ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಚನೆಯಾದ, 28 ಸಚಿವರನ್ನೊಳಗೊಂಡ ಸಚಿವ ಸಂಪುಟ ಸದಸ್ಯರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಸಿದ್ದರಾಮಯ್ಯನವರು ತಮ್ಮ ಸಚಿವ ಸಂಪುಟದಲ್ಲಿ ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗ ಹೀಗೆ ಎಲ್ಲಾ ಸಮುದಾಯಗಳಿಗೂ ಸಾಮಜಿಕ ನ್ಯಾಯವನ್ನು ಒದಗಿಸಿದ್ದಾರೆ. ಬೆಳಗ್ಗೆ 10.30 ಕ್ಕೆ ಸರಿಯಾಗಿ ರಾಜ್ಯಪಾಲರ ರಾಜಭವನದ ಗಾಜಿನ ಮನೆಯಲ್ಲಿ ಹಲವು ಗಣ್ಯರು ಮತ್ತು ಶಾಸಕರ ಉಪಸ್ಥಿತಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ರವರು ಸಚಿವರಿಗೆ ಪ್ರತಿಗ್ನಾವಿಧಿ ಬೋಧಿಸಿದರು.
ಪ್ರಕಾಶ್ ಹುಕ್ಕೇರಿ, ಆರ್.ವಿ.ದೇಶಪಾಂಡೆ, ರಾಮಲಿಂಗರೆಡ್ಡಿ, ಟಿ.ಬಿ. ಜಯಚಂದ್ರ, ಖಮರುಲ್ಲಾ ಇಸ್ಲಾಂ, ರಮಾನಾಥ್ ರೈ, ಹೆಚ್.ಕೆ ಪಾಟೀಲ್, ಶಾಮನೂರು ಶಿವಶಂಕರಪ್ಪ, ವಿ.ಶ್ರೀನಿವಾಸ್ ಪ್ರಸಾದ್, ಡಾ. ಎಚ್.ಸಿ.ಮಹದೇವಪ್ಪ, ಅಂಬರೀಶ್, ವಿನಯ್ ಕುಮಾರ್ ಸೊರಕೆ, ಕೆ.ಜೆ.ಜಾರ್ಜ್, ಎಚ್.ಎಸ್.ಮಹದೇವ ಪ್ರಸಾದ್, ಬಾಬುರಾವ್ ಸಿಂಚನೂರು, ಯು.ಟಿ.ಖಾದರ್, ಸತೀಶ್ ಜಾರಕಿಹೊಳಿ, ಸುರೇಶ್ ತಂಗಡಗಿ, ಎಚ್.ಆಂಜನೇಯ, ಎಂ.ಬಿ.ಪಾಟೀಲ್, ಕೃಷ್ಣ ಬೈರೇಗೌಡ, ದಿನೇಶ್ ಗುಂಡುರಾವ್,ಶರಣ ಪ್ರಕಾಶ್ ಪಾಟೀಲ್, ಅಭಯ್ ಚಂದ್ರ ಜೈನ್, ಉಮಾಶ್ರೀ, ಕಿಮ್ಮನೆ ರತ್ನಾಕರ್, ಸಂತೋಷ್ ಲಾಡ್, ಪಿ.ಟಿ.ಪರಮೇಶ್ವರ್ ಮೊದಲಾದವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಇದೇ ಮೊದಲ ಬಾರಿಗೆ ಶಾಮನೂರು ಶಿವಶಂಕರಪ್ಪ, ಕೆ.ಜೆ.ಜಾರ್ಜ್, ಕಿಮ್ಮನೆ ರತ್ನಾಕರ್, ಯು.ಟಿ.ಖಾದರ್, ಡಾ.ಶರಣ ಪಾಟೀಲ, ಎಂ.ಬಿ.ಪಾಟೀಲ, ಅಭಯಚಂದ್ರ ಜೈನ್ ಮೊದಲಾದವರು ಸಚಿವ ಸ್ಥಾನವನ್ನಲಂಕರಿಸಿದ್ದಾರೆ. ಮಹಿಳಾ ಕೋಟಾದಡಿ ಕನ್ನಡ ಚಿತ್ರನಟಿ ಉಮಾಶ್ರೀ ಸ್ಥಾನ ಪಡೆದಿದ್ದಾರೆ.
ಇನ್ನುಳಿದಂತೆ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ರಮಾನಾಥ್ ರೈ, ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್ ಹಾಗೂ ಯು.ಟಿ.ಖಾದರ್ ಸ್ಥಾನ ಪಡೆದಿದ್ದಾರೆ.
Click this button or press Ctrl+G to toggle between Kannada and English