ಪಿವಿಎಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಮಧುಸೂದನ ಡಿ.ಕುಶೆ ನಿಧನ

2:56 PM, Thursday, May 23rd, 2013
Share
1 Star2 Stars3 Stars4 Stars5 Stars
(No Ratings Yet)
Loading...

Madhusudan Kusheಮಂಗಳೂರು : ನೂರು ವರ್ಷ ಇತಿಹಾಸವುಳ್ಳ ಪ್ರತಿಷ್ಠಿತ ಪಿವಿಎಸ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಮಧುಸೂದನ ಡಿ.ಕುಶೆ (78) ಅವರು ಬುಧವಾರ ಆರೋಗ್ಯ ಸಮಸ್ಯೆಯಿಂದಾಗಿ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.

ಕುಶೆ ಅವರ ತಂದೆ ದಿ. ಪುತ್ತು ವೈಕುಂಠ ಶೇಟ್ ಅವರು ಒಂದು ಶತಮಾನದ ಹಿಂದೆ ಸ್ಥಾಪಿಸಿದ ಪಿ.ವಿ.ಎಸ್ ಬೀಡಿ ಸಂಸ್ಥೆಯ ಆಡಳಿತ ಚುಕ್ಕಾಣಿಯನ್ನು ತಮ್ಮ 21 ನೇ ವಯಸ್ಸಿನಲ್ಲಿ ವಹಿಸಿಕೊಂಡ ಮಧುಸೂದನ ಕುಶೆ ಸಂಸ್ಥೆ ಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿ ಜರ್ಮನಿ, ಆಸ್ಟ್ರೇಲಿಯಾ ಮೊದಲಾದ ದೇಶಗಳಿಗೆ ಬೀಡಿಯನ್ನು ರಫ್ತು ಮಾಡುವ ಮೂಲಕ ಕಂಪನಿಯ ಪ್ರಗತಿಗೆ ಕಾರಣರಾದರು. ಹಲವಾರು ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕುಶೆ ಯವರು ಪಿ.ವಿ.ಎಸ್ ನ ಸಹಸಂಸ್ಥೆಗಳಾದ ಪಿವಿಎಸ್ ಎಕ್ಸ್ ಪೋರ್ಟ್, ಪಿವಿಎಸ್ ಪ್ರಿಂಟರ್ಸ್ ಮೊದಲಾದ ಸಂಸ್ಥೆಗಳ ಸ್ಥಾಪಕರಾಗಿ, ಪಿವಿಎಸ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English