ಮಂಗಳೂರು : ನಗರದ ಸ್ಟೇಟ್ ಬ್ಯಾಂಕ್ ನ ನೆಲ್ಲಿಕಾಯಿ ರಸ್ತೆ ಬಳಿಯ ವಿವಿದೋದ್ದೇಶ ಸಹಕಾರಿ ಸಂಘವೊಂದು ತನ್ನ ಹೂಡಿಕೆದಾರರಿಗೆ ಹಣ ಮರಳಿಸದೆ ಮೋಸ ಎಸಗಿರುವುದರಿಂದ ಹೂಡಿಕೆದಾರರು ಡಿವೈಎಫ್ ಐ ನ ನೇತೃತ್ವದಲ್ಲಿ ಸೊಸೈಟಿ ಮೇಲೆ ಮುತ್ತಿಗೆ ಹಾಕಿದ ಘಟನೆ ಗುರುವಾರ ನಡೆದಿದೆ.
ಉದ್ಯಮಶೀಲ ವಿವಿದೊದ್ದೇಶ ಸಂಘ ಎಂಬ ಹೆಸರಿನ ಸಹಕಾರಿ ಸಂಘವು ನಗರದ ಪಂಪ್ ವೆಲ್ ಬಳಿ ತನ್ನ ಮುಖ್ಯ ಕಚೇರಿಯನ್ನು ಹೊಂದಿದ್ದು ಪಿಗ್ಮಿ ಹೆಸರಲ್ಲಿ ಹಲವಾರು ಜನರಿಂದ ಹಣ ಸಂಗ್ರಹಿಸುತ್ತಿದ್ದರೆನ್ನಲಾಗಿದೆ. ಗ್ರಾಹಕರು ತಾವು ತೊಡಗಿಸಿದ ಹಣವನ್ನು ಕೇಳಲು ಬಂದಾಗ ಇಲ್ಲಿನ ಸಿಬ್ಬಂಧಿಗಳು ಸರಿಯಾದ ಉತ್ತರವನ್ನು ನೀಡದೆ ಗ್ರಾಹಕರನ್ನು ಹಿಂದೆ ಕಳುಹಿಸುತ್ತಿದ್ದರು. ಈ ಬಗ್ಗೆ ಗ್ರಾಹಕರು ಸಂಘದ ಏಜೆಂಟ್ ಆದ ಶಾಂಭವಿ ಎನ್ನುವವರಲ್ಲಿ ವಿಚಾರಿಸಿದ್ದಾರೆ. ಈ ಬಗ್ಗೆ ಶಾಂಭವಿ ಸಂಘದ ನಿರ್ದೇಶಕರಲ್ಲಿ ವಿಚಾರಿಸಿದಾಗ ನಿರ್ದೇಶಕರು ಸಂಘವು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದು ಏಪ್ರಿಲ್ 15 ರೊಳಗೆ ಹೂಡಿಕೆದಾರರ ಹಣವನ್ನು ನೀಡುವುದಾಗಿ ತಿಳಿಸಿದ್ದರು. ಆದರೆ ಮೇ ೧೫ ರ ವರೆಗೂ ಹಣ ಹಿಂದಿರುಗಿಸದ ಹಿನ್ನಲೆಯಲ್ಲಿ ಗುರುವಾರ ಹೂಡಿಕೆದಾರರು ಡಿವೈಎಫ್ ಐ ನ ನೇತೃತ್ವದಲ್ಲಿ ಮುತ್ತಿಗೆ ಹಾಕಿದರು.
ತಕ್ಷಣ ಸ್ಥಳಕ್ಕಾಗಮಿಸಿದ ಪಾಂಡೇಶ್ವರ ಠಾಣಾ ಪೊಲೀಸರು ಸಂಘದ ನಿರ್ದೇಶಕ ಪದ್ಮನಾಭ ರೈ ಎಂಬುವವರ ಬಳಿ ಈ ಬಗ್ಗೆ ವಿಚಾರಿಸಿದಾಗ ಸಂಘವು ಗ್ರಾಹಕರಿಗೆ ಸಾಲ ನೀಡಿದ್ದು ಅದು ಮರುಪಾವತಿಯಾಗದೆ ಇದ್ದ ಕಾರಣ ಹಣ ನೀಡಲು ಅಡಚಣೆ ಉಂಟಾಗಿರುವುದಾಗಿ ಹೇಳಿದ್ದಾರೆ. ಆದರೆ ಪೊಲೀಸರು ಈ ಬಗ್ಗೆ ಸೂಕ್ತ ದಾಖಲೆ ಕೇಳಿದಾಗ ದಾಖಲೆ ಪ್ರಸ್ತುತ ಪಡಿಸದ ಹಿನ್ನಲೆಯಲ್ಲಿ ಪೊಲೀಸರು ಆತನನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Click this button or press Ctrl+G to toggle between Kannada and English