ಸುಳ್ಯ : ಸುಳ್ಯ ತಾಲೂಕಿನ ಆಲೆಟ್ಟಿ ಸರ್ಕಾರಿ ಪ್ರೌಢಶಾಲೆಯ ಆರು ಮಂದಿ ಶಿಕ್ಷಕಕರು ಹಾಗು ಶಾಲೆಯ ದ್ವಿತೀಯ ದರ್ಜೆ ಸಹಾಯಕರು ಸೇರಿದಂತೆ ಒಟ್ಟು ಏಳು ಮಂದಿಯನ್ನು ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮೋಸೆಸ್ ಜಯಶೇಖರ ಅಮಾನತು ಮಾಡುವ ಆದೇಶ ಹೊರಡಿಸಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕಿ ಕೆ.ಸಂಧ್ಯಾ, ಸಹಶಿಕ್ಷಕರುಗಳಾದ ಕೆ.ಎಸ್.ಚಂದ್ರಶೇಖರ, ಕೆ.ಹರಿಪ್ರಸಾದ, ವಿ.ಸುಬ್ರಹ್ಮಣ್ಯ, ಎನ್.ಶಿವಕುಮಾರ್, ಕೆ. ಚಂದ್ರಮತಿ ಹಾಗು ದ್ವಿತೀಯ ದರ್ಜೆ ಸಹಾಯಕ ಯೋಗೀಶ್ ಭರತ್ ಅಮಾನತುಗೊಂಡವರಾಗಿದ್ದಾರೆ.
ಈ ಹಿಂದೆಯೇ ವಿದ್ಯಾರ್ಥಿ ಪೋಷಕರು ಸೇರಿದಂತೆ ಸಾರ್ವಜನಿಕರಿಂದ ಶಾಲೆಯಲ್ಲಿನ ಕರ್ತವ್ಯಲೋಪ, ಹಣಕಾಸು ದುರುಪಯೋಗ, ಶಾಲೆಗೆ ಶಿಕ್ಷಕರ ಗೈರು, ಗುಂಪುಗಾರಿಕೆ ಸೇರಿದಂತೆ ಹಲವು ಆರೋಪಗಳು ಕೇಳಿ ಬರುತಿತ್ತು. ಈ ಹಿನ್ನಲೆಯಲ್ಲಿ ಸೋಮವಾರ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮೋಸೆಸ್ ಜಯಶೇಖರ ಮತ್ತು ತಂಡ ಶಾಲೆಗೆ ಭೇಟಿ ನೀಡಿದಾಗ ಮುಖ್ಯ ಶಿಕ್ಷಕಿ ಸಂಧ್ಯಾ ರಜೆಯಲ್ಲಿದ್ದು ಯಾವುದೇ ಅನುಮತಿಯನ್ನು ಪಡೆಯದೆ ಸಹ ಶಿಕ್ಷಕ ಚಂದ್ರಶೇಖರ್ ಗೆ ಚಾರ್ಜ್ ನೀಡಿದ್ದರು. ಮತ್ತು ಪ್ರಸ್ತುತ ವರ್ಷದಲ್ಲಿ ಎಂಟನೆ ತರಗತಿಯಲ್ಲಿ ಕೇವಲ ಐದು ಮಂದಿ ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದರು. ಇದರಿಂದ ವಸ್ತು ಸ್ಥಿತಿಯನ್ನರಿತ ಉಪನಿರ್ದೇಶಕರು ಇವರನ್ನು ಅಮಾನತು ಮಾಡಿದರು.
Click this button or press Ctrl+G to toggle between Kannada and English