ಕನ್ನಡ ನಾಡು ನುಡಿಯ ರಾಷ್ಟೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಸಮಾಪನ

3:54 PM, Monday, November 1st, 2010
Share
1 Star2 Stars3 Stars4 Stars5 Stars
(No Ratings Yet)
Loading...

ಆಳ್ವಾಸ್ ನುಡಿಸಿರಿ 2010 ಮೂಡಬಿದಿರೆ: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2010 ವಿವಿಧ ರಂಗಗಳಲ್ಲಿ ಸೇವೆ ಮಾಡಿದ ಹತ್ತು ಮಂದಿ ಸಾಧಕರಿಗೆ ಸನ್ಮಾನಿಸುವ ಮೂಲಕ ಸಮಾಪನ ಗೊಂಡಿದೆ.

ಆಳ್ವಾಸ್ ನುಡಿಸಿರಿ 2010 ಮಧ್ಯಾನ್ಹ 3ಕ್ಕೆ ಆರಂಭವಾದ ಸನ್ಮಾನಿತರ ಮೆರವಣಿಗೆಯಲ್ಲಿ ಡಾ. ಮೋಹನ್ ಆಳ್ವಾ, ಡಾ. ವೀರೇಂದ್ರ ಹೆಗ್ಗಡೆ, ಗಣೇಶ್ ಕಾರ್ನಿಕ್, ಕೆ. ಅಮರನಾಥ ಶೆಟ್ಟಿ , ಸಮ್ಮೇಳನಾಧ್ಯಕ್ಷೆ ವೈದೇಹಿ ಹಾಗೂ ಸನ್ಮಾನಗೊಳ್ಳುವ ಗಣ್ಯರು ಪಾಲ್ಗೊಂಡಿದ್ದರು.

ಆಳ್ವಾಸ್ ನುಡಿಸಿರಿ 2010 ಕೊಂಬು,  ಡೋಲು, ಕೊಳಲು, ಚಂಡೆ ಮೇಳ, ಬಣ್ಣದ ಕೊಡೆ ಹಿಡಿದ ಯುವಕರು, ಪೂರ್ಣಕುಂಭ ಕಲಶ ಹಿಡಿದ  ಯುವತಿಯರು ಸಾಲುಗಳು ಮೆರವಣಿಗೆಯಲ್ಲಿ ಪಾಲ್ಗೊಂಡ ಗಣ್ಯರನ್ನು ಸ್ವಾಗತಿಸಿದವು.
ಡಾ.ಜಿ.ಎಸ್. ಆಮೂರ, ಡಾ.ಎಂ.ಎಂ.ಕುಲಬುರ್ಗಿ,  ಡಾ.ಶಿವಮೊಗ್ಗ ಸುಬ್ಬಣ್ಣ, ಡಾ.ಎಂ.ಲೀಲಾವತಿ, ಡಾ.ಬ್ರ.ಕು.ಬಸವ ರಾಜ ರಾಜಋಷಿ,  ಡಾ. ಎಂ. ವೀರಪ್ಪ ಮೊಯ್ಲಿ, ಸಂತೋಷ ಕುಮಾರ್ ಗುಲ್ವಾಡಿ, ಡಾ.ಬಲಿಪ ನಾರಾಯಣ ಭಾಗವತ,  ಪ್ರೊ.ಬಿ.ಜಯಪ್ರಕಾಶ್ ಗೌಡ,  ಡಾ.ಕೆ.ಪಿ.ಪುತ್ತೂರಾಯ ಇವರನ್ನು ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆಯವರು ಪ್ರಶಸ್ತಿ ಫಲಕ ಹಾಗು ಸಾಲು ಹೊದಿಸಿ ಸನ್ಮಾನಿಸಿದರು.

ಆಳ್ವಾಸ್ ನುಡಿಸಿರಿ 2010 ಮನುಷ್ಯ ಸತ್ತಮೇಲೆ ಸ್ವರ್ಗ ಪ್ರಾಪ್ತಿ ಯಾಗುತ್ತದೆ ಎಂದು ಕೇಳಿದ್ದೇವೆ, ಆಳ್ವರು ಇಂತಹ ಮಹಾನ್ ಕಾರ್ಯ ವನ್ನು ಮಾಡಿ ಭೂಲೋಕದಲ್ಲೇ ಸ್ವರ್ಗವನ್ನು ತೋರಿಸಿದ್ದಾರೆ ಎಂದು ಸನ್ಮಾನದ ಬಳಿಕ ಡಾ. ವೀರೇಂದ್ರ ಹೆಗಡೆಯವರು ಹೇಳಿದರು.
ಅವರು ಆಳ್ವಾಸ್ ನುಡಿಸಿರಿ ಆಳ್ವೆರೆನ ನುಡಿಸಿರಿ ಅಂದರೆ ಆಳುವವರ ನುಡಿಸಿರಿ ಅಂದರೆ ನಮ್ಮೆಲ್ಲ ರ ನುಡಿಸಿರಿ. ಕಳೆದ ಆರು ವರ್ಷದಿಂದ ಆಚರಿಸುವ ನುಡಿಸಿರಿ ಇಂದು ವಿಶ್ವದಲ್ಲೇ ಹೆಸರು ಪಡೆದಿದೆ, ಕನ್ನಡದ ವಿವಿಧ ಸಂಸ್ಕೃತಿಯನ್ನು ಮೂಡಬಿದ್ರೆಯ ಈ ನೆಲದಲ್ಲಿ ತೋರಿಸುವುದು ಆಳ್ವರ ಸಾಧನೆಯೇ ಸರಿ ಎಂದು ಬಣ್ಣಿಸಿದರು.

ಆಳ್ವಾಸ್ ನುಡಿಸಿರಿ 2010

ಸನ್ಮಾನಿತರಾದ ವೀರಪ್ಪ ಮೊಯ್ಲಿ, ಡಾ.ಎಂ.ಎಂ.ಕುಲಬುರ್ಗಿ, ಜಯಪ್ರಕಾಶ್ ಗೌಡ. ಪುತ್ತೂರಾಯ ಲೀಲಾವತಿ ಮೊದಲಾದವರು ನುಡಿಸಿರಿಯ ಬಗ್ಗೆ ಮಾತನಾಡಿದರು.
ಡಾ. ಮೋಹನ್ ಆಳ್ವ ಮಾತನಾಡಿ ನುಡಿಸಿರಿಯಲ್ಲಿ ಭಾಗವಸಿದ ಕಲಾತಂಡಗಳಿಗೆ, ಕಲಾಭಿಮಾನಿಗಳಿಗೆ, ಸಾಹಿತಿಗಳಿಗೆ, ಸಾಹಿತ್ಯಾಭಿಮಾನಿಗಳಿಗೆ ಕೃತಜ್ಞತೆಯ ಮಾತುಗಳನ್ನು ಹೇಳಿದರು.
ಸಮ್ಮೇಳನಾಧ್ಯಕ್ಷರು ಸಮಾಪನದ ಮಾತುಗಳನ್ನಾಡಿ ನಾನು ಈ ವೇದಿಕೆಯಲ್ಲಿ ನನ್ನ ಭಾವನೆ ಹಾಗೂ ಮನಸ್ಸಿನ ಮಾತುಗಳನ್ನು ಮುಕ್ತವಾಗಿ ನಿಮ್ಮೊಂದಿಗೆ ಹಂಚಿದ್ದೇನೆ, ಕನ್ನಡದ ಮನುಸ್ಸುಗಳು ಕನ್ನಡವನ್ನು ಚಿರವಾಗಿ ಉಳಿಸಬಲ್ಲವು, ಕನ್ನಡದ ಕಂಪು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೂಲಕ ನಿರಂತರ ಪಸರಿಸುತ್ತಿರಲಿ ಎಂದು  ಹಾರೈಸಿದರು.
ವೇದಿಕೆಯಲ್ಲಿ ಸಚಿವ ಡಾ.ವಿ.ಎಸ್ ಆಚಾರ್ಯ, ಶಾಸಕರಾದ ಶ್ರೀನಿವಾಸ್, ಗೋಪಾಲ ಭಂಡಾರಿ, ಕೆ.ಅಮರನಾಥ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ಗಣೇಶ್  ಕಾರ್ಣಿಕ್, ಆನಂದ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
ಧನಂಜಯ ಕುಂಬಳೆ ಅವರು ಕಾರ್ಯಕ್ರಮ ನಿರೂಪಿಸಿದರು. ವೇಣುಗೋಪಾಲ ಶೆಟ್ಟಿ ಕಿದೂರು ಅವರು ವಂದಿಸಿದರು.

ಆಳ್ವಾಸ್ ನುಡಿಸಿರಿ 2010ಆಳ್ವಾಸ್ ನುಡಿಸಿರಿ 2010

ಆಳ್ವಾಸ್ ನುಡಿಸಿರಿ 2010

ಆಳ್ವಾಸ್ ನುಡಿಸಿರಿ 2010

ಆಳ್ವಾಸ್ ನುಡಿಸಿರಿ 2010ಇನ್ನಷ್ಟು ಚಿತ್ರಗಳು

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English