ಕೊಲ್ಲೂರು : ನಟಿ ಶ್ರುತಿ ಅವರು ಗುರುವಾರ ಪತ್ರಕರ್ತ ಚಂದ್ರಚೂಡ ಚಕ್ರವರ್ತಿ ಅಲಿಯಾಸ್ ಚಂದ್ರಶೇಖರ್ ಅವರನ್ನು ವರಿಸುವ ಮೂಲಕ ನೂತನ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ಖ್ಯಾತ ನಿರ್ದೇಶಕ ಎಸ್ ಮಹೇಂದರ್ ಅವರ ಜೊತೆ ವಿವಾಹ ವಿಚ್ಛೇದನ ಪಡೆದಿರುವ ಶ್ರುತಿ ಕೊಲ್ಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಇಂದು ಬೆಳಗ್ಗೆ 7.45ಕ್ಕೆಎರಡನೇ ಬಾರಿ ಹಸೆಮಣೆ ಏರಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬಾಣಿಗ ಗ್ರಾಮದಲ್ಲಿ ಶ್ರುತಿ-ಚಂದ್ರಶೇಖರ್ ಅವರ ಮದುವೆ ನಿಗದಿಯಾಗಿತ್ತು. ಗ್ರಾಮದ ಪ್ರಸಿದ್ಧ ಬಾಣೇಶ್ವರ, ವೆಂಕಟರಮಣ, ಆಂಜನೇಯ ಸ್ವಾಮಿ (ಒಟ್ಟಿಗೆ ಇರುವ ದೇವಸ್ಥಾನಗಳು) ದೇವಸ್ಥಾನದಲ್ಲಿ ನಿಗದಿಯಾಗಿತ್ತು. ಬುಧವಾರ ರಾತ್ರಿ ವರಪೂಜೆ ಸಹ ನಡೆದಿತ್ತು.
ಬೆಂಗಳೂರಿನ ಪುರೋಹಿತರೊಬ್ಬರ ನೇತೃತ್ವದಲ್ಲಿ ಶ್ರುತಿ ಅವರು ತಮ್ಮ ಭಾವಿ ಪತಿ ಜೊತೆ ಕೊಲ್ಲೂರಿಗೆ ತೆರಳಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಂಡಿದ್ದಾರೆ. ಕೇವಲ ಬಂಧು ಮಿತ್ರರಷ್ಟೇ ಈ ಮದುವೆಗೆ ಸಾಕ್ಷಿಯಾಗಿದ್ದಾರೆ.
Click this button or press Ctrl+G to toggle between Kannada and English