ಉಡುಪಿ: ಕೇರಳದ ಮಹಿಳಾ ಆಯೋಗದ ಅಧ್ಯಕ್ಷೆ ರೋಸಾ ಕುಟ್ಟಿ, ಸದಸ್ಯರಾದ ಡಾ. ಕೆ. ವಿ. ತುಳಸಿ ಮತ್ತು ರುಬೀನಾ ರಶೀದ್ ಶನಿವಾರ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಭೇಟಿ ನೀಡಿದರು. ಅತ್ಯಾಚಾರಕ್ಕೊಳಗಾಗಿರುವ ಕೇರಳದ ವೈದ್ಯಕೀಯ ವಿದ್ಯಾರ್ಥಿನಿಯ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಣೆ ನಡೆಸಿದರು. ನೇರವಾಗಿ ಯುವತಿಯನ್ನು ಬೇಟಿ ಮಾಡಲು ಆಯೋಗದ ಸದಸ್ಯರಿಗೆ ಸಾಧ್ಯವಾಗಿಲ್ಲ.
ಆಸ್ಪತ್ರೆಯಿಂದ ಹೊರಬಂದು ಮಾಧ್ಯಮಗಳ ಜೊತೆ ಮಾತನಾಡಿದ ರೋಸಾ ಕುಟ್ಟಿ ಯುವತಿ ಕುಟುಂಬದ ಜೊತೆ ಮಾತನಾಡಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದರು. ವಿದ್ಯಾರ್ಥಿನಿ ಮುಂದಿನ 3-4 ದಿನಗಳಲ್ಲಿ ಬಿಡುಗಡೆಯಾಗಲಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾಗಿ ಅವರು ಹೇಳಿದರು.
ಆಸ್ಪತ್ರೆಯ ಬೇಟಿ ಬಗ್ಗೆ ಕೇರಳ ಸಿಎಂ ಗೆ ವರದಿ ಕೊಡುತ್ತೇನೆ . ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ಭದ್ರತೆಯನ್ನು ಹೆಚ್ಚಿಸುವ ಅಗತ್ಯತೆ ಇದ್ದು ಈ ಬಗ್ಗೆ ಮಣಿಪಾಲ ವಿವಿ ಜೊತೆ ಚರ್ಚಿಸಲಾಗುವುದು ಎಂದರು.
ಕಳೆದ ಒಂದು ವಾರದಿಂದ ಆಸ್ಪತ್ರಗೆ ಭೇಟಿ ಕೊಟ್ಟರಲಿಲ್ಲ. ಆದರೆ ಆಸ್ಪತ್ರೆ ಜೊತೆ ಸಂಪರ್ಕದಲ್ಲಿದ್ದೆವು. ಈ ಬಗ್ಗೆ ಹಿರಿಯ ಪೋಲಿಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
Click this button or press Ctrl+G to toggle between Kannada and English