ಬ್ಯಾರಿ ಸಾಹಿತ್ಯ ಅಕಾಡೆಮಿಗೆ ನೂತನ ವೆಬ್ ಸೈಟ್.

5:38 PM, Tuesday, November 2nd, 2010
Share
1 Star2 Stars3 Stars4 Stars5 Stars
(No Ratings Yet)
Loading...

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ವೆಬ್ ಸೈಟ್ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ವೆಬ್ ಸೈಟ್ karnatakabearysahityaacademy.org ಯನ್ನು ನಗರದ ಶ್ರೀನಿವಾಸ ಹೋಟೇಲ್ ನಲ್ಲಿ ಇಂದು ಬೆಳಿಗ್ಗೆ 10.00ಗೆ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ವೆಬ್ ಸೈಟ್ಬಳಿಕ ಮಾತನಾಡಿದ ಅವರು ಬ್ಯಾರಿ ಭಾಷೆ ಮತ್ತು ಸಂಸ್ಕೃತಿಯು ತುಳು ಭಾಷೆ ಮತ್ತು ಸಂಸ್ಕೃತಿಯಷ್ಟೇ ಶ್ರೀಮಂತವಾಗಿದೆ. ಈ ಎರಡೂ ಸಮುದಾಯಗಳ ಸಂಬಂಧ ಅನನ್ಯವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಉದ್ಯೋಗ ಮತ್ತಿತರ ಕಾರಣಕ್ಕಾಗಿ ಬ್ಯಾರಿಗಳು ಜಗತ್ತಿನ ವಿವಿಧ ಮೂಲೆಗಳಲ್ಲಿ ಹಂಚಿ ಹೋಗಿದ್ದಾರೆ. ಅವರನ್ನು ಈ ಅಂತರ್ಜಾಲ ಒಗ್ಗೂಡಿಸಲಿ ಎಂದು ನಳಿನ್ ಕುಮಾರ್ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣ್ಣೂರು ಮತ್ತು ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ, ಡಾ. ಎಂ ಅಬ್ದುಲ್ ರಹಿಮಾನ್ ವಹಿಸಿದ್ದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ವೆಬ್ ಸೈಟ್ಮುಖ್ಯ ಅತಿಥಿಗಳಾಗಿ ಶಾಸಕ ಯೋಗೀಶ್ ಭಟ್, ಯು.ಟಿ.ಖಾದರ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಅಕಾಡೆಮಿ ಸದಸ್ಯರಾದ ಅಬ್ದುಲ್ ಅಝೀಝ್ ಬೈಕಂಪಾಡಿ, ರಹೀಂ ಉಚ್ಚಿಲ, ಸುಶೀಲ್ ಪಿ. ಉಪಾದ್ಯಾಯ, ಯು.ಪಿ. ಅಬ್ದುಲ್ ರಝಾಕ್, ಕೆ.ಎ. ಖಾಲಿದ್, ಪಿ. ಮೊಹಮ್ಮದ್ ಉಪಸ್ಥಿತರಿದ್ದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ವೆಬ್ ಸೈಟ್ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟಾರ್ ಚಂದ್ರಹಾಸ ರೈ. ಬಿ. ಸ್ವಾಗತಿಸಿದರು, ಸಂಶುದ್ದೀನ್ ಮಡಿಕೇರಿ ವಂದಿಸಿದರು. ಪತ್ರಕರ್ತ ಹಂಝ ಮಲಾರ್ ಕಾರ್ಯಕ್ರಮ ನಿರೂಪಿಸಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ವೆಬ್ ಸೈಟ್

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English