ನಗರದಲ್ಲಿ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಘಟಕದ 76ನೇ ವಾರ್ಷಿಕ ವೈಜ್ನಾನಿಕ ಸಮ್ಮೇಳನ ಉದ್ಘಾಟನೆ

10:23 PM, Saturday, October 30th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಐಎಂಎ ಮೆಡಿಕಾನ್ - 2010 ಮಂಗಳೂರು : ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಘಟಕದ 76ನೇ ಐಎಂಎ ಮೆಡಿಕಾನ್ – 2010 ವಾರ್ಷಿಕ ಸಮ್ಮೇಳನವನ್ನು ಡಾ| ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಸನ್ ಸೆಂಟರ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್ ಅವರು ಉದ್ಘಾಟಿಸಿದರು.  ಉನ್ನತ ಶಿಕ್ಷಣ  ಸಚಿವ ಡಾ| ವಿ.ಎಸ್.ಆಚಾರ್ಯ ಆವರು ” ಸರ್ವರಿಗೂ ಆರೋಗ್ಯ” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಐಎಂಎ ಮೆಡಿಕಾನ್ - 2010
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಎನ್.ಯೋಗೀಶ್ ಭಟ್ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದರು
ಸಮಾರಂಭದ  ಅಧ್ಯಕ್ಷತೆ ಯನ್ನು ಐಎಂಎ-ಕೆ‌ಎಸ್‌ಬಿಯ ಅಧ್ಯಕ್ಷ ಡಾ|ಎಂ.ಆರ್. ಕೃಷ್ಣಯ್ಯ ಅವರು   ವಹಿಸಿದ್ದರು. ಮೇಯರ್ ರಜನಿ ದುಗ್ಗಣ್ಣ, ಐಎಂಎ- ಕೆ‌ಎಸ್‌ಬಿ  ನೂತನ ಅಧ್ಯಕ್ಷ ಡಾ| ಜಿ.ಬಿ.ಬಿದಿನಾಹಳ್,    ಐಎಂಎ ಮಂಗಳೂರು ಶಾಖೆಯ  ಕಾರ್ಯದರ್ಶಿ  ಅಣ್ಣಯ್ಯ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಡಾ| ಕೈಕೆರೆ ಮೋಹನ್ ದಾಸ್ ಭಂಡಾರಿ ವಂದಿಸಿದರು.

ಐಎಂಎ ಮೆಡಿಕಾನ್ - 2010
ಈ ರಾಜ್ಯ ಸಮ್ಮೇಳನವು ಅಂತರಾಷ್ಟ್ರೀಯ ಮತ್ತು  ರಾಷ್ಟ್ರೀಯ ಖ್ಯಾತಿಯ ವೈದ್ಯಕೀಯ ಪರಿಣತರನ್ನೊಳಗೊಂಡಂತೆ ದೇಶದ ವಿವಿಧ ಪ್ರದೇಶಗಳಿಂದ ಅಗಮಿಸುವ ವೈದ್ಯಕ್ಷೇತ್ರಕ್ಕೆ ಸಂಬಂಧಿಸಿದ ವೃತ್ತಿಪರ ಸಮ್ಮಿಲನಕ್ಕೆ ಸಾಕ್ಷಿಯಾಗಿದೆ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಪರಿಣತರಾದ ಉಪನ್ಯಾಸ- ಪ್ರಾತ್ಯಕ್ಷಿಕೆ ಮತ್ತು ವೈಜ್ಞಾನಿಕ ಕಾರ್ಯಾಗಾರಗಳು ನಡೆಯಲಿದ್ದು, ವೈದ್ಯಕೀಯ ಕ್ಷೇತ್ರದ ಸದಸ್ಯರಿಗೆ ಇದೊಂದು ಮಹತ್ವ ಪೂರ್ಣ ಹಾಗೂ ಅವಿಸ್ಮರಣಿಯ ಕಾರ್ಯಕ್ರಮವಾಗಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English