ಕಾಸರಗೋಡು ಯುವಕನ ಇರಿದು ಕೊಲೆ, ಮೂವರು ವಶಕ್ಕೆ

12:04 PM, Wednesday, July 10th, 2013
Share
1 Star2 Stars3 Stars4 Stars5 Stars
(4 rating, 5 votes)
Loading...

 Sabith murder ಕಾಸರಗೋಡು: ಮೀಪುಗುರಿಯ  ಜೆ.ಪಿ. ಕಾಲನಿ ಬಳಿ ಜುಲೈ 7ರಂದು ಬಟ್ಟೆ ಅಂಗಡಿ ಉದ್ಯೋಗಿ ಟಿ.ಎ. ಸಾಬಿತ್(19)ರನ್ನು ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಿದ್ದಾರೆ.

ಭಾನುವಾರ ಬೆಳಗ್ಗೆ ಗೆಳೆಯ ರಶೀದ್ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಇನ್ನೊಂದು ಬೈಕ್‌ನಲ್ಲಿ ಬಂದ ತಂಡವೊಂದು ಇರಿದು ಪರಾರಿಯಾಗಿತ್ತು. ತೀವ್ರವಾಗಿ ಗಾಯಗೊಂಡ ಸಾಬೀತ್  ನನ್ನು ಕೂಡಲೇ ಕಾಸರಗೋಡು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸಿದೆ ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾನೆ. ಕೃತ್ಯದಲ್ಲಿ ನೇರವಾಗಿ ಶಾಮೀಲಾಗಿದ್ದ ಅಕ್ಷಯ್ ಮತ್ತು ವೈಶಾಖ್ ತಲೆಮರೆಸಿಕೊಂಡಿರುವುದಾಗಿ ಡಿವೈಎಸ್ ಪಿ.ಮೋಹನ್ ಚಂದ್ರನ್ ತಿಳಿಸಿದ್ದಾರೆ.

ಪ್ರಮುಖ ಆರೋಪಿಗಳು ಕೃತ್ಯ ನಡೆಸಲು ಬಳಸಿದ್ದ ಸ್ಕೂಟರ್ ಮತ್ತು ಮೊಬೈಲನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೃತ್ಯ ನಡೆದ 200 ಮೀಟರ್ ದೂರದ ನಿರ್ಜನ ಪ್ರದೇಶವೊಂದರಲ್ಲಿ ಸ್ಕೂಟರ್ ಪತ್ತೆಯಾಗಿದೆ. ಆರೋಪಿಗಳಿಬ್ಬರು ಜಿಲ್ಲೆಯಲ್ಲೇ ತಲೆಮರೆಸಿ ಕೊಂಡಿರುವುದಾಗಿ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ವಶಪಡಿಸಿಕೊಂಡ ಸ್ಕೂಟರ್ ಅಕ್ಷಯ್ ನ ಸಹೋದರನ ಮಾಲಕತ್ವದಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಂಧಿತ ಮೂವರು  ಕೃತ್ಯದಲ್ಲಿ ಶಾಮೀಲಾಗಿರದಿದ್ದರೂ ಆರೋಪಿಗಳ ಜತೆ ನಂಟು ಹೊಂದಿರುವುದರಿಂದ ಪ್ರಕರಣ ದಾಖಲಿಸಲಾಗುವುದೆಂದು ಡಿವೈಎಸ್ ಪಿ ತಿಳಿಸಿದ್ದಾರೆ. ಮೊಬೈಲ್ ಕರೆಗಳ ಜಾಡನ್ನು ಹಿಡಿದು ತನಿಖೆ ನಡೆಸಿದಾಗ ಮೂವರ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರಂತೆ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮೊಬೈಲನ್ನು ಅಕ್ಷಯ್ ಸ್ನೇಹಿತರಿಗೆ ಒಪ್ಪಿಸಿ ಪರಾರಿಯಾಗಿದ್ದಾನೆನ್ನಲಾಗಿದೆ.

ತನಿಖೆ ನಡೆಸಿದ ಪೊಲೀಸರು ಇವರ ಬಳಿಯಿಂದ ಮೊಬೈಲನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸ್ಕೂಟರ್ ನಲ್ಲಿ ರಕ್ತದ ಕಲೆಗಳು ಕಂಡು ಬಂದಿವೆ. ಕಣ್ಣೂರಿನಿಂದ ಫಾರೆನ್ಸಿಕ್ ತಜ್ಞರು ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸೀಟಿನಡಿಯಲ್ಲಿ ಜಾಕೆಟ್ ಪತ್ತೆಯಾಗಿದೆ. ಪ್ರಮುಖ ಆರೋಪಿಗಳಾದ ಅಕ್ಷಯ್ ಮತ್ತು ವೈಶಾಖ್ ಪರಿಸರ ಪ್ರದೇಶದಲ್ಲೇ ತಲೆಮರೆಸಿಕೊಂಡಿರುವ ಸಾಧ್ಯತೆ ಇರುವುದಾಗಿ ಪೊಲೀಸರು ಶಂಕಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English