ಬಂಟ್ವಾಳ: ಪೆರುವಾಯಿಯಲ್ಲಿ ಮೂರು ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಸಂದರ್ಭ ಭಜರಂಗದಳದ ಕಾರ್ಯಕರ್ತರು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಈ ಸಂದರ್ಭ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಹೊಯ್ ಕೈ ನಡೆದಿದ್ದು, ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ್ದಾರೆ.
ಸುಳ್ಯ ತಾಲೂಕಿನ ಎಣ್ಮೂರು ಗ್ರಾಮದ ನಿಂತಿಕಲ್ಲು ಕಡೆಯಿಂದ ಕುದ್ದುಪದವು ಪೆರುವಾಯಿ ಮಾರ್ಗವಾಗಿ ಕೇರಳಕ್ಕೆ ಹಸುಗಳನ್ನು ಸಾಗಾಟ ಮಾಡುವುದನ್ನು ಮುಳಿಯದಲ್ಲಿ ಭಜರಂಗದಳದ ಕಾರ್ಯಕರ್ತ ಚೇತನ್ ಎಂಬವರು ನೋಡಿ, ಪೆರುವಾಯಿಯಲ್ಲಿದ್ದ ಭಜರಂಗದಳ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಎಂಟು ಮಂದಿ ಕಾರ್ಯಕರ್ತರನ್ನೊಳಗೊಂಡ ತಂಡ ಕಾರನ್ನು ಅಡ್ಡಗಟ್ಟಿ ಆಕ್ರಮ ಹಸು ಸಾಗಾಟದ ಓಮ್ನಿಯನ್ನು ಪೆರುವಾಯಿ ನಿಲ್ಲಿಸಿದೆ.
ಓಮ್ನಿಯಲ್ಲಿದ್ದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದ ಸಿಕ್ಕಿ ಬಿದ್ದ ಇನ್ನೊ ಬ್ಬನನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ವಶಕ್ಕೆ ಪಡೆದವ ಎಣ್ಮೂರು ಗ್ರಾಮದ ಸಮಾದಿ ಬಾಬು ಅವರ ಪುತ್ರ ನವೀನ್ (20) ಎಂದು ತಿಳಿದು ಬಂದಿದ್ದು, ತರಕಾರಿ ಹಾಕುವ ಕೆಲಸ ಮಾಡುತ್ತಿದ್ದ. ಕಾರು ಚಲಾವಣೆ ಮಾಡುತ್ತಿದ್ದ ಅದೇ ಊರಿನ ಸಂಶುದ್ದೀನ್ ಎಂಬಾತ ಕಾರಿನಲ್ಲಿ ಬರುವಂತೆ ಸೂಚಿಸಿದ ಹಿನ್ನಲೆಯಲ್ಲಿ ಬಂದಿದ್ದಾನೆ ಎಂದು ತಿಳಿಸಿದ್ದಾನೆ. ಕಾರಿನಲ್ಲಿ ಒಂದು ದನ ಮತ್ತು ಎರಡು ಹೋರಿ ಇದ್ದು ಬೇರೆ ವಾಹನದ ಮೂಲಕ ವಿಟ್ಲ ಠಾಣೆಗೆ ವರ್ಗಾಯಿಸಲಾಗಿದೆ.
ಓಮ್ನಿಯಲ್ಲಿದ್ದ ಹಸುಗಳನ್ನು ಪಿಕಪ್ ವಾಹನದಲ್ಲಿ ತುಂಬಿಸಿ ಪೊಲೀಸ್ ಠಾಣೆಗೆ ರವಾನಿಸಲಾಯಿತು. ಈ ಸಂದರ್ಭ ನೆರೆದಿದ್ದವರರಲ್ಲಿ ವಾಗ್ವಾದ ನಯಡೆಯಿತು. ಸ್ಥಳೀಯರಾದ ಪೆರುವಾಯಿ ಪ್ರಭಾಕರ ಶೆಟ್ಟಿ, ಗೋಪಾಲ ಮತ್ತು ಪ್ರಶಾಂತ ಮಣಿಯಾಣಿ, ರಂಜಿತ್ ಮಾರ್ಲ ನಡುವೆ ಮಾರಾ ಮಾರಿ ನಡೆಯಿತು. ಸ್ಥಳದಲ್ಲಿ ಇದ್ದ ಪೊಲೀಸರು ನಿಯಂತ್ರಿಸಲು ಲಘು ಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಿ ಸ್ಥಳದಿಂದ ತೆರಳಿದ್ದರು. ಆ ಬಳಿಕವೂ ಮಾತಿನ ಚಕಮಕಿ ಹೊಡೆದಾಟಗಳು ನಡೆಯುತ್ತಲೇ ಇತ್ತು.
Click this button or press Ctrl+G to toggle between Kannada and English