ಮಂಗಳೂರು- ಜಮ್ಮುತಾವಿ ನವಯುಗ್ ಎಕ್ಸ್ ಪ್ರೆಸ್ ನ ವಿಶೇಷ ಕೋಚ್‌ ಸೌಲಭ್ಯಕ್ಕೆ ಡಾ| ಕೆ. ಜಯಂತ್‌ ಮುರಳಿ ಚಾಲನೆ

4:12 PM, Tuesday, May 21st, 2013
Share
1 Star2 Stars3 Stars4 Stars5 Stars
(No Ratings Yet)
Loading...

Jammu Tavi Navyug Expressಮಂಗಳೂರು : ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂಧಿಗಳಿಗೆ ರೈಲು ಸಂಚಾರದಲ್ಲಿ ವಿಶೇಷ ಕೋಚ್ ಗಳನ್ನು ವ್ಯವಸ್ಥೆ ಗೊಳಿಸಲಾಗಿದ್ದು, ಸೋಮವಾರ ಇಂತಹ ವಿಶೇಷ ರೈಲು ಬೋಗಿಯ ವ್ಯವಸ್ಥೆಯನ್ನು ಒಳಗೊಂಡಿರುವ ಮಂಗಳೂರು- ಜಮ್ಮುತಾವಿ ನವಯುಗ್ ಎಕ್ಸ್ ಪ್ರೆಸ್ ನ ವಿಶೇಷ ಬೋಗಿಗೆ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಸಿಐಎಸ್‌ಎಫ್‌ ದಕ್ಷಿಣ ವಲಯ ಮಹಾನಿರೀಕ್ಷಕ ಡಾ| ಕೆ. ಜಯಂತ್‌ ಮುರಳಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಸಿಐಎಸ್‌ಎಫ್‌, ಬಿಎಸ್‌ಎಫ್‌, ಸಿಆರ್‌ಪಿಎಫ್‌, ಐಟಿಬಿಪಿ, ಎನ್‌ಎಸ್‌ಜಿ, ಎಸ್‌ಎಸ್‌ಬಿ ಹಾಗೂ ಅಸ್ಸಾಂ ರೈಫಲ್ಸ್‌ನ ಸಿಬಂದಿ ಇದರ ಪ್ರಯೋಜನ ಪಡೆಯುವರು. ದೇಶದಲ್ಲಿ 23 ಲಕ್ಷ ಮಂದಿ ಅರೆಸೇನಾ ಸಿಬ್ಬಂದಿ ಇದ್ದಾರೆ. ದೇಶದ ಗಡಿ ರಕ್ಷಣೆ, ಪ್ರಮುಖರ ರಕ್ಷಣೆ, ನಕ್ಸಲ್, ಉಗ್ರರ ವಿರುದ್ಧ ಕಾರ್ಯಾಚರಣೆ, ಮುಕ್ತ ಚುನಾವಣೆ ಹೀಗೆ ನಾನಾ ಹೊಣೆ ಹೊತ್ತಿರುವ ಈ ಸಿಬ್ಬಂದಿಗಳ ಸಂಚಾರಕ್ಕೆ ಪ್ರತ್ಯೇಕ ರೈಲು ಬೋಗಿ ಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದ್ದು, ಇದೀಗ ಸಾಕರಗೊಂಡಿದೆ. ರೈಲ್ವೇ ಸಚಿವಾಲಯ ಹಾಗೂ ಕೇಂದ್ರ ಗೃಹ ಇಲಾಖೆ ಜಂಟಿಯಾಗಿ  ಈ ಯೋಜನೆಯನ್ನು ರೂಪಿಸಿದ್ದು, ಈ  ವಿಶೇಷ ರೈಲ್ವೆ ಕೋಚ್ ಸೌಲಭ್ಯಕ್ಕಾಗಿ  ಸಿಎಪಿಎಫ್ ರೈಲ್ವೆಗೆ ವಾರ್ಷಿಕ 1.56 ಕೋಟಿ ರೂ. ಪಾವತಿಸಲು ನಿರ್ಧರಿಸಿದೆ, ಇದನ್ನು ಪ್ರತಿ ವರ್ಷ ಮುಂಗಡವಾಗಿ ಪಾವತಿಸಲಾಗುತ್ತದೆ ಎಂದರು.

ದೇಶದಲ್ಲಿ ಪ್ರಥಮ ಹಂತದಲ್ಲಿ 7 ರೈಲುಗಳಲ್ಲಿ ಈ ಸೌಲಭ್ಯ ಘೋಷಿಸಲಾಗಿದ್ದು, ದಕ್ಷಿಣ ರೈಲ್ವೆಯಲ್ಲಿ ಚೆನ್ನೈ- ಜಮ್ಮು ತಾವಿ ಹಾಗೂ ಚೆನ್ನೈ- ಡೆಹ್ರಾಡೂನ್‌ ಮತ್ತು ಮಂಗಳೂರು – ಜಮ್ಮು ತಾವಿ ರೈಲುಗಾಡಿಗಳಲ್ಲಿ ಇದು ಆರಂಭಗೊಂಡಿದೆ ಎಂದರು.

ಸಮಾರಂಭದಲ್ಲಿ ಸಿಐಎಸ್ ಎಫ್ ಡೆಪ್ಯೂಟಿ ಕಮಾಂಡೆಂಟ್ ಎನ್ಎಂಪಿಟಿಯ ಎಂ.ಎಲ್.ಮೀನ, ಸಿಐಎಸ್ಎಫ್ ನ ಹಿರಿಯ ಕಮಾಂಡೆಂಟ್ ಅನಿಲ್ ಪಾಂಡೆ, ಹಿರಿಯ ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್ ಮಾಸ್ಟರ್ ಪಿ.ಕೆ.ಶಿವದಾಸನ್ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English