ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದ ಆರೋಪಿ ಯೋಗೀಶ್ ಡಿಸ್ಚಾರ್ಜ್, ಬಂಧನ

1:15 PM, Thursday, July 11th, 2013
Share
1 Star2 Stars3 Stars4 Stars5 Stars
(5 rating, 5 votes)
Loading...

Yogish Manipalಉಡುಪಿ : ಜೂನ್ 20ರ ರಾತ್ರಿ ಮಣಿಪಾಲದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಯೋಗೀಶ್ ನನ್ನು ಮಣಿಪಾಲ ಪೋಲೀಸರು ಗುರುವಾರ ಬಂಧಿಸಿದ್ದಾರೆ.  ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಿಂದ ಇಂದು ಬೆಳಿಗ್ಗೆ ಯೋಗೀಶ್ ಡಿಸ್ಚಾರ್ಜ್ ಆದಾಗ ಪೋಲೀಸರು ಬಂಧಿಸಿದರು. ಯೋಗೀಶ್ ನನ್ನು ಇಂದು ಸಂಜೆ 4 ಗಂಟೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು.

ಜೂನ್ 27ರಂದು ಐಜಿಪಿ ಪ್ರತಾಪ್ ರೆಡ್ಡಿ ಅವರಿಗೆ ಕರೆ ಮಾಡಿದ್ದ ಯೋಗೀಶ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ದಿನ ಆತನ ಸ್ಥಿತಿ ಚಿಂತಾಜನಕವಾಗಿತ್ತು.

ಜೂನ್ 20ರ ರಾತ್ರಿ ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಮೂರು ಮಂದಿ ರಿಕ್ಷಾದಲ್ಲಿ ಕರೆದೊಯ್ದು ಆತ್ಯಾಚಾರ ಮಾಡಿದ್ದರು. ಒಂದು ವಾರದ ಬಳಿಕ ಆರೋಪಿಗಳಾದ ಯೋಗೀಶ, ಹರಿಪ್ರಸಾದ್ ಮತ್ತು ಆನಂದ್ ನನ್ನು ಪೊಲೀಸರು ಬಂಧಿಸಿದ್ದರು. ಆನಂದ ಕೂಡ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿ ಬಿಡುಗಡೆಯಾದ ಬಳಿಕ ಪೊಲೀಸರು ಬಂಧಿಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English