ಮಂಗಳೂರು: ಶೈನ್ ಸಿಟಿ ಪ್ರೊಡಕ್ಷನ್ ಮಂಗಳೂರು ನಿರ್ಮಾಣದ ಚೊಚ್ಚಲ ಕನ್ನಡ ಚಲನಚಿತ್ರ ‘ಚೆಲ್ಲಾಪಿಲ್ಲಿ’ ಜುಲೈ 5ರಂದು ರಾಜ್ಯಾದ್ಯಂತ ಬೆಳ್ಳಿ ತೆರೆಯಲ್ಲಿ ಬಿಡುಗಡೆ ಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಸಾಯಿಕೃಷ್ಣ ಇಂದು ಸಿಟಿ ಸೆಂಟರಿನ ಸಿನಿಪೊಲಿಶ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರ ಸುಮಾರು 2.5 ಕೋಟಿ ವೆಚ್ಚದಲ್ಲಿ ಶೈನ್ ಸಿಟಿ ಪ್ರೊಡಕ್ಷನ್ ಮಂಗಳೂರು ಬ್ಯಾನರ್ ನಡಿಯಲ್ಲಿ ನಿರ್ಮಾಣಗೊಂಡಿದೆ. 2.20 ನಿಮಿಷ ನಿರಂತರ ಹಾಸ್ಯ ಸನ್ನಿವೇಷಗಳಿವೆ ಚಿತ್ರದಲ್ಲಿ ನಟ ವಿಜಯ ರಾಘವೇಂದ್ರ, ಐಶ್ವರ್ಯನಾಗ್ ಹಾಗೂ ಶೋಭಾರಾಜ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದು ಸಾಯಿಕೃಷ್ಣ ವಿವರಿಸಿದರು.
ಎಂ.ಎಸ್.ಉಮೇಶ್, ನವೀನ್ ಡಿ.ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಸುಂದರ್ ರೈ, ಸಂತೋಷ್ ಶೆಟ್ಟಿ, ಮುಂತಾದ ಹಲವಾರು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಗರದ ಉದ್ಯಮಿ ಸುದೇಶ್ ಭಂಡಾರಿ ಚಿತ್ರದ ನಿರ್ಮಾಪಕರಾಗಿದ್ದು, ನಿರ್ದೇಶನ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ನಾನೇ ನಿರ್ವಹಿಸಿದ್ದೇನೆ. ಕಥೆ ನಾನು ಹಾಗೂ ಶಶಿರಾಜ್ ಶೆಟ್ಟಿ ಕಾವೂರು ಸಿದ್ದಪಡಿಸಿದ್ದು ಎಂದು ಹೇಳಿದರು.
ಕನ್ನಡದಲ್ಲಿ ಮೊದಲ ಬಾರಿಗೆ ಚಿತ್ರ ನಿರ್ಮಿಸುವ ಅವಕಾಶ ನನಗೆ ಸಿಕ್ಕಿದೆ. ಚಿತ್ರದ ಒಟ್ಟು ನಾಲ್ಕು ಹಾಡುಗಳಿಗೆ ಕೇರಳದ ಯುವ ಸಂಗೀತಗಾರ ಮಿಕ್ಕು ಕಾವಿಲ್ ಸಂಗೀತ ನೀಡಿದ್ದಾರೆ. ಗಾಯಕರಾದ ಜೆಸ್ಸಿಗಿಫ್ಟ್ ಕಾರ್ತಿಕ್, ಮಾಲತಿ, ಅನುರಾಧ ಭಟ್, ನಕುಲ್ ಹಾಡುಗಳಿಗೆ ತಮ್ಮ ಸುಮಧುರ ಕಂಠ ನೀಡಿದ್ದಾರೆ. ಪಿ.ಎಲ್.ರವಿ ಛಾಯಾಗ್ರಹಣ, ನಾಗೇಂದ್ರ ಅರಸ್ ಸಂಕಲನ ಮತ್ತು ಕೌರವ ವೆಂಕಟೇಶ್ ಸಾಹಸ ನಿರ್ದೇಶನ ನೀಡಿದ್ದಾರೆ. ಚಿತ್ರದಲ್ಲಿ ವಿಶೇಷ ಆಕರ್ಷಣೆಯಾಗಿ ಅತಿಥಿ ಪಾತ್ರದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಕಾಣಿಸಿಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಸುದೇಶ್ ಭಂಡಾರಿ, ಸಹ ನಿರ್ಮಾಪಕ ಸುಕೇಶ್ ಭಂಡಾರಿ, ಸಿನೆಪೊಲಿಸ್ ಚಿತ್ರ ಮಂದಿರದ ಪ್ರಬಂಧಕ ಕೀರ್ತನ್ ಶೆಟ್ಟಿ, ನಟರಾದ ನವೀನ್ ಡಿ.ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಉಪಸ್ಥಿತರಿದ್ದರು.
Click this button or press Ctrl+G to toggle between Kannada and English