೊರಟಿದ್ದೇನೆ.
ನಮ್ಮೆಲ್ಲ ಜನಪದ ಕವಿಗಳ, ಕನ್ನಡದ ಆಧುನಿಕ ಪೂರ್ವ ಆಧುನಿಕೋತ್ತರ ಮಹತ್ವದ ಲೇಖಕಿಯರ ಲೇಖಕರ, ಚಿಂತಕರ, ನನ್ನ ಸಹ ಲೇಖಕಿಯರ ಲೇಖಕರ, ಮುಂಬರಲಿರುವ ಸಾಲುಸಾಲು ಬರಹ ಗಾರರ ಕಲಾವಿದರ ಸಂತತ ಹರಿವಿನ ನಡುವೆ ಇವತ್ತು ನಾನೊಂದು ಹನಿಬಿಂದುವಾಗಿ ಇಲ್ಲಿ ನಿಂತಿ ದ್ದೇನೆ.
ಈ ಸಂದರ್ಭದಲ್ಲಿ ನನ್ನ ತಂದೆ ತಾಯಿ, ಅತ್ತೆ ಮಾವ, ಪತಿ, ನನ್ನೆಲ್ಲ ಸೋದರ ಸೋದರಿಯರನ್ನು, ಕುಟುಂಬಸ್ಥರನ್ನು, ಗೆಳೆಯ ಗೆಳತಿಯರನ್ನು, ಅಕ್ಷರಲೋಕಕ್ಕೆ ಕಣ್ತೆರೆಸಿದ ಎಲ್ಲ ಗುರುಗಳನ್ನು, ಸದಾ ಪ್ರೋತ್ಸಾಹದ ನುಡಿಗಳಿಂದ ಬರೆಯಲು ಉತ್ತೇಜಿಸುತ್ತಿದ್ದ ಶ್ರೀಮತಿ ಅನುಪಮಾ ನಿರಂಜನರನ್ನು, ನನ್ನ ಬರವಣಿಗೆಯ ಆಕಾಶವನ್ನು ವಿಸ್ತರಿಸಿದ ಶ್ರೀ ಪಿ. ಲಂಕೇಶ್ ಹಾಗೂ ನನ್ನ ಪ್ರಜ್ಞೆಯನ್ನು ಬೆಳಗಿ ದ ಶ್ರೀ ಕೆ.ವಿ. ಸುಬ್ಬಣ್ಣ ನವರನ್ನು ಗೌರವ ಪ್ರೀತ್ಯಾದರಪೂರ್ವಕ ನೆನೆಯುತಿದ್ದೇನೆ.
ಇಂದು ಕನ್ನಡ ಮನಸ್ಸು ಮತ್ತು ಜೀವನ ಮೌಲ್ಯಗಳು, ಧರ್ಮ, ನಮ್ಮ ಪರಿಸರ ಮುಂತಾದವುಗಳ ಕುರಿತು ಇಲ್ಲಿ ನಾವೆಲ್ಲರೂ ಕೂಡಿ ನಡೆಯುವ ಜಿಜ್ಞಾಸೆ, ಆತ್ಮನಿರೀಕ್ಷಣೆಗಳು ಖಂಡಿತವಾಗಿಯೂ ಒಂದು ಅರ್ಥಪೂರ್ಣ ಯೋಚನಾಕ್ರಮವನ್ನು ಬೆಳೆಸುತ್ತದೆಂದು ನನ್ನ ನಂಬಿಕೆ ಹಾಗೂ ಆಶಯ ವಾಗಿದೆ.
ವಿವಿಧ ಪ್ರಕಾರಗಳ ಮೂಲಕ ಇಲ್ಲಿ ನಡೆಯಲಿರುವುದು ಚಿಂತನಯಜ್ಞ. ಹೊಸನಾಡೊಂದನು ಕಟ್ಟು ವ ಕನಸಿನಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳ, ಹೊಸ ಪೀಳಿಗೆಯ, ಸಮ್ಮುಖದಲ್ಲಿ ನಡೆಯುತ್ತಿರುವ ಈ ಕಾರ್ಯ ಇವತ್ತಿನ ಅಗತ್ಯ ಕೂಡ. ಕನಸುಗಳೇ ನಿಧಾನ ಸಾಯುತ್ತಿರುವ ಅಥವಾ ಕನಸುಗಳ ಏಕತಾನತೆಯ ಈ ಹೊತ್ತಿನಲ್ಲಿ, ಬೌದ್ಧಿಕವಾಗಿಯೂ ಸಾಮಾಜಿಕವಾಗಿಯೂ ಕ್ರಿಯಾಶೀಲಮಾರ್ಗ ವನ್ನು ಶೋಧಿಸಿಕೊಂಡು ಹೊರಟಿರುವುದು, ತನ್ನ ಸಂಕಲ್ಪಗಳನ್ನು ಸಾಧಿಸುವತ್ತ ನವನವೀನ ಪರಿ ಕಲ್ಪನೆಗಳನ್ನು ಹೊಂದಿರುವುದು, ಅದಕ್ಕಾಗಿ ಕರ್ತೃತ್ವ ಶಕ್ತಿಯುಳ್ಳ ಎಳೆಯರ ಸುಮನಸ್ಕರ ಒಂದು ಪಡೆಯನ್ನೇ ಕಟ್ಟಿರುವುದು – ಈ ಎಲ್ಲವೂ ಶ್ರೀ ಮೋಹನ ಆಳ್ವ ಅವರನ್ನು ಅತ್ಯಂತ ವಿಸ್ಮಯಾಭಿ ಮಾನದಿಂದ ನೋಡುವಂತೆ ಮಾಡಿವೆ. ಇತ್ತೀಚೆಗೆ ನೆರೆಪೀಡಿತರಿಗೆ ಸ್ಪಂದಿಸಿದ ರೀತಿಯಂತೂ ಸಂಸ್ಥೆಯನ್ನು ಇನ್ನೊಂದೇ ಎತ್ತರಕ್ಕೆ ಒಯ್ದಿದೆ. ಪ್ರಕೃತ ‘ನುಡಿಸಿರಿ’ಯ ಕಲ್ಪನೆಯೂ ಸೇರಿ ‘ಆಳ್ವಾಸ್ ಕನ್ನಡ ಮನಸ್’ ಅನ್ನು ಹಾರ್ದಿಕವಾಗಿ ನಾನು ಅಭಿನಂದಿಸುತ್ತಿದ್ದೇನೆ.
ಅದೇನು ಪಕ್ಕಾ ಹಾಡುಗಾರಿಕೆ ಎನ್ನುವಂತಿಲ್ಲ. ಕಂಠ ಹೇಗಿದೆಯೋ ಹಾಗೆ ಯಾವ ಅಂಜಿಕೆ ಅಳು ಕು ಇಲ್ಲದೆ, ದೇವರಲ್ಲವೆ; ಅವನೇ ಕೊಟ್ಟ ದನಿಯಲ್ಲವೆ; ಹೇಗೆ ಹಾಡಿದರೂ ತಪ್ಪಿಲ್ಲ ಎಂಬ ಗಟ್ಟಿ ನಂಬಿಕೆಯಲ್ಲಿ ಧೈರ್ಯ ವಾಗಿ ನಡೆಯುವ ಹಾಡುಗಾರಿಕೆ. ಭಕ್ತಿಗೂ ಅದಕ್ಕೂ ತಾಳೆ ಇರುತ್ತಲೂ ಇರಲಿಲ್ಲ. ಸಂಪ್ರದಾಯವೋ ಪದ್ಧತಿಯೋ ಎಂದ ಮೇಲೆ ಎಷ್ಟೋ ಸಲ ‘ಶಾಸ್ತ್ರ’ಕ್ಕೆ ಮಾಡುವ ‘ಭಜನೆಯ ಕೆಲಸ’ವೇ ಅದಾಗಿದ್ದರೂ ಅದರ ಪರಿಣಾಮ ಮಾತ್ರ ಈಗ ಯೋಚಿಸಿದರೆ ವಿಶೇಷ ವೆನಿಸುತ್ತದೆ. ಹಾಗೆ ನೋಡಿದರೆ ನಮಗಂದು ಸ್ವರಸಂಸ್ಕಾರ ಮತ್ತು ಕಾವ್ಯಸಂಸ್ಕಾರ ನೀಡುತಿ ದ್ದುದು ಮುಖ್ಯವಾಗಿ ಈ ನಿತ್ಯಭಜನೆಯೇ. ಅಂದು ಹಾಗೆ ನಮ್ಮೊಳಗಿಳಿಯುತ್ತಿದ್ದ ದಾಸರಪದ ಗಳು, ವಚನಗಳು, ಶ್ಲೋಕಗಳು -ಒಂದೇ ಎರಡೆ.
ತಾಳುವಿಕೆಗಿಂತನ್ಯ ತಪವು ಇಲ್ಲ -ಎಂದ,
ಉಕ್ಕು ಹಾಲಿಗೆ ನೀರ ಇಕ್ಕುವಂದದಿ ತಾಳು-
ತಲ್ಲಣಿಸದಿರು ಕಂಡ್ಯ ತಾಳು ಮನವೆ-
ಬುದ್ಧಿಯೊಳು ತನುಮನವ ತಿದ್ದಿ ಕೊಳ್ಳಲು ಬೇಕು – ಎಂದ ಕನ್ನಡ ಮನಸ್ಸು ನಮ್ಮದು.
ಟೇಪ್‌ರೆಕಾರ್ಡರ್‌ನ ಆಗಮನ ದಿಂದ, ಅದರದು ಪಾಪ ಏನೂ ತಪ್ಪಿಲವಾದರೂ, ಮನೆಮನೆಗಳಲ್ಲಿ ನಮ್ಮದೇ ಪೆಟೆಪೆಟೆ ಸ್ವರದಲ್ಲಾದರೂ ಹೀಗೆ ಎರಡು ಹಾಡು ಹೇಳಿಕೊಳ್ಳುವ ಧೈರ್ಯ ಹೊರಟು ಹೋಯಿತು. ಧ್ವನಿಮುದ್ರಿಕೆಯ ತಂತ್ರಜ್ಞಾನದಿಂದ ಸಾವಿರ ಲಾಭ ವಾದರೂ ಹಣತೆ ದೀಪದಂತೆ ಮನೆ ಮನೆಗಳನ್ನು ಬೆಳಗುತಿದ್ದ, ನಿತ್ಯದ ಹಾಡುವಿಕೆಯಿಂದ ಧಮನಿಯೊಳಗೆ ಲೀಲಾಜಾಲವಾಗಿ ಸೇರಿ ಹೋಗುತಿದ್ದ ದಾಸರ ಪದಗಳ ಅಭಂಗಗಳ ಭಜನೆಗಳ ಆ ಶಬ್ಧಾಂಬುಧಿಗಳು ಬತ್ತಿ ಹೋಗಿ ಬಿಟ್ಟವಲ್ಲ. ‘ನಿತ್ಯ ಭಜನೆ’ ಒಂದು ಗೇಲಿಯ ಶಬ್ದವಾಯಿತು. ನಮ್ಮದೇ ದನಿಯಲ್ಲಿ ಸಣ್ಣಗೆ ಹಾಡುತ್ತ ಕೆಲಸ ಸಾಗಿಸುವ ಬದುಕಿನ ಮಾರ್ಗವನ್ನೇ ಬದಲಿಸಿ ಕೊಂಡೆವು ನಾವು.
ಭಾಷೆ ಕಳೆಯುವುದು ಯಾವಾಗ? ಹೀಗೆ, ನಮ್ಮ ಬದುಕಿನ ಕ್ರಮವೇ ಬದಲಾದಾಗ.
ಗದ್ದೆ ಹೋಯ್ತು, ಪ್ರಕೃತಿ ಹೋಯ್ತು, ನಮ್ಮ ಕಾಯಕಗಳ ಸ್ವರೂಪವೇ ಬದಲಾಯ್ತು.
ಅದರೊಂದಿಗೆ ಮನಸ್ಸೂ ಭಾಷೆಯೂ ಸಹಜವಾಗಿಯೇ ಬದಲಾಗುವುದಷ್ಟೆ? ಬದಲಾಗುವುದೋ ಕಳೆದುಹೋಗುವುದೋ ‘ಸುಸಂಸ್ಕೃತ’ ಎಂಬ ಹೆಸರಿನಲ್ಲಿ ಕೃತಕ ವಾಗುತ್ತ ಹೋಗುವುದೋ ತಿಳಿ ಯದಂತಹ ಒಂದು ಪ್ರಕ್ರಿಯೆ.
ಕನ್ನಡದಂತಹ ಹಲವು ಭಾಷೆಗಳು ಎಚ್ಚರಗೊಂಡು ಅಸ್ಮಿತೆಯಿಂದ ಕಾರ್ಯ ನಿರ್ವಹಿಸಬೇಕಾದ ಕಾಲ ಇವತ್ತು ತೀವ್ರವಿದೆ.
ಕನ್ನಡ ಶಾಲೆಗಳು ಆತಂಕದಲ್ಲಿವೆ. ಕನ್ನಡ ಮಾಧ್ಯಮ ಕೀಳರಿಮೆಯಿಂದಿದೆ, ಇಂಗ್ಲಿಷ್ ಮಾಧ್ಯಮ ಶೂಸು ಸಾಕ್ಸು ದಿಸ್ಸುದ್ಯಾಟುಗಳಿಂದ ನಮ್ಮನ್ನು ಸಾಗರ ದಾಟಿಸುತ್ತೇನೆ ಎನ್ನುತ್ತ ಒಯ್ಯುತ್ತಿದೆ ಎಲ್ಲಿಗೆ? ಯಾವ ಗುಹೆಯೊಳಗೆ? ಆಧುನಿಕ ಕಿಂದರಿಜೋಗಿ ಕತೆಯಿದು. ನಾವು ಆಹ್ವಾನಿಸದೆಯೆ ಇಲ್ಲಿಗೆ ಬಂದು ನಮ್ಮ ಊರುಮನೆ ಶಾಲೆಗಳನ್ನು ಆಕ್ರಮಿಸಿ, ಅವಕಾಶವೆಂಬ ಕಿಂದರಿ ಮೂಲಕ ಪ್ರಾಥಮಿಕದಲ್ಲೇ ಮರುಳು ಗೈದು ಪ್ರಾದೇಶಿಕ ಭಾಷೆಗಳನ್ನೆಲ್ಲ ಒಯ್ದು ಗುಹೆಯೊಳಗೆ ಸಮಾಧಿ ಮಾಡುತ್ತಿರುವ ಜೋಗಿಯಂತಿದೆ, ಇಂಗ್ಲಿಷ್. ನೆನಪಿದೆಯೆ, ಗುಡ್ಡದೊಳಗೆ ಮಾಯ ವಾಗದೆ ಉಳಿದ ಮಗು? – ಅದು ಯಾವುದು? ಹೆಚ್ಚು ಅವಕಾಶದ ಇನ್ನೊಂದರ ಮೋಹ- ಅತಿಮೋಹ-ದಲ್ಲಿ ಕನ್ನಡ ಬೇಡ ಅಂದರೆ ಕನ್ನಡ ರಂಗಭೂಮಿ, ಸಿನೆಮಾ, ಸಾಹಿತ್ಯ ಸಂಗೀತ ಜನಪದಕಾವ್ಯ, ಒಟ್ಟಾರೆ ಇಲ್ಲಿನ ಬಾಳಿ ಬದುಕಿದ ಮಂದಿ ಸಾವಧಾನ ದಲ್ಲಿ ಕಟ್ಟಿಕೊಂಡು ಬಂದ ಒಂದು ಮಹಾನ್ ಪರಂಪರೆಯೇ ಬೇಡ ಅಂದ ಹಾಗಾದೀತು. ಭಾಷೆಯೆಂಬುದು ಕೇವಲ ಅಕ್ಷರಗಳ ಗುಂಪಲ್ಲವಷ್ಟೆ? ಅದು ಭಾವ ಕೋಶದ ಸಮ್ಯಕ್ ಬೀಗದ ಕೈ ಎಂಬುದನ್ನು ಮರೆತರೆ ಹೇಗೆ?
ಮೊನ್ನೆ ನಮ್ಮೂರಿನ ಹೊರವಲಯಕ್ಕೆ ಹೋಗಿದ್ದಾಗ ಹಸಿರು ರೇಶ್ಮೆಯಂಥ ಹೊಳಪು ಬೀರುತ್ತ ಗಾಳಿಗೆ ತುಯ್ಯುತಿದ್ದ ಗದ್ದೆಗಳನ್ನು ಕಂಡೆ. ಯಾಕೋ ನಾನು ಭೂತಕಾಲದಲ್ಲಿ ನಿಂತಿದ್ದೇನೆ ಅನಿಸಿತು. ಅದಕ್ಕೆ ಸರಿಯಾಗಿ ನನ್ನ ಜತೆಗಿದ್ದ ಅಲ್ಲಿನವರು ‘ಇದೊಂದು ನೂರು ನೂರೈವತ್ತು ಎಕರೆ, ಮಾರಾಟ ಆಗಿ ಆಯ್ತು. ಓ ಇಂಥವರು ಅಗ್ಗಕ್ಕೆ ಹೊಡ ಕೊಂಡರು’ ಎಂದರು. ಮಾರಲೇ ಬೇಕಿತ್ತು. ಮುಂದೆ ಇದನ್ನೆಲ್ಲ ಯಾರು ಮಾಡುತ್ತಾರೆ? ಮಕ್ಕಳೆಲ್ಲ ಎಜುಕೇಟೆಡ್, ದೊಡ್ಡ ಕೆಲಸ, ದೂರ ಇದ್ದಾರೆ, ಅವರಿಗೆ ಬೇಡವಂತೆ, ಲೇಬರ್ ಪ್ರಾಬ್ಲಂ ಬೇರೆ, ಮನೆಯಲ್ಲಿರುವುದು ಮುದುಕ ಮುದುಕಿ, ಇದನ್ನೆಲ್ಲ ಎಷ್ಟು ದಿನ ನೋಡಿಕೊಂಡಾರು, ಬೇರೆ ದಾರಿ ಇಲ್ಲ, ಇನ್ನೆಲ್ಲ ಹೀಗೆಯೇ’ ಎಂದರು.
ಇಲ್ಲಿ ಬಹುಮಹಡಿ ಕಟ್ಟಡ ಬರುತ್ತದೆ ಯಂತೆ ಎಂದರು. ನದಿ ನದಗಳು ಕಾಡು ಗದ್ದೆಗಳು ನಂದಿ ಹೋಗುವ ಕಾಲದಲ್ಲಿ ಬಂದು ನಿಂತಿರುವೆವೆ?
ಮನುಷ್ಯನನ್ನು ಕಂಡರೂ ಇವನಿಂದ ಏನು ಲಾಭ ಎಂಬಲ್ಲಿಗೆ ಬಂದು ತಲುಪಿದೇವೆ. ಅದೇನು ಅಚ್ಚರಿಯಲ್ಲ. ಆನೆ ಕಾಣದ ಮೇಲೆ ಇರುವೆ ಕಾಣದ ಮೇಲೆ ಮನುಷ್ಯನೂ ಕಾಣದೆ ಹೋಗು ತ್ತಾನೆ ಎಂಬುದೇ ನಿಯಮ. ಒಟ್ಟಾರೆ ಇದು ಅಂತರ್ಸಂಬಧದ ವಿಷಯ. ಹರಿವ ನೀರನ್ನೂ ಬಿಡದೆ ಕಾಡುವ, ನಿಂತ ಬಂಡೆಗಳನ್ನೂ ಬಿಡದೆ ದೋಚುವ ಲಾಭಕೋರರು ನಮ್ಮೊಳಗೇ ಇರುವರಲ್ಲ. ಓಡಿಸುವುದು ಹೇಗೆ?
ಕಾಲ ಸದಾ ಪರಿವರ್ತನಶೀಲವಾದ್ದು. ಸರಿಯೆ. ಆದರೆ ಪರಿವರ್ತನೆಯ ನೆಪ ದಲ್ಲಿ ಎಲ್ಲೆಲ್ಲೋ ತಧಿಭೃತವಾಗಿ ನಮ್ಮನ್ನು ನಾವು ಯಾವುದಕ್ಕೆ ಮಾರಿಕೊಂಡೆವು?
ನಾವೊಂದು ಅಪಕಲ್ಪನೆಯ ಯುಗಕ್ಕೆ ಮಾರಿಕೊಂಡೆವು ಅಂತ ಅನಿಸುತ್ತಿಲ್ಲವೆ?
ಸೌಂದರ್ಯದ ಬಗ್ಗೆ ಶ್ರೀಮಂತಿಕೆಯ ಬಗ್ಗೆ ಸ್ವಾತಂತ್ರ್ಯದ ಬಗ್ಗೆ ಶಿಕ್ಷಣದ ಬಗ್ಗೆ… ಮಹಿಳೆಯ ಬಗ್ಗೆ ಅಪಕಲ್ಪನೆ… ಬಿಡಿ. ಅವಳ ಒಳಗೊಂದು ಜೀವ ಇದೆಯೆಂಬ ಕಲ್ಪನೆಯೇ ಇಲ್ಲದ ಕಲ್ಪನೆ ಅದು.
ತೀರ ಇತ್ತೀಚೆಗೆ ಇದೇ ನಮ್ಮ ‘ಬೆಳಗಾಗಿ ನಾನೆದ್ದು ಯಾರ್‍ಯಾರ ನೆನೆಯಲಿ… ಎಳ್ಳು ಜೀರೀಗೆ ಬೆಳೆವಂಥ ಭೂತಾಯ ಎದ್ದೊಂದು ಗಳಿಗೆ ನೆನೆದೇನು’ ಎನುವಂಥ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ರಾಜಕಾರಣಿಗಳಿಂದಲೇ ಅನುಮತಿ ಗಿಟ್ಟಿಸಿ ಎಸ್ ಇ ಜಡ್‌ನವರು – ರಾತಾ ರಾತ್ರಿ ಬಾಗಿಲು ತಟ್ಟಿ ‘ಮನೆ ಖಾಲಿ ಮಾಡಿ.’ ಲಾರಿಗಟ್ಟಲೆ ಮಣ್ಣನ್ನು ತೆನೆ ಕಟ್ಟಿದ ಪೈರಿನ ಮೇಲೆ ಸುರಿದು ‘ಈ ಜಾಗ ನಿಮ್ಮದಲ್ಲ, ಬಿಡಿ’ ಎಂದದ್ದು ನೆನಪಿಸಿಕೊಳ್ಳಿ. ಭ್ರೂಣಹತ್ಯೆ ಇನ್ನು ಬೇರೆ ಇದೆಯೇನು? ಗ್ರೆಗರಿಯೆಂಬ ಕೃಷಿ ಜೀವಿಯ ಮನೆ ಕೆಡವಿ ತೋಟ ಹುಡಿ ಗೈದು, ನಿಂತ ನೆಲದಲ್ಲೆ, ದನ ಎಮ್ಮೆ ಕೋಳಿಗಳೂ ಸೇರಿದ, ಆ ಇಡೀ ಕುಟುಂಬವನ್ನು ಪರದೇಶಿ ಮಾಡಿದರು. ಹಿಂದೀ ಸಿನೆಮಾಗಳಲ್ಲಿ ನೋಡಿದ್ದೆವು ಇದನ್ನೆಲ್ಲ. ಅದು ಇತ್ತೀಚೆಗೆ ನಮ್ಮದುರಿಗೇ ಪ್ರತ್ಯಕ್ಷ ಕಂಡಂತಾಯ್ತು….
ಅಭಿವೃದ್ಧಿಯ ಬಗ್ಗೆ ಅಪಕಲ್ಪನೆ.
ಪ್ರಜಾಪ್ರಭುತ್ವದ ದುಷ್ಕಾಲವಿದು. ನಾವೆಲ್ಲಿದ್ದೇವೆ? ನಮ್ಮದೇ ಆಡಳಿತದಲ್ಲಿ ದೀವಾ? ನಾವು ನಾವಾಗಿ ಇದೀವಾ? ನಮ್ಮ ಮನಸ್ಸೇ ಇದು? ಇದು ನಾವೇ ಹೌದೇ? ಅಂತ ನಮ್ಮನ್ನ ನಾವೇ ಮುಟ್ಟಿ ಕೊಳ್ಳುವಂತಹ ಸ್ಥಿತಿ.
ಪೂರ್ವಾತಿಪೂರ್ವ ಕಾಲದಲ್ಲಿ ಒಬ್ಬ ಗಂಡ ಹೆಂಡತಿ ಮಕ್ಕಳು ಇದ್ದರಂತೆ. ಒಂದಿನ ಆಹಾರ ಉರುವಲು ಇತ್ಯಾದಿ ತರಲು ಅವರು ಹೊರಗೆ ಹೋಗುವವರು ಮನೆಗೊಂದು ಜನ ಮಾಡಿ, ಮಕ್ಕಳನ್ನು ಅವರ ವಶ ಕೊಟ್ಟು, ದಯಮಾಡಿ ನಾವು ಹಿಂದಿರುಗಿ ಬರುವವರೆಗೆ ಬೆಂಕಿ ನಂದದಂತೆ ನೋಡಿಕೊಳ್ಳಿ ಎಂದು ಹೊರಟು ಹೋದರಂತೆ. ಹೋದವರು ಎಷ್ಟು ಹೊತ್ತಾದರೂ ಬರಲಿಲ್ಲ. ಬೆಂಕಿ ಉರಿಯುತ್ತ ಉರಿಯುತ್ತ ಇದ್ದ ಉರುವಲೆಲ್ಲ ಖಾಲಿಯಾಯಿತು. ಬೆಂಕಿ ನಂದದಂತೆ ನೋಡಿಕೊಳ್ಳಬೇಕಲ್ಲ, ಇನ್ನೇನು ಮಾಡುವುದು? ವಿಧಿಯಿಲ್ಲದೆ ಆತ ಅವರ ಮಕ್ಕಳನ್ನೇ ಒಂದೊಂದಾಗಿ ಕಡಿದು ಒಲೆಗೆ ತುಂಬಿ ಬೆಂಕಿ ಕಾದ ನಂತೆ. ದಂಪತಿಗಳು ಮನೆಗೆ ಬಂದು ನೋಡುತ್ತಾರೆ, ಬೆಂಕಿ ಉರಿಯುತ್ತಿದೆ. ಸಂತೋಷವಾಯ್ತು. ‘ಅದು ಸರಿ ಮಕ್ಕಳೆಲ್ಲಿ?’ ‘ಒಲೆಗೆ ಹಾಕಿದೆ. ನೀವು ಬೆಂಕಿ ನಂದದಂತೆ ನೋಡಿಕೋ ಎಂದಿರಲ್ಲ’. ಎಂದನಂತೆ ಆತ. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಕಂಡಾಗೆಲ್ಲ ನನಗೆ ನೆನಪಾಗುವುದು ಈ ಕತೆ.
-ಇದೆಲ್ಲ ಹೇಗಿದೆಯೆಂದರೆ
ಜವಾಬ್ದಾರಿ ಹೊತ್ತ ಮಂದಿ ಏನೋ ವಹಿವಾಟು ನಡೆಸಿಕೊಂಡು ಹೋಗುತ್ತಿ ದ್ದಾರೆ ಅಂತ ದೃಢವಾಗಿ ನಂಬಿಕೊಂಡು ನಾವು ಮನೆಮಂದಿ ನಮ್ಮ ನಮ್ಮ ಕೆಲಸ ಕಾರ್ಯ ಕಷ್ಟ ಸುಖ ಹಸಿವೆ ಊಟ ಹಾಡು ಹಸೆ ಕಂಬನಿ ನಗೆ ಮಾತುಕತೆ ಗಳಲ್ಲಿ ನಮ್ಮಷ್ಟಕ್ಕೆ ಮರೆತುಕೊಂಡಿರುವ ಹೊತ್ತಿಗೆ ವಹಿವಾಟು ವಹಿಸಿದ ಮಂದಿ ಹಣದ, ಅಭಿವೃದ್ಧಿಯ ಹುಚ್ಚು ಹಂಬಲ ದಲ್ಲಿ ಇಡೀ ಇಡೀ ಮನೆ ಆಸ್ತಿ ಪಾಸ್ತಿ ಸರ್ವಸ್ವವನ್ನೂ ಅಡವಿಟ್ಟ ಸುದ್ದಿ ಬಂದು, ಕವಿಯುವ ಕನ್ನೆತ್ತರು ಕಟ್ಟಿದಂತಹ ಮೌನದ ಹಾಗೆ. ಒಡಲಿಗೆ ಬೆಂಕಿ ಬಿದ್ದಂತಹ ಏನು ಮಾತು ಹೇಗೆ ಮಾತು ತೋಚದ ಆಘಾತಗಳು ಇವೆಲ್ಲ. ಒಂದಲ್ಲ ಎರಡಲ್ಲ ಸಾಲು ಸಾಲು.॒.. ಗಂಗಡಿಕಲ್ಲು, ಕುದುರೆ ಮುಖ, ಪಶ್ಚಿಮ ಘಟ್ಟ, ಶರಾವತಿ ಕೊಳ್ಳ, ಕೈಗಾ, ನರ್ಮದಾ ತುಂಗಭದ್ರಾ… ನೇತ್ರಾವತಿ ನದಿ, ಮೊನ್ನೆ ಮೊನ್ನೆಯಷ್ಟೇ – ಎಸ್ ಇ ಜಡ್.
ನಮ್ಮ ಅಂದಿನ ಪ್ರಾಥಮಿಕ ಪಠ್ಯ ದಲ್ಲಿ ‘ಮೈನಾಹಕ್ಕಿ ಹಾಡಿತು ಹಾಡು…’ ಎಂಬೊಂದು ಹಾಡಿತ್ತು. ಮೈನಾಹಕ್ಕಿ ಯೊಂದು ಮರದ ಮೇಲೆ ಗೂಡು ಕಟ್ಟಿಕೊಂಡು ಮೊಟ್ಟೆ ಇಟ್ಟು ಮರಿ ಮಾಡಿ ಸುಖದಿಂದಿರುವಾಗ, ತುಂಟಾ ಬಂದ ಕಣ್ಣನಿಕ್ಕಿ| ಹೊಡೆಯುವೆನೆಂದಾ ಕಲ್ಲು ಹೆಕ್ಕಿ| ಮರಿಗಳು ಚಿಲಿಪಿಲಿ ಎಂದವು ಬಿಕ್ಕಿ| ಬೇಡಾ ಎಂದಿತು ಮೈನಾ ಹಕ್ಕಿ| ಆದರೆ ಆ ಹುಡುಗ ಕೇಳಿದನೆ? ಊಹೂಂ. ನೋಡೀ ನೋಡೀ ಗುರಿಯನ್ನಿಟ್ಟ| ತುಂಟಾ ಹುಡುಗಾ ಹೊಡೆದೇ ಬಿಟ್ಟ| ಹಾರಿತು ಹಕ್ಕಿ ಒಮ್ಮೆಲೆ ಚೀರಿ| ಹಿಂದೆಯೆ ಹೋದವು ಮರಿಗಳು ಹಾರಿ| ಇದು ಮ.ಶ.ರಾ. (ಮಚ್ಚೇರಿ ಶಂಕರ ನಾರಾಯಣ ರಾವ್) ಎಂಬ ಮಕ್ಕಳ ಕವಿ ಬರೆದ ಕವನ. ನಮ್ಮ ಗೋವಿಂದ ಮಾಸ್ಟರು ಪಾಠ ಮಾಡುವಾಗ ಈ ಕವನ ನಾಟಕವಾಗಿ ಬಿಡುತ್ತಿತ್ತು. ಅವರು ಸ್ವತಃ ಮೈನಾ ಹಕ್ಕಿಯಾಗಿ ಕೈಯೆತ್ತಿ ‘ಬೇಡಾ…’ ಎಂದು ರಾಗವತ್ತಾಗಿ ಎಳೆದು ಹಾಡುವಾಗ ನಮಗೆ ತಳಮಳ ವಾಗುತಿತ್ತು. ಇಡೀ ಪದ್ಯವನ್ನು ಅವರು ಅಭಿನಯಪೂರ್ವಕ ಹಾಡುವ ಹೊತ್ತಿಗೆ ನಮಗೆ ಅಯ್ಯೊ, ಆ ತುಂಟ ಹುಡುಗ ಹಾಗೆ ಏಕೆ ಮಾಡಿದನಪ್ಪ, ಮಾಡಬಾರ ದಿತ್ತು ಅಂತೆಲ್ಲ ಅನಿಸಿ ಬೇಸರವಾಗು ತ್ತಿತ್ತು. ಹೀಗೆ ಒಂದು ಹಾಡು ಅದು ನಾಟಕವೂ ಆಗಿ ಹಾಡೂ ಆಗಿ ಪ್ರಾಣಿ ಪಕ್ಷಿ ಪರಿಸರ ಎಲ್ಲದರ ಬಗ್ಗೆ ಪ್ರೀತಿ ಯನ್ನು ಬಾಲ ಮನಸ್ಸಿಗೆ ತಾಯಿಹಾಲಿನ ಹರಿವಿನಷ್ಟು ಸುಲಲಿತವಾಗಿ ಉಣಿಸುತ್ತಿತ್ತು. ಅಂದು ಹಕ್ಕಿಸಂಸಾರದ ಒಂದು ಪದ್ಯ ವಾಗಿ ತಲೆಯಲ್ಲಿ ಹೊಕ್ಕಿದ ಅದು ಇಂದು ಹೊಸಹೊಸ ಅರ್ಥ ಬಿಟ್ಟುಕೊಳ್ಳುತ್ತಿದೆ. ಗುಳೆ ಎಬ್ಬಿಸುವುದು, ತಲಾಂತರದಿಂದ ಬಾಳಿ ಬಂದ ಜಾಗವನ್ನು ಬಿಟ್ಟು ಓಡಿಸು ವುದು, ಇತ್ಯಾದಿ ಇವೆಲ್ಲದರ ರೂಪಕ ಎನಿಸುತ್ತಿದೆ. ಕಾಡುಗಳು ತರುಲತೆ ಮೃಗಪಕ್ಷಿಕೀಟ ವಿಹೀನವಾಗುವುದನ್ನು, ನದಿಗಳು ಜಲವಿಹೀನವಾಗುವುದನ್ನು, ಗದ್ದೆ ತೋಟಗಳು ಸಿಮೆಂಟಿನ ಮನೆ ಕಾರ್ಖಾನೆಗಳಾಗುವುದನ್ನು, ಬೆಟ್ಟ ಗುಡ್ಡ ಗಳು ಅಳಿದು ಹೊಸತಾಗಿ ಬೂದಿ ಗುಡ್ಡೆ ಗಳೇಳುವುದನ್ನು ಸುಮ್ಮನೆ ಒಮ್ಮೆ ಊಹಿಸಿಕೊಳ್ಳಿ…. ಲೇಖಕ ಕಲಾವಿದರಾದಿ ಯಾಗಿ ನಮ್ಮ ಕನ್ನಡಮನಸ್ಸುಗಳು ಸಂಘಟನೆಗಳು ಈವಿರುದ್ಧ ನಡೆಸಿದ ಹೋರಾಟ ನೆನಸಿಕೊಳ್ಳಿ….
ಪ್ರತಿಯೊಂದು ಸರಕಾರ ಬಂದಾಗಲೂ ಜನ ಅಳಿದುಳಿದ ಆಸೆಗಳನ್ನು ಒಗ್ಗೂಡಿಸು ತ್ತಾರೆ. ನಿರೀಕ್ಷೆ ಆವಾಹಿಸಿಕೊಂಡು ಸರಕಾರದತ್ತ ಮುಖವೆತ್ತುತ್ತಾರೆ. ಪ್ರತಿ ಸಲವೂ ಆಸೆಗಣ್ಣಿಗೆ ಮಣ್ಣು ಬೀಳುತ್ತದೆ. ಸ್ವಾರ್ಥಪ್ರಭುತ್ವಗಳು ಯಾವತ್ತೂ ನೋವಿಗೆ ಸತ್ಯಕ್ಕೆ ಸಹಜಕ್ಕೆ ಸ್ಪಂದಿಸುವುದಿಲ್ಲ. ಅಪರಾಧ ಮಾಡುತ್ತ ಸಮರ್ಥಿಸಿ ಕೊಳ್ಳುತ್ತವೆ. ಎದುರು, ನಂಬಿ ಅಧಿಕಾರ ಕೊಟ್ಟು ಒಡೆಯರಾದರೂ ಸೇವಕರಂತೆ ಕೈಕಟ್ಟಿ ನಿಂತಿರುವ ನಾವು. ಮೊದಲೇ ನಾಳೆ ಹೇಗೋ ಏನೋ ಎಂಬ ವಿಚಿತ್ರ ತಲ್ಲಣದಲ್ಲಿ ಇಂದನ್ನು ಕಳೆಯುತ್ತಿದ್ದೇವೆ. ಇಂದಿರುವ ಗಿಡ ನಾಳೆಗಿಲ್ಲ, ಈ ಹೂವು ನಾಳೆಗಿಲ್ಲ. ಈ ಚಿಟ್ಟೆ ಈ ಹಕ್ಕಿ ಕೀಟ ಕೆರೆ ಕೊಳ್ಳ ನಾಳೆಗಿಲ್ಲ-ಎಂಬ ಕಳವಳವೇ ಸಾಕಿತ್ತು. ಈಗ ನೋಡಿದರೆ ಈ ಗುಡ್ಡ ವಿಲ್ಲ. ಈ ನದಿಯೇ ಇರಲಿಕ್ಕಿಲ್ಲ… ಎಂಬ ಪರಿಸ್ಥಿತಿ! ಕೆರೆಯಂ ಕಟ್ಟಿಸು ಎನ್ನುತ್ತ ಮಗುವಿಗೆ ಹಾಲೂಡಿ ಬೆಳೆಸಿದ ಪರಂಪರೆಯ ಕನ್ನಡ ಮನಸ್ಸು ನಮ್ಮದು. ಆ ಮಕ್ಕಳು ಬೆಳೆಯುತಿದ್ದಂತೆ ‘ಕೆರೆಯಂ ಮುಚ್ಚಿಸು ಸಮುಚ್ಚಯಂ ಕಟ್ಟಿಸು’ ಎಂಬುದಕ್ಕೆ ಕಿವಿಗೊಡಬೇಕಾಯಿತೆ? ಕೆರೆ ಕಟ್ಟಿಸಿದವರ (ಬತ್ತಿಸಿದವರ ಮುಚ್ಚಿಸಿ ದವರ) ಕತೆಗಳಿವೆ, ಆದರೆ ಎಂದಾದರೂ ನದಿ ಸೃಷ್ಟಿಸಿದ ಮನುಷ್ಯರ ಕುರಿತು ಕೇಳಿದ್ದುಂಟೆ? ಅದು ಸಂಪೂರ್ಣ ಪ್ರಕೃತಿದತ್ತ. ತನ್ನ ತಾನೇ ಶೋಧಿಸಿ ಕೊಂಡು ಪ್ರವಹಿಸುವ ಪಾತ್ರ. ಭೂಮಿ ಯೊಡಲ ಸಂಜೀವಿನಿ. ಎಲ್ಲ ಗೊತ್ತಿದ್ದೂ ತಿಳಿವು ತಳ್ಳಿಕೊಂಡು ಜೀವಜಾಲದ ಮೂಲಕ್ಕೇ ಕೈ ಹಾಕಹೊರಟಿರುವ ಪ್ರಭುತ್ವದ ಧೋರಣೆಗಳ ಅರ್ಥವೇನು?
ಸದಾ ಮಂಥನದ ಜಗವಿದು. ಕುದಿತವೋ ಮಂಥನವೋ, ಒಮ್ಮೆ ವಿಷ ಬಂದೇ ಬರುತ್ತದೆ, ಪ್ರಪಂಚದಲ್ಲಿಯೂ ಜೀವನದಲ್ಲಿಯೂ, ದೈನಂದಿನ ಬದುಕಿ ನಲ್ಲಿಯೂ, ನಮ್ಮ ಮನಸ್ಸಿನಲ್ಲಿಯೂ, ನಿತ್ಯವೂ. ಆಗೆಲ್ಲ ನಂಜನ್ನು ಜಗಕೆ ಬಿಡದೆ ನುಂಗಿ ಬಿಡುವ ನಂಜುಂಡರ ಹಾಗೂ ಅವರೊಳಗೆ ಅದು ಇಳಿದು ಅನಾಹುತ ಮಾಡದಂತೆ ಕಂಠದಲ್ಲೇ ಒತ್ತಿಡುವ ಉಮೆಯರ ಸಂಖ್ಯೆ ವಿಪುಲ ವಿತ್ತು. ಈಗ ಅಂಥವರ ಸಂಖ್ಯೆ ಕ್ಷಯಿ ಸಿದೆ. ಸಮಸ್ಯೆಯ ಮೂಲವಿರುವುದು ಇಲ್ಲಿ, ಹೀಗೆ, ತ್ಯಾಜ್ಯದ ವಿಲೇವಾರಿಯಲ್ಲಿ. ಅದೇ ಎಲ್ಲಕ್ಕಿಂತ ಕಷ್ಟದ್ದು. ಎಂತಲೇ ವಿಷಯುಕ್ತ ತ್ಯಾಜ್ಯಗಳೇ ದೇಶವನ್ನು ಆಪೋಶನ ತೆಗೆದುಕೊಳ್ಳಲು ಹೊರಟಿವೆ.
ಜೀವ – ಜೀವನಗಳನ್ನು ಬಲಿ ಕೊಟ್ಟಾದರೂ ಉದ್ಯಮಗಳು ಉಳಿಯ ಬೇಕೆ? ಯಾರಿಗಾಗಿ? ಜನಪರ ಕಾಳಜಿ ಇದೇ ಎನುವ ಯಾವುದೇ ಸರಕಾರ ದೆದುರು ಇಂದು ಜನಮನ ಗೆಲ್ಲುವ ಒಂದು ಅಪೂರ್ವ ಅವಕಾಶವಿದೆ. ಅವಿವೇಕಕ್ಕೆ ಹುಚ್ಚು ಅಮಲಿಗೆ ಬಲಿ ಯಾಗದೆ ಫಲವತ್ತಾದ ನೆಲಗದ್ದೆ ತೋಟ ಚರಾಚರ ಜೀವಿಗಳ ಬದುಕುವ ಹಕ್ಕಿಗೆ ಸ್ಪಂದಿಸುವ (ಭೂಮಿಯನ್ನು ಗುಡಿಸಿ ಗುಂಡಾಡಿಸಲೆಂದೇ ಇರುವ ಕಡಿಮೆ ಸಂಖ್ಯೆಯ ಲಾಭಕೋರರ ಮಾತನ್ನು ಧಿಕ್ಕರಿಸಿ) ಜನಮತಕ್ಕೆ ಸ್ಪಂದಿಸುವ ಸುವರ್ಣ ಅವಕಾಶವಿದು. ನೋವಿಗೆ ಬದುಕಿಗೆ ಸ್ಪಂದಿಸುವ ಸರಕಾರಗಳಿಗೆ ಯಾವತ್ತೂ ಸೋಲಿಲ್ಲವೆಂಬುದನ್ನು ಮನಗಂಡು ತಕ್ಷಣವೇ ಅದು ಕಾರ್ಯೋನ್ಮುಖವಾಗಬೇಕು.
ಇದು ಉದ್ದ ಮಾತು ಆಡುವ ಸಮಯವಲ್ಲ. ಕಾಲವೂ ಅಲ್ಲ. ಸಂಕ್ಷಿಪ್ತ ಹೇಳಬೇಕೆಂದರೆ – ಗಣಿಗಾರಿಕೆ ಈ ಕ್ಷಣ ನಿಲ್ಲಬೇಕು. ಅಭಿವೃದ್ದಿಗೊಂದು ಮಿತಿ ಯಿಲ್ಲ. ಆ ಮಿತಿಯನ್ನು ನಾವೇ ನಿರ್ಧರಿಸಬೇಕು. ನಮಗಿಷ್ಟು ಸಾಕು ಎಂಬುದು ಇವತ್ತಿನ ಮಂತ್ರವಾಗಬೇಕು. ನದಿ ಒಣಗಿದಲ್ಲಿ ಲೋಕಜೀವನ ಒಣಗುತ್ತದೆಯಾಗಿ ನದಿಗೆ ನೀರಿಗೆ, ‘ಜೀವನ’ ಎಂಬ ಹೆಸರೂ ಇದೆ ಏನು ವೈದೇಹಿ ತಮ್ಮ ಭಾಷಣ ದಲ್ಲಿ ಹೇಳಿದರು.
ಇಂದಿನಿಂದ ಮೂರು ದಿನಗಳ ಕಾಲ ಮೂಡಬಿದ್ರಿಯ ರತ್ನಾಕರ ವರ್ಣಿವೇದಿಕೆ, ಗಾನಯೋಗಿ ಪುಟ್ಟರಾಜ ಗವಾಯಿ ಸಭಾಂಗಣದಲ್ಲಿ ವಿಚಾರ ಗೋಷ್ಠಿಗಳು, ಕವಿ ಸಮಯ, ಕವಿ ನಮನ, ಮಾತಿನ ಮಂಟಪ, ನ್ಥತ್ಯ ರೂಪಕ,ನಾಟಕ, ಸುಗಮ ಸಂಗೀತ, ಪ್ರಶಸ್ತಿ ಪುರಸ್ಕಾರಗಳು ನಡೆಯಲಿವೆ

ಆಳ್ವಾಸ್ ನುಡಿಸಿರಿ 2010

ಆಳ್ವಾಸ್ ನುಡಿಸಿರಿ 2010

ಆಳ್ವಾಸ್ ನುಡಿಸಿರಿ 2010

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English