ಉಡುಪಿ: ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರದ ಆರೋಪಿಗಳಾದ ಹರಿಪ್ರಸಾದ್ ಮತ್ತು ಆನಂದನನ್ನು ಸೋಮವಾರ ಉಡುಪಿ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ ಐದು ದಿನ ನ್ಯಾಯಾಂಗ ಬಂಧನ ವಿಧಿಸಿದೆ ಹಾಗೂ ಇಬ್ಬರ ಡಿಎನ್ ಎ ಪರೀಕ್ಷೆಗೆ ಅನುಮತಿ ನೀಡಿದೆ.
ಅತ್ಯಾಚಾರದ ಆರೋಪಿ ಆನಂದ ಬಂಧನಕ್ಕೆ ಮೊದಲು ಆತ್ಮಹತ್ಯಗೆ ಯತ್ನಿಸಿದ್ದರಿಂದ ಮಣಿಪಾಲದ ಕೆ.ಎಂಸಿ ಆಸ್ಪತ್ರೆಗೆ ದಾಖಲು ಪಡಿಸಲಾಗಿತ್ತು. ಆತ ನಿನ್ನೆ ಬಿಡುಗಡೆಗೊಂಡಿದ್ದರಿಂದ, ಪೊಲೀಸರು ಅಧಿಕೃತವಾಗಿ ಮತ್ತೊಮ್ಮೆ ಬಂಧಿಸಿದರು.
ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.
Click this button or press Ctrl+G to toggle between Kannada and English