ಜಿಲ್ಲಾಧಿಕಾರಿ ಪೊನ್ನುರಾಜ್ ವರ್ಗಾವಣೆಯನ್ನು ರದ್ದುಗೊಳಿಸಿದ ರಾಜ್ಯ ಸರ್ಕಾರ

12:27 PM, Wednesday, November 3rd, 2010
Share
1 Star2 Stars3 Stars4 Stars5 Stars
(No Ratings Yet)
Loading...

ಜಿಲ್ಲಾಧಿಕಾರಿ ಪೊನ್ನುರಾಜ್ ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ವಿ.ಪೊನ್ನುರಾಜ್ ಅವರ ಶಿವಮೊಗ್ಗ ವರ್ಗಾವಣೆಯ ಆದೇಶವನ್ನು ರಾಜ್ಯ ಸರಕಾರ ರದ್ದುಗೊಳಿಸಿದ್ದು ಪಂಕಜ್‌ಕುಮಾರ್ ಪಾಂಡೆ ಅವರನ್ನು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿಯೇ ಮುಂದುವರಿಸಲು ಸೂಚಿಸಿದೆ. ಇವರ ಜೊತೆ ವರ್ಗಾವಣೆಗೊಂಡ ಇನ್ನು ಮೂರು ಜನ ಐಎಎಸ್ ಅಧಿಕಾರಿಗಳ ವರ್ಗಾವಣೆ ಆದೇಶವನ್ನು ಮಾರ್ಪಡಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ದ.ಕ ಜಿಲ್ಲಾಪಂಚಾಯತ್ ಸಿಇಓ ಪಿ ಶಿವಶಂಕರ್ ಅವರ ಆದೇಶವನ್ನು ತಡೆ ಹಿಡಿಯಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ವಿ.ಬಿ.ಪಾಟೀಲರ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ. ಜಿ.ರಾಮಚಂದ್ರ ಅವರನ್ನು ಕೃಷಿ ಮಾರುಕಟ್ಟೆ ನಿರ್ದೇಶಕರನ್ನಾಗಿ ಮುಂದುವರಿಸಲಾಗಿದೆ.
ಕರ್ನಾಟಕ ಸೇವಾ ಅಧಿಕಾರಿಯಾಗಿರುವ ಎ.ಬಿ. ಇಬ್ರಾಹಿಂ ಮುಖ್ಯ ಆಡಳಿತ ಅಧಿಕಾರಿಯಾಗಿ ಕಾವೇರಿ ನಿಗಮದ ಮುಖ್ಯ ಕಚೇರಿಗೆ ವರ್ಗಾವಣೆಯಾಗಿದೆ. ಮಂಗಳೂರು ನಗರ ಪಾಲಿಕೆ ಆಯುಕ್ತ ಕೆ.ಏನ್. ವಿಜಯ ಪ್ರಕಾಶ್ ವರ್ಗಾವಣೆ ಆದೇಶವು ರದ್ದಾಗಿದೆ.
ಪೊನ್ನುರಾಜ್ ಅವರ ಮುಂದಿನ ಹುದ್ದೆಯನ್ನು ಸರಕಾರ ಇನ್ನು ನಿಗದಿ ಪಡಿಸಿಲ್ಲ,

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English