ಬೋಲ ಚಿತ್ತರಂಜನದಾಸ್ ಶೆಟ್ಟಿಯವರ “ಅತಿಥಿ ನಮ್ಮಮ್ಮ” ಕೃತಿ ಬಿಡುಗಡೆ

4:55 PM, Tuesday, June 11th, 2013
Share
1 Star2 Stars3 Stars4 Stars5 Stars
(5 rating, 4 votes)
Loading...

Athithi Nammamma Book

ಮಂಗಳೂರು : ಬೋಲ ಚಿತ್ತರಂಜನದಾಸ್ ಶೆಟ್ಟಿಯವರು ಬರೆದ “ಅತಿಥಿ ನಮ್ಮಮ್ಮ” ಕೃತಿ ಯನ್ನು ಮಾಜಿ ಸಂಸದ ಎಸ್ ಬಾಲರಾಜ್ ಅವರು ಇಂದು ನಗರದ ಪತ್ರಿಕಾಭವನದಲ್ಲಿ ಬಿಡುಗಡೆಗೊಳಿಸಿದರು.

ತುಳುವರ ನಂಬಿಕೆಗಳು ಅದರ ಮೂಲವನ್ನು ಪಾಡ್ದನಗಳ ಮೂಲಕ ಮುದ್ರಿಸಿ ಒಂದು ಉತ್ತಮ ಕೃತಿ ಅನಾವರಣಗೊಳಿಸಿರುವುದು ತುಳುನಾಡಿನ ಸಂಸ್ಕ್ರುತಿಯನ್ನು ಇನ್ನಷ್ಟು ಬಲಿಷ್ಟಗೊಳಿಸಿದೆ. ಅದರ  ಮೂಲಕ ತುಳುನಾಡಿನ ಹಲವು ವಿಚಾರಗಳನ್ನು ತುಳುವರಿಗೆ  ವಿನಿಮಯಗೊಳಿಸಿದಂತಾಗಿದೆ. ಇದು ಜನಪರ ಚಿಂತನೆಗಳ ಉಳಿವಿಗೆ ಸಹಕಾರಿ ಎಂದು ಕೃತಿ ಬಿಡುಗಡೆಗೊಳಿಸಿದ ಮಾಜಿ ಸಂಸದ ಎಸ್ ಬಾಲರಾಜ್ ಹೇಳಿದರು.

ಈ ಕೃತಿಯಲ್ಲಿ ಕೋಟಿ ಚೆನ್ನಯರ ಅಂತ್ರ ಗೀತೆ, ಆರ್ಯ ಬನ್ನಾಯ ಬಳಿ ಬೆರ್ಮಾಳ್ವರಿಗೆ ಅವರ ನಾಗಬ್ರಹ್ಮ ದೇವರು ಅವರ ಭಕ್ತಿಗೆ ದೇವರು ಗಂಧ ಪ್ರಸಾದದ ಹಿಂಗಾರ ಹಾಳೆಯಲ್ಲಿ ನೀಡಿ ಸಿರಿ ಉದ್ಭವಿಸಿದರು. ಸಿರಿ ದೇವಿಯನ್ನು ತುಳುವರು ಸಿರಿಯೇ ಕುಟುಂಬದ ಮೂಲ ದೇವರು ಎಂದು ಪೂಜಿಸುವರು ಹೀಗೆ ಮುಂತಾದ ಅಂಶಗಳನ್ನು ಈ ಕೃತಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು. ಇನ್ನು ಮುಂದೆಯೂ ಕನ್ನಡ ಸಾಹಿತ್ಯದಲ್ಲಿ ಉತ್ತಮ ಕೃತಿಗಳು ಬರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಬೋಲ ಚಿತ್ತರಂಜನದಾಸ್ ಶೆಟ್ಟಿ, ಕೃತಿ ವಿಮರ್ಶಕ ಡಾ.ಗಣೇಶ್ ಅಮೀನ್ ಸಂಕಮಾರ್, ಸರ್ವೋತ್ತಮ ಅಂಚನ್, ಅತಿಥಿ ನಮ್ಮಮ್ಮ ಕೃತಿಗೆ ಮುನ್ನಡಿ ಬರೆದ ಕುದ್ಕಾಡಿ ವಿಶ್ವನಾಥ ರೈ ಉಪಸ್ಥಿತರಿದ್ದರು.
Athithi Nammamma Book

Athithi Nammamma Book

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English