ಉಕ್ಕಿ ಹರಿದ ಬಜ್ಪೆ ಮರವೂರು ಡ್ಯಾಂ ಅಪಾಯದಲ್ಲಿ ಸಿಲುಕಿದ್ದವರ ರಕ್ಷಣೆ

4:11 PM, Thursday, July 4th, 2013
Share
1 Star2 Stars3 Stars4 Stars5 Stars
(4 rating, 3 votes)
Loading...

maravoor dam

ಮಂಗಳೂರು: ನಿರಂತರವಾಗಿ  ಸುರಿಯುತ್ತಿರುವ ಭಾರೀ ಮಳೆಯಿಂದಾಗಿ  ಬಜ್ಪೆ ಮರವೂರು ಸೇತುವೆಯ ಬಳಿ ಕುಡಿಯುವ ನೀರಿನ ಯೋಜನೆಗಾಗಿ ನಿರ್ಮಿಸಲಾಗಿದ್ದ ಅಣೆಕಟ್ಟಿನ ಮೇಲಿನಿಂದ ನೀರು ಉಕ್ಕಿ ಹರಿಯುತ್ತಿದ್ದು, ಇದೇ ಪ್ರದೇಶದ ಮನೆಗಳು ಸಂಪೂರ್ಣವಾಗಿ ನೀರಿನಿಂದ ಆವೃತವಾಗಿ ಅಪಾಯದಲ್ಲಿ ಸಿಲುಕಿದ್ದವರನ್ನು ರಕ್ಷಿಸಲಾಗಿದೆ.

ಗುರುಪುರ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿದ ವೆಟೆಂಡ್ ಡ್ಯಾಂ ನಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ನುಗ್ಗಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹದಿಂದ ಹೆಚ್ಚುವರಿ ನೀರು ಹರಿಯುತ್ತಿದ್ದರೂ ಡ್ಯಾಂನಿಂದ ನೀರನ್ನು ಹೊರಬಿಡುತ್ತಿಲ್ಲ ಎಂದು ಗ್ರಾಮಸ್ಥರುಆರೋಪಿಸಿದ್ದಾರೆ.

ಇದೊಂದು ಪ್ರಾಕೃತಿಕ ಪ್ರವಾಹ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಆದರೆ ಸ್ಥಳೀಯರು ತಡೆಗೋಡೆಗೆ ವಿರೋಧ ವ್ಯಕ್ತಪಡಿಸಿದ ಕಾರಣ ಇದು ಸಾಧ್ಯವಾಗಿಲ್ಲ. ಡ್ಯಾಂನ ಬದಿಯಲ್ಲಿರುವ ಬಾಗಿಲುಗಳನ್ನು ತೆಗೆದು ನೀರು ಬಿಡಲಾಗುತ್ತಿದೆ ಎಂದು ಡ್ಯಾಂನ ಎಂಜಿನಿಯರ್ ಎಸ್. ಡಿ. ಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ನೆರೆ ಸಂತ್ರಸ್ತರಿಗೆ ದೇವಾಸ್ಥಾನದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗಿದೆ. ಅಗ್ನಿಶಾಮಕದಳ, ಹೋಂಗಾರ್ಡ್ ನವರು ನೀರಿನಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ. ರವೀಂದ್ರ ಎಂಬವರ ಮನೆಯ ಐದು ಮಂದಿ ನೀರಿನಲ್ಲಿ ಸಿಲುಕಿದ್ದರು. ಅವರನ್ನು ರಕ್ಷಿಸಲಾಗಿದೆ. ಆರು ತಿಂಗಳ ಮಗು ಸಹಿತ ಒಟ್ಟು ಏಳು ಮಂದಿಯನ್ನು ರಕ್ಷಿಸಲಾಗಿದೆ.

ಇಂದು ಬೆಳಗ್ಗೆ ತುರ್ತು ನಿರ್ವಹಣ ತಂಡವನ್ನು ಕಳುಹಿಸಲಾಗಿದೆ. ಬೆಳಗ್ಗೆ ಐದು ಗಂಟೆಗೆ ಈ ಬಗ್ಗೆ ಮಾಹಿತಿ ಸಿಕ್ಕಿತ್ತು ಎಂದು ಜಿಲ್ಲಾಧಿಕಾರಿ ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English