ಮಂಗಳೂರು : ಬಾನುವಾರ ಬಂತೆಂದರೆ ಸಾಕು ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ( ಸೆಂಟ್ರಲ್ ಟಾಕೀಸ್ ಸಮೀಪದ ಮೈದಾನ ಅಡ್ಡ ರಸ್ತೆ, ಪುರಭವನದ ಮುಖ್ಯ ರಸ್ತೆ ) ರಸ್ತೆಗಳೆಲ್ಲಾ ಮಾರುಕಟ್ಟೆಗಳಾಗಿ ಬದಲಾಗುತ್ತದೆ. ರಸ್ತೆಗಳಲ್ಲಿ ಪಾದಚಾರಿಗಳಿಗೆ ನಡೆದಾಡಲು ಹಾಗೂ ವಾಹನ ಚಾಲಕರಿಗೆ ವಾಹನ ಚಲಾಯಿಸಲು ಸಾದ್ಯವಾಗದಷ್ಟು ರಸ್ತೆಯನ್ನು ಈ ವ್ಯಾಪಾರಿಗಳು ಅಕ್ರಮಿಸಿರುತ್ತಾರೆ. ಈ ಕುರಿತು ಸಾರ್ವಜನಿಕರಿಂದ ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆ ವ್ಯಾಪಾರ ನಡೆಸುವ ವ್ಯಾಪಾರಿಗಳನ್ನು ಅಲ್ಲಿಂದ ತೆರವುಗೊಳಿಸಿ ಪಕ್ಕಕ್ಕೆ ಸರಿಸುವ ಕಾರ್ಯವನ್ನು ಬಂದರು ಠಾಣಾ ಪೊಲೀಸರು ಬಾನುವಾರ ನಗರದ ಸೆಂಟ್ರಲ್ ಮಾರ್ಕೆಟ್ ಬಳಿ ಮಾಡಿದ್ದಾರೆ.
ನಗರದಲ್ಲಿ ಆದಿತ್ಯವಾರ ಬಂದರೆ ಸಾಕು ಎಲ್ಲಿಂದಲ್ಲಿಂದ ವ್ಯಾಪಾರಿಗಳು ಬಂದು ತಮ್ಮ ಸರಕುಗಳನ್ನು ಇಲ್ಲಿನ ರಸ್ತೆ ಮಧ್ಯೆಯೇ ಮಾರಾಟ ಮಾಡಲು ಶುರುಮಾಡುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಹಾಗೂ ಹಣ್ಣು ಹಂಪಲು ಮತ್ತು ಗೃಹ ಬಳಕೆಯ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ರಸ್ತೆ ಮಧ್ಯೆಯೇ ವ್ಯಾಪಾರಕ್ಕಿಳಿಯುದರಿಂದ ಹಾಗೂ ಇದನ್ನು ಖರೀದಿಸಲು ಗ್ರಾಹಕರು ಮುಗಿ ಬೀಳುವುದರಿಂದ ಈ ಪ್ರದೇಶದಲ್ಲಿ ಒಂದು ರೀತಿಯ ಸಂತೆಯ ವಾತಾವರಣ ಸೃಷ್ಟಿಯಾಗುತ್ತಿದ್ದು, ತುಂಬಾ ಜನಜಂಗುಳಿಯಿಂದ ತುಂಬಿರುತ್ತದೆ. ಕಾರಣ ಇಲ್ಲಿ ಗ್ರಾಹಕರಿಗೆ ಬೇಕಾದ ಅಗತ್ಯ ವಸ್ತುಗಳು ಅತೀ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ. ಇದರಿಂದ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿಗೆ ಆಗಮಿಸಿ ಖರೀದಿಯಲ್ಲಿ ತೊಡಗುತ್ತಾರೆ. ಆದರೆ ಇಂತಹ ಸಮಯದಲ್ಲಿ ರಸ್ತೆ ಮಧ್ಯೆ ಉಂಟಾಗುವ ಜನದಟ್ಟಣೆಯಿಂದ ಪಾದಚಾರಿಗಳಿಗೆ ಹಾಗೂ ವಾಹನ ಚಾಲಕರಿಗೆ ಈ ರಸ್ತೆಗಳಲ್ಲಿ ಸಾಗಲು ಕಷ್ಟವಾಗುತ್ತಿದೆ. ಹಾಗಾಗಿ ಬಾನುವಾರ ಬಂದರ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ವ್ಯಾಪರಿಗಳನ್ನು ರಸ್ತೆಯಿಂದ ತೆರವುಗೊಳಿಸಿ ಪಕ್ಕಕ್ಕೆ ಸರಿಸುವ ಕಾರ್ಯ ನಡೆಸಿದರು.
Click this button or press Ctrl+G to toggle between Kannada and English