ಕೊಯಿಲ ಸುಲಿಗೆ ಪ್ರಕರಣದ ಆರೋಪಿಯ ಬಂಧನ

12:33 PM, Tuesday, July 9th, 2013
Share
1 Star2 Stars3 Stars4 Stars5 Stars
(No Ratings Yet)
Loading...

Koila Theft caseಮಂಗಳೂರು : ಜೂನ್ 4 ರಂದು ಪಿರ್ಯಾದುದಾರರಾದ ಶ್ರೀಮತಿ ಲತಾ, ಪ್ರಾಯ: 38 ವರ್ಷ, ಗಂಡ: ಲೋಕೇಶ್, ವಾಸ: ಕುರುವಳಿಕೆ ಮನೆ, ಕೊಯಿಲ ಗ್ರಾಮ, ಪುತ್ತೂರು ತಾಲೂಕು. ಎಂಬವರು ಕಡಬ ಪೊಲೀಸ್ ಠಾಣೆಗೆ  ಪಿರ್ಯಾದನ್ನು ನೀಡಿದ್ದು ಸಾರಾಂಶವೇನೆಂದರೆ ದಿನಾಂಕ: 04.06.2013ರಂದು  ಮಧ್ಯಾಹ್ನ 12:30 ಗಂಟೆ ಸಮಯಕ್ಕೆ ಪಿರ್ಯಾಧಿದಾರರು ಬೀಡಿಯನ್ನು ಬೀಡಿ ಬ್ರಾಂಚ್ಗೆ ಕೊಟ್ಟು, ಪುತ್ತೂರು ತಾಲೂಕು, ಕೊಯಿಲ ಗ್ರಾಮದ, ಕೆ.ಸಿ ಫಾರ್ಮ್ ಬಳಿ ಇರುವ ನೀಲಮೆ ಎಂಬಲ್ಲಿ ತನ್ನ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಯಾರೋ ಅಪರಿಚಿತ ವ್ಯಕ್ತಿಯು ಪಿರ್ಯಾಧಿದಾರರ ಬಳಿಗೆ ಬಂದು ನೂಜಿಗು ಪೊಪುನ ಸಾದಿ ಒವು ಎಂದು ತುಳು ಭಾಷೆಯಲ್ಲಿ ಕೇಳಿದಾಗ  ಪಿರ್ಯಾಧಿದಾರರು  ತನಗೆ ಗೊತ್ತಿಲ್ಲವೆಂದು ಹೇಳಿ ನಡೆದುಕೊಂಡು ಮುಂದೆ ಹೋದಾಗ ಆತನು ಹಿಂದಿನಿಂದ ಬಂದು ಪಿರ್ಯಾಧಿದಾರರ ತಲೆ ಕೂದಲನ್ನು ಹಿಡಿದು ಮುಂದಕ್ಕೆ  ಬಗ್ಗಿಸಿ ಪಿರ್ಯಾಧಿದಾರರ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕೀಳಲು ಪ್ರಯತ್ನಿಸಿದಾಗ ಮಾಂಗಲ್ಯ ಸರವನ್ನು ಪಿರ್ಯಾಧಿದಾರರು ಗಟ್ಟಿಯಾಗಿ ಹಿಡಿದಿದ್ದು, ಆ ಸಮಯ ಮಾಂಗಲ್ಯ ಸರವು ಅರ್ಧ ತುಂಡಾಗಿದ್ದು, ತುಂಡಾದ ಅಂದಾಜು ಸುಮಾರು 16 ಗ್ರಾಂನಷ್ಟಿದ್ದ ಅರ್ಧ ಚಿನ್ನದ ಮಾಂಗಲ್ಯ ಸರವನ್ನು ಆರೋಪಿಯು ಹಿಡಿದುಕೊಂಡು ಅಲ್ಲಿಂದ ಕಾಡು ಪ್ರದೇಶಕ್ಕೆ ಓಡಿ ಹೋಗಿರುವುದಾಗಿ  ಪಿರ್ಯಾಧಿ ನೀಡಿದ್ದು ಕಡಬ ಪೊಲೀಸು ಠಾಣೆಯಲ್ಲಿ ಅ.ಕ್ರ 100/2013 ಕಲಂ : 392 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಸದ್ರಿ ಪ್ರಕರಣವನ್ನು ಬೇದಿಸಲು ಮಾನ್ಯ ಪೊಲೀಸು ಅಧೀಕ್ಷಕರವರ ನಿರ್ದೇಶನದ ಮೇರೆಗಿ ಸುಲಿಗೆ ಮಾಡಿದ ಆರೋಪಿಯ  ಪತ್ತೆಗೆ ಪೊಲೀಸು ಉಪಾಧೀಕ್ಷರ ನೇತೃತ್ವದಲ್ಲಿ ತಂಡವನ್ನು  ರಚಿಸಿ ಪತ್ತೆ ಕಾರ್ಯವನ್ನು ತೀವ್ರಗೊಳಿಸಿದ್ದು 4 ದಿನದಲ್ಲಿ ಪೊಲೀಸರು ಆರೋಪಿಯ ಜಾಡನ್ನು ಹಿಡಿದು ಆರೋಪಿ ಕೆ ಇಬ್ರಾಹಿಂ ಖಲಂದರ್ ಎಂಬಾತನನ್ನು ಇಂದು ದಸ್ತಗಿರಿ ಮಾಡಿ ಸದ್ರಿ ಆರೋಪಿಯಿಂದ ಸುಲಿಗೆ ಮಾಡಿದ ಚಿನ್ನದ ಮಾಂಗಲ್ಯ ಸರವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಚಿನ್ನದ ಮಾಂಗಲ್ಯ ಸರದ ಅಂದಾಜು ಮೌಲ್ಯ 41,000/- ಆಗಿರುತ್ತದೆ.

ಸದ್ರಿ ಸೊತ್ತಿಗಾಗಿ ಸುಲಿಗೆ ಮಾಡಿದ ಆರೋಪಿಯನ್ನು ಬಂಧಿಸಲು ಸಹಕರಿಸಿದ ಡಿಎಸ್ಪಿ ಪುತ್ತೂರು, ಶ್ರೀ.ಸುರೇಶ್ ಸಿಪಿಐ ಪುತ್ತೂರು ಗ್ರಾಮಾಂತರ, ಪಿ.ಎಸ್.ಐ ಕಡಬ ಹಾಗೂ ಕಡಬ ಠಾಣಾ ಸಿಬ್ಬಂದಿಗಳಿಗೆ ಪೊಲೀಸು ಅಧೀಕ್ಷಕರಿಂದ ಪ್ರಶಂಸಿಸಲಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English