ಮಂಗಳೂರು : ಬಂಟ್ವಾಳ ತಾಲೂಕಿನ ಪಜೀರು ಗ್ರಾಮದ ಪಾಣೇಲಬರಿಕೆಯ ಶಾಲಾ ಮುಖ್ಯ ಶಿಕ್ಷಕಿ ಕಮಾಲಾಕ್ಷಿ ಎಂಬುವವರು ಶಾಲೆಯ ಸಹಶಿಕ್ಷಕ ರಾಮಕೃಷ್ಣ ಎಂಬುವವರು ಜಾತಿ ನಿಂದನೆಯ ಮೂಲಕ ತಮಗೆ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ಭಾನುವಾರ ನಡೆದ ಮಾಸಿಕ ದಲಿತ ಕುಂದುಕೊರತೆ ಸಭೆಯಲ್ಲಿ ಆರೋಪಿಸಿದರು.
ಬಂಟ್ವಾಳ ತಾಲೂಕಿನ ಪಜೀರು ಗ್ರಾಮದ ಪಾಣೇಲಬರಿಕೆ ಶಾಲೆಯಲ್ಲಿ ಕಮಲಾಕ್ಷಿ 2007-2008 ರಿಂದ ಮುಖ್ಯ ಶಿಕ್ಷಕಿ ಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅದೇ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಮಕೃಷ್ಣ ಜಿ ಎಂಬುವವರು ಜಾತಿನಿಂದನೆಯ ಮೂಲಕ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈ ಕುರಿತು ಕೊಣಾಜೆ ಪೊಲೀಸ್ ಠಾಣೆ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗು ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಿಗೆ ದೂರು ನೀಡಿದ್ದರು ಯಾವುದೇ ಕ್ರಮವನ್ನು ಈ ಇಲಾಖೆಗಳು ಕೈಗೊಂಡಿಲ್ಲ. ಅಲ್ಲದೆ ತನಿಖೆ ಕೈಗೊಳ್ಳಬೇಕಾದ ಪೊಲೀಸರು ಪ್ರಕರಣಕ್ಕೆ ಸಂಬಧಿಸಿ ಬಿ ವರಧಿಯನ್ನು ಸಲ್ಲಿಸುವ ಮೂಲಕ ತಮಗೆ ಅನ್ಯಾಯ ಎಸಗಿದ್ದಾರೆ ಆದ್ದರಿಂದ ಅವರ ವಿರುದ್ದ ಸೂಕ್ತ ಕ್ರಮ ಜರುಗಿಸಿ ನ್ಯಾಯ ಒದಗಿಸಬೇಕೆಂದು ಕೇಳಿಕೊಂಡರು.
ದೂರನ್ನು ಆಲಿಸಿದ ಕಮಿಷನರ್ ಮನೀಶ್ ಕರ್ಬಿಕರ್ ಈ ಬಗ್ಗೆ ತನಿಖೆ ನಡೆಸಿ ವರಧಿ ಒಪ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದರು. ಸಭೆಯಲ್ಲಿ ಡಿಸಿಪಿಗಳಾದ ಧರ್ಮಯ್ಯ, ಮುತ್ತುರಾಯ ಹಾಗು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English