ನೆಹರೂ ಮೈದಾನಿನಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ 44 ಮಂದಿ ಸಾಧಕರಿಗೆ ಪ್ರಶಸ್ತಿ ವಿತರಣೆ

5:33 PM, Monday, November 1st, 2010
Share
1 Star2 Stars3 Stars4 Stars5 Stars
(No Ratings Yet)
Loading...

ನೆಹರೂ ಮೈದಾನಿನಲ್ಲಿ ರಾಜ್ಯೋತ್ಸವಮಂಗಳೂರು : ಜಿಲ್ಲಾಡಳಿತದ ವತಿಯಿಂದ ಮಂಗಳೂರು ನೆಹರೂ ಮೈದಾನಿನಲ್ಲಿ ನಡೆಯುವ ರಾಜ್ಯೋತ್ಸವದ ಕಾರ್ಯಕ್ರಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೇಮಾರ್ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿದರು.

ನೆಹರೂ ಮೈದಾನಿನಲ್ಲಿ ರಾಜ್ಯೋತ್ಸವಜ್ಯೋತಿ ವೃತ್ತದಲ್ಲಿ ಭವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ರಾಜ್ಯೋತ್ಸವದ ಮೆರವಣಿಗೆಗೆ ಚಾಲನೆ ನೀಡಲಾಯಿತು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಅಕರ್ಷಕ ವೇಷಭೂಷಣಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು.

ನೆಹರೂ ಮೈದಾನಿನಲ್ಲಿ ರಾಜ್ಯೋತ್ಸವ

ನೆಹರೂ ಮೈದಾನಿನಲ್ಲಿ ರಾಜ್ಯೋತ್ಸವಧ್ವಜಾರೋಹಣದ ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಇಂದು  ಕನ್ನಡ ಭಾಷೆ ಹಾಗೂ ಅಭಿವೃದ್ಧಿ ಮತ್ತು ಕನ್ನಡಿಗರ ಸಾಧನೆಯ ಬಗ್ಗೆ ಸಿಂಹಾವಲೋಕನ ನಡೆಸುವ ಸುದಿನ. ಹಿಂದಿನ ಮದ್ರಾಸ್, ಮುಂಬಯಿ ಮತ್ತು ಹೈದರಾಬಾದ್ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಭಾಷೆಯನ್ನಾಡುವ ಜನರು ವಾಸಿಸುವ  ಭೂ ಪ್ರದೇಶಗಳು ಒಟ್ಟು ಸೇರಿ 1.11.1956 ರಂದು ಏಕೀಕೃತ ಕರ್ನಾಟಕ ರಾಜ್ಯ ರಚನೆಯಾಯಿತು. ಕಳೆದ 54 ವರ್ಷಗಳಲ್ಲಿ ಶ್ರೀಮಂತ ಸಾಂಸ್ಕೃತಿಕ, ಸಹಬಾಳ್ವೆ, ಇತಿಹಾಸ ಹೊಂದಿರುವ ನಮ್ಮ ರಾಜ್ಯ 5 ಕೋಟಿಗೂ ಮಿಕ್ಕಿದ ಕನ್ನಡಿಗರಿಗೆ ಸಮಾನ ಜೀವನಾವಕಾಶ ರೂಪಿಸಿ, ಎಲ್ಲಾ ಕ್ಷೇತ್ರಗಳಲ್ಲಿಯೂ ಗಣನೀಯ ಸಾಧನೆಯನ್ನು ಸಾಧಿಸಿದೆ. ಸಮೃದ್ಧ ಸ್ವಾಭಿಮಾನಿ ಕರ್ನಾಟಕ ಕಟ್ಟುವ ಕಾರ್ಯವನ್ನು ನಮ್ಮ ಸರಕಾರವು ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತಿದೆ. ಕಳೆದ ಎರಡೂವರೆ ವರ್ಷಗಳ ಅವಧಿಯ ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್ ಯಡಿಯೂರಪ್ಪರ ನಾಯಕತ್ವದ ನಮ್ಮ ಸರಕಾರ ಜನತೆಗೆ, ನಾಡಿನ ಅಭಿವೃದ್ಧಿಗೆ ಹೊಸ ಆಯಾಮ ನೀಡಿದೆ ಎಂದು ಹೇಳಿದರು.

ನೆಹರೂ ಮೈದಾನಿನಲ್ಲಿ ರಾಜ್ಯೋತ್ಸವಬಳಿಕ ಸಂಚಾರಿ ಪೊಲೀಸ್ ದಳ,ಕೆ.ಎಸ್.ಆರ್.ಪಿ, ಭಾರತ್ ಸೇವಾದಳ, ಸ್ಕೌಟ್ ಮತ್ತು ಗೈಡ್ಸ್ ತಂಡಗಳಿಂದ ಗೌರವ ವಂದನೆ ಸ್ವೀಕರಿದರು.

ನೆಹರೂ ಮೈದಾನಿನಲ್ಲಿ ರಾಜ್ಯೋತ್ಸವ44 ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶಾಸಕರಾದ ಎನ್. ಯೋಗೀಶ್ ಭಟ್, ಯು.ಟಿ..ಖಾದರ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ಸಂತೋಷ್ ಕುಮಾರ್ ಭಂಡಾರಿ, ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ಮಂಗಳೂರು ಮೇಯರ್ ರಜನಿ ದುಗ್ಗಣ್ಣ, ಉಪ ಮೇಯರ್ ರಾಜೇಂದ್ರ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷ ಕೆ. ರಾಮಚಂದ್ರ ಕುಂಪಲ, ಜಿಲ್ಲಾಧಿಕಾರಿ ಸುಭೋದ್ ಯಾದವ್, ಸಿಇಓ ಶಿವಶಂಕರ್, ಎಸ್. ಪಿ. ಡಾ. ಸುಬ್ರಮಣ್ಯೇಶ್ವರ ರಾವ್, ಪೋಲಿಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನೆಹರೂ ಮೈದಾನಿನಲ್ಲಿ ರಾಜ್ಯೋತ್ಸವಉದಯವಾಣಿಯ ವರದಿಗಾರರಾದ ಸುರೇಂದ್ರ ಎಸ್. ವಾಗ್ಲೆ, ವಿಜಯ ಕರ್ನಾಟಕದ ಛಾಯಾಚಿತ್ರ ಗ್ರಾಹಕ ಸುಧಾಕರ ಎರ್ಮಾಳ್ ಸೇರಿದಂತೆ ಕೊಂಕಣಿ ವಿದ್ವಾಂಸ ವೆಂಕಟೇಶ್ ಬಾಳಿಗ, ಬಿಲ್ಡರ್ ಲ್ಯಾನ್ಸಿ ಮಸ್ಕರೇನಸ್, ಹರಿಕೃಷ್ಣ ತಂತ್ರಿ, ಅತ್ತೂರು ಸದಾನಂದ ಶೆಟ್ಟಿ, ಅಶ್ವತ್ತಪುರ ಬಾಬುರಾಯ ಆಚಾರ್ಯ, ಪು. ಶ್ರೀನಿವಾಸ ಭಟ್ ಕಟೀಲು, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ ಸುರತ್ಕಲ್, ಪೆರುವಾಯಿ ನಾರಾಯಣ ಶೆಟ್ಟಿ, ಜಬ್ಬರ್ ಸುಮೋ ಸಂಪಾಜೆ, ಧರ್ಮಸ್ಥಳ ಶಾಂತಿವನ ಟ್ರಸ್ಟ್, ಮೊಕೆದ ಕಲಾವಿದೆರ್ ಸಜಿಪ, ಗೀತ ಬಾಯಿ ಉಲ್ಲಾಳ ಮೊದಲಾದ 44 ಮಂದಿಗೆ ಪ್ರಶಸ್ತಿ ನೀಡಲಾಯಿತು.

ನೆಹರೂ ಮೈದಾನಿನಲ್ಲಿ ರಾಜ್ಯೋತ್ಸವ

ನೆಹರೂ ಮೈದಾನಿನಲ್ಲಿ ರಾಜ್ಯೋತ್ಸವಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಿಣ್ಣರ ಲೋಕ ಕಾರ್ಯಕ್ರಮದಡಿ ತರಬೇತಿ ಪಡೆದ ಪ್ರೌಢ ಶಾಲೆ,  ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಹಾಲಕ್ಕಿ ಸುಗ್ಗಿ ಕುಣಿತ, ನವಿಲು ನೃತ್ಯ, ಕರಗ ನೃತ್ಯ ಪ್ರದರ್ಶನ ನಡೆಯಿತು.
ರಾಜ್ಯೋತ್ಸವದ ಅಂಗವಾಗಿ ಪುರಭವನದಲ್ಲಿ ಅಪರಾನ್ಹ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕರ್ಯಕ್ರಮಗಳು ನಡೆದವು

ನೆಹರೂ ಮೈದಾನಿನಲ್ಲಿ ರಾಜ್ಯೋತ್ಸವ

ನೆಹರೂ ಮೈದಾನಿನಲ್ಲಿ ರಾಜ್ಯೋತ್ಸವ

ನೆಹರೂ ಮೈದಾನಿನಲ್ಲಿ ರಾಜ್ಯೋತ್ಸವಇನ್ನಷ್ಟು ಚಿತ್ರಗಳು

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English