ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ಮಧ್ಯಾಹ್ನ 12.30ಕ್ಕೆ ತಮ್ಮ ಚೊಚ್ಚಲ ಹಾಗೂ 2013ನೇ ಸಾಲಿನ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು, ಜನರ ಅವಶ್ಯಕತೆಗಳನ್ನು ಈಡೇರಿಸುವುದು ತಮ್ಮ ಕರ್ತವ್ಯ ಎಂದು ಹೇಳಿದರು.
ರಾಜ್ಯದ ಜನರ ನೀರಿಕ್ಷೆಗಳು ಹೆಚ್ಚು ಇಲ್ಲ. ಆದರೆ ಹಿಂದಿನ ಸರ್ಕಾರ ಜನರ ನಿರೀಕ್ಷೆಯನ್ನು ಹುಸಿ ಮಾಡಿದೆ. ಜನತೆಗೆ ಉತ್ತಮ ನೀರು, ಊಟ, ಮನೆ, ಮಾರುಕಟ್ಟೆ, ವಿದ್ಯುತ್ ಮತ್ತು ಉತ್ತಮ ರಸ್ತೆ ಒದಗಿಸುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದರು.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನರ ಮೇಲೆ ಹೆಚ್ಚು ಹೊರೆ ಹಾಕದೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಚು ಅನುಕೂಲ ಕಲ್ಪಿಸುವ ಯತ್ನ ಮಾಡಿದ್ದಾರೆ.
ಇಂದು 8ನೇ ಬಾರಿ ಬಜೆಟ್ ಮಂಡಿಸಿದ ಸಿದ್ದರಾಮ್ಯ ಅವರು, ಒಟ್ಟು 1 ಲಕ್ಷದ 20 ಸಾವಿರದ 717 ಕೋಟಿ ರುಪಾಯಿ ಗಾತ್ರದ ಬಜೆಟ್‌ನಲ್ಲಿ ಶಿಕ್ಷೆಣಕ್ಕೆ ಅತೀ ಹೆಚ್ಚು ಹಣ ಹಂಚಿಕೆ ಮಾಡಿದ್ದಾರೆ.
ಸಿದ್ದು ಬಜೆಟ್‌ನ ಮುಖ್ಯಾಂಶಗಳು
ವಾಣಿಜ್ಯ ಮತ್ತು ಕೈಗಾರಿಕೆ-885 ಕೋಟಿ
ನಗರಾಭಿವೃದ್ಧಿ-9,286 ಕೋಟಿ
ರೈತರಿಗೆ 2 ಲಕ್ಷ ರುಪಾಯಿವರಗೆ ಬಡ್ಡಿ ರಹಿತ ಸಾಲ ಹಾಗೂ 2ರಿಂದ 3 ಲಕ್ಷದವರೆಗಿನ ಅಲ್ಪಾವಧಿ ಸಾಲಕ್ಕೆ ಶೇ.1 ರ ಬಡ್ಡಿ ಮತ್ತು ಶೇ.3ರ ಬಡ್ಡಿಯಲ್ಲಿ 10 ಲಕ್ಷದ ವರೆಗೆ ದಿಘಾರ್ವಧಿ ಸಾಲ ಪಡೆಯಬಹುದಾಗಿದೆ.
ಕ್ರೀಡೆ ಮತ್ತು ಯುವಜನ ಕ್ಷೇತ್ರಕ್ಕೆ 138 ಕೋಟಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ 3,466 ಕೋಟಿ
ಒಳಾಡಳಿತ ಮತ್ತು ಸಾರಿಗೆ -5,315 ಕೋಟಿ
ಸಮಾಜ ಕಲ್ಯಾಣ ಇಲಾಖೆಗೆ 5046 ಕೋಟಿ
ಲೋಕೋಪಯೋಗಿ-5862 ಕೋಟಿ
15 ಜಿಲ್ಲೆಗಳಲ್ಲಿ ಮಹಿಳಾ ಕಾಲೇಜ್ ಸ್ಥಾಪನೆ
ಮೀನುಗಾರಿಕೆ- 1,903 ಕೋಟಿ
ಉನ್ನತ ಶಿಕ್ಷಣಕ್ಕೆ – 3,243 ಕೋಟಿ ಅನುದಾನ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-5421 ಕೋಟಿ
ಪಶು ಸಂಗೋಪನೆ – 4,371 ಕೋಟಿ
ಜಲ ಸಂಪನ್ಮೂಲ- 9363 ಕೋಟಿ
ಇಂಧನ – 10,312 ಕೋಟಿ
ವಸತಿ- 1,365 ಕೋಟಿ
ಕಂದಾಯ – 3,797 ಕೋಟಿ
ಗ್ರಾಮೀಣಾಭಿವೃದ್ಧಿ ಹಾಗೂ ಪಂಜಾಯತ್ ರಾಜ್- 8218
ಉತ್ಪಾದನಾ ವಲಯ ಉತ್ತೇಜನಕ್ಕೆ 5 ಕೋಟಿ
ಕೃಷಿ ಕ್ಷೇತ್ರಕ್ಕೆ 3,095 ಕೋಟಿ
ರೈತರಿಗೆ 2 ಲಕ್ಷ ರುಪಾಯಿವರಗೆ ಬಡ್ಡಿ ರಹಿತ ಸಾಲ ಹಾಗೂ 2ರಿಂದ 3 ಲಕ್ಷದವರೆಗಿನ ಅಲ್ಪಾವಧಿ ಸಾಲಕ್ಕೆ ಶೇ.1 ರ ಬಡ್ಡಿ ಮತ್ತು ಶೇ.3ರ ಬಡ್ಡಿಯಲ್ಲಿ 10 ಲಕ್ಷದ ವರೆಗೆ ದಿಘಾರ್ವಧಿ ಸಾಲ ಪಡೆಯಬಹುದಾಗಿದೆ.
ಕೃಷಿ ಬೆಲೆ ಆಯೋಗ ರಚನೆ
ಯಾದಗಿರಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆ
ಬರ, ನೆರೆಯಿಂದ ನಿರಾಶ್ರಿತರ ಮಕ್ಕಳ ಶಿಕ್ಷಣ ಶುಲ್ಕ ಭರಿಸಲು ಸರ್ಕಾರ ನಿರ್ಧಾರ
ರೈತರಿಗೆ ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್‌ಗಳ ವಿತರಣೆ
ವಿದ್ಯುತ್ ಉತ್ಪಾದನೆಗೆ ಕಾಲುವೆಗಳ ಮೇಲೆ ಸೌರಶಕ್ತಿ ಪ್ಯಾನೆಲ್‌ಗಳ ಅಳವಡಿಕೆ.
ಆಕಸ್ಮಿಕವಾಗಿ ಕುರಿ, ಮೇಕೆ ಮೃತಪಟ್ಟರೆ 3 ಸಾವಿರ ಪರಿಹಾರ ಘೋಷಣೆ
ಕೃಷಿ ಉತ್ಪನ್ನಗಳ ದರ ಮಾಹಿತಿಗೆ ಪ್ರತ್ಯೇಕ ವೆಬ್‌ಸೈಟ್ ಸ್ಥಾಪನೆ
ಮುಂದಿನ ವರ್ಷಗಳಲ್ಲಿ 130 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಗುರಿ
ಎತ್ತಿನಹೊಳೆ ಯೋಜನೆಗೆ 1000 ಕೋಟಿ ರು. ಅನುದಾನ
ಚಿಕ್ಕಪಡಸಲಗಿ ಬ್ಯಾರೇಜ್ ಎತ್ತರಿಸಲು 10 ಕೋಟಿ ರು. ಅನುದಾನ
ಮೈಸೂರಿನಲ್ಲಿ ಹಾಲಿನ ಪುಡಿ ತಯಾರಿಸುವ ಮೆಗಾ ಡೈರಿ ಸ್ಥಾಪನೆ
ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ
ಚಾಮರಾಜನಗರದ ಅಮೃತ ಭೂಮಿ ಟ್ರಸ್ಟ್‌ಗೆ 5 ಕೋಟಿ
ದಾಳಿಂಬೆ ಬೆಳೆಗಾರರಿಗೆ 12.5 ಕೋಟಿ ನೆರವು
ರೇಷ್ಮೆ ಗೂಡಿನ ಮಾರುಕಟ್ಟೆ ಆಧುನಿಕರಣಕ್ಕೆ 5 ಕೋಟಿ
ಪೊಲೀಸ್ ಇಲಾಖೆಗೆ ಸಿದ್ದು ನೀಡಿದ ಕೊಡುಗೆಗಳು
10 ಸಾವಿರ ಪೊಲೀಸ್ ವಸತಿ ಗೃಹಗಳ ನಿರ್ಮಾಣ
ಇಂಡಿಯಾ ರಿಸರ್ವ್ ಬೆಟಾಲಿಯನ್ ಸ್ಥಾಪನೆ
51 ಕೋಟಿ ವೆಚ್ಚದಲ್ಲಿ 32 ಹೊಸ ಪೊಲೀಸ್ ಠಾಣೆಗಳ ಕಟ್ಟಡ ನಿರ್ಮಾಣ
ಹೆದ್ದಾರಿ ಗಸ್ತು ವಾಹನ ಖರೀದಿಗೆ 4 ಕೋಟಿ
ಹೊಸದಾಗಿ 8,500 ಪೇದೆಗಳ ನೇಮಕ
ನಕ್ಸಲ್ ನಿಗ್ರಹ ಪಡೆಗೆ 9 ಕೋಟಿ
ಕೋರಮಂಗಲ ಹಾಗೂ ಮೈಸೂರು ಪೊಲೀಸ್ ಶಾಲೆಗಳ ಉನ್ನತಿಕರಣ
ಸಿನಿಮಾಗೆ ಸಿದ್ದು ಕೊಡುಗೆ
ಕನ್ನಡ ಅಮೃತ ಮಹೋತ್ಸವ ಭವನದ ಬಾಕಿ ಉಳಿದಿರುವ ನಿರ್ಮಾಣ ಕಾರ್ಯಕ್ಕೆ 2.5 ಕೋಟಿ ಅನುದಾನ
ವರನಟ ಡಾ.ರಾಜಕುಮಾರ್ ಸ್ಮಾರಕ ಕಾಮಗಾರಿ ಪೂರ್ಣಗೊಳಿಸಿ ಶೀಘ್ರವೇ ಲೋಕಾರ್ಪಣೆ
ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಎರಡು ಎಕರೆ ಜಮೀನು, ಸ್ಮಾರಕ ನಿರ್ಮಾಣಕ್ಕೆ ಚಾಲನೆ
ಗುಣಾತ್ಮಕ ಚಿತ್ರಗಳಿಗೆ ನೀಡುವ ಸಹಾಯಧನ ಏರಿಕೆ
75 ರಿಂದ 100 ಕನ್ನಡ ಸಿನಿಮಾಗಳಿಗೆ ಸಹಾಯಧ ಘೋಷಣೆ
ಬೆಂಗಳೂರಿಗೆ ಸಾರಿಗೆಗೆ ಸಿಕ್ಕಿದ್ದು
ಬನ್ನೇರುಘಟ್ಟ, ಸರ್ಜಾಪುರ ರಸ್ತೆ ಅಗಲಿಕರಣಕ್ಕೆ 300 ಕೋಟಿ ರು. ಅನುದಾನ
ಸಿಲ್ಕ್‌ಬೋರ್ಡ್ ಜಂಕ್ಷನ್ ಮೇಲ್ಸೇತುವೆ ನಿರ್ಮಾಣಕ್ಕೆ 150 ಕೋಟಿ ರು.
ಕೆ.ಆರ್.ಪುರಂ ಸೇತುವೆ ಗ್ರೇಡ್ ಸಪರೇಟರ್‌ಗೆ ಸುಮಾರು 500 ಕೋಟಿ ರು.
ಸೋನಿವರ್ಲ್ಡ್ ಜಂಕ್ಷನ್ ಮೇಲು ರಸ್ತೆ ನಿರ್ಮಾಣಕ್ಕೆ 200 ಕೋಟಿ ರು. ಅನುದಾನ ಹಾಗೂ ಪಾದಚಾರಿಗಳ ರಕ್ಷಣೆಗೆ ಸ್ಕೈವಾಕ್ ನಿರ್ಮಾಣಕ್ಕೆ 100 ಕೋಟಿ ರು.
ಮೆಟ್ರೋ ಟ್ರೈನ್ ಲೈನ್ ಅಳವಡಿಕೆ ಕಾಮಗಾರಿ ಅಕ್ಟೋಬರ್‌ನಲ್ಲಿ ಆರಂಭ
ನಗರದ ಸಂಪಿಗೆ ರಸ್ತೆಯಿಂದ ಪೀಣ್ಯ ನಡುವಣ 10.5 ಕಿಮೀ ರಸ್ತೆ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭ
ಮುಖ್ಯಾಂಶಗಳು
* ವರ್ಷಕ್ಕೆ 75 ಉತ್ತಮ ಕನ್ನಡ ಚಿತ್ರಗಳಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನವನ್ನು 100 ಚಿತ್ರಗಳಿಗೆ ವಿಸ್ತರಿಸಲಾಗುತ್ತದೆ.
* ಸಾರ್ವಜನಿಕರಿಗೆ ವೈ-ಫೈ ಸೇವೆ ಒದಗಿಸಲು ಬೆಂಗಳೂರಿನ ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಪೈಲಟ್ ಯೋಜನೆ ಆರಂಭಿಸಲಾಗುತ್ತದೆ. ನಂತರ ಮಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರುಗಳಲ್ಲಿಯೂ ಈ ಯೋಜನೆ ಜಾರಿಗೊಳಿಸಲಾಗುತ್ತದೆ
* ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ದಟ್ಟಣೆ ಇರುವ ಪಟ್ಟಣಗಳಲ್ಲಿ ಮೇಲ್ಸೇತುವೆ ನಿರ್ಮಾಣ
* ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಕೆಟ್ಟುಹೋದ ರಸ್ತೆಗಳ ದುರಸ್ತಿಗಾಗಿ 50 ಕೋಟಿ ರೂ.
* ಶಿರಾದ ಕಲ್ಲುಕೋಟೆ ಬಳಿ ಅಬಕಾರಿ ಅಕಾಡೆಮಿ ಸ್ಥಾಪನೆ
* ಜೈನ ಸಮುದಾಯದವರಿಗೆ ವಿದ್ಯಾರ್ಥಿ ವೇತನಕ್ಕಾಗಿ 10 ಕೋಟಿ ರೂ. ಮೀಸಲು
* ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವ ಎಲ್ಲ ಕ್ರೀಡಾಪಟುಗಳ ಶಿಕ್ಷಣ ಶುಲ್ಕವನ್ನು ಸರಕಾರ ಭರಿಸಲಿದೆ.
* ತುಳುವರು, ಬಿಲ್ಲವರ ಆರಾಧ್ಯ ದೈವವಾದ ಕೋಟಿ ಚೆನ್ನಯರ ಹುಟ್ಟೂರು ಪಡುಮಲೆಯ ಅಭಿವೃದ್ಧಿಗಾಗಿ 5 ಕೋಟಿ ರೂ.
* ಮಂಗಳೂರು ವಿವಿಯಲ್ಲಿ ಮಹಾಕವಿ ರತ್ನಾಕರವರ್ಣಿ ಪೀಠ ಸ್ಥಾಪನೆಗೆ 1 ಕೋಟಿ ರೂ. ಮೂಡುಬಿದಿರೆ ಹಾಗೂ ಬೆಂಗಳೂರುಗಳಲ್ಲಿ ರತ್ನಾಕರವರ್ಣಿ ಜಯಂತಿ ಆಚರಣೆಗೆ 50 ಲಕ್ಷ
* ಎಲ್ಲ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುದಾನ ಸರಿಯಾಗಿ ಹಂಚಿಕೆಯಾಗುವ ನಿಟ್ಟಿನಲ್ಲಿ ಸಾಂಸ್ಕೃತಿಕ ನೀತಿ ಜಾರಿ
* ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಬಳಕೆ ವ್ಯಾಪಕಗೊಳಿಸಲು ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯುನಿಕೋಡ್ ಕನ್ನಡ ತಂತ್ರಾಂಶಕ್ಕೆ ಹೆಚ್ಚಿನ ಒತ್ತು.
* ಪರಿಶಿಷ್ಟ ಜಾತಿ-ವರ್ಗದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ. 60ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ ಧನವನ್ನು 5,000 ರೂ.ಗಳಿಂದ 7 ಸಾವಿರ ರೂ.ಗೆ ಹಾಗೂ ಶೇ. 75ಕ್ಕಿಂತ ಹೆಚ್ಚು ಅಂಕ ಪಡೆದವರ ಪ್ರೋತ್ಸಾಹ ಧನವನ್ನು 10 ಸಾವಿರದಿಂದ 15 ಸಾವಿರ ರೂ.ಗೆ ಏರಿಸಲಾಗುತ್ತದೆ.
* ಅಲ್ಪಸಂಖ್ಯಾತರಿಗಾಗಿ ಶಾದಿ ಮಹಲ್, ಸಮುದಾಯ ಭವನಗಳ ನಿರ್ಮಾಣ – ಜಿಲ್ಲಾ ಮಟ್ಟದಲ್ಲಿ 50 ಲಕ್ಷ ರೂ. ನಿಂದ 1 ಕೋಟಿಗೆ ಹಾಗೂ ತಾಲೂಕು ಮಟ್ಟದಲ್ಲಿ 20 ಲಕ್ಷ ರೂ. ಇದ್ದದ್ದನ್ನು 50 ಲಕ್ಷ ರೂ.ಗೆ ಏರಿಕೆ. – ಹಿಂದುಳಿದ ವರ್ಗಗಳಿಗೆ ಬಂಪರ್
* ಹಿಂದುಳಿದ ವರ್ಗಗಳಿಗೆ ಬಜೆಟ್‌ನಲ್ಲಿ ವಿಶೇಷ ಕಾರ್ಯಕ್ರಮ ಮಡಿವಾಳ, ಸವಿತಾ, ಹಡಪದ, ಕುಂಬಾರ, ಕಮ್ಮಾರ, ಗಾಣಿಗ, ತಿಗಳ, ಉಪ್ಪಾರ, ಗೌಳಿ ಜನಾಂಗಕ್ಕೆ ವಾರ್ಷಿಕ ಶೇ. 2ರ ಬಡ್ಡಿ ದರದಲ್ಲಿ 1 ಲಕ್ಷದವರೆಗೆ ಸಾಲ ಸೌಲಭ್ಯ.
* ಮೊಗವೀರ ಸಮುದಾಯ ಭವನ ನಿರ್ಮಾಣಕ್ಕೆ 2 ಕೋಟಿ ರೂ ಅನುದಾನ ಹಾಗೂ ಮೊಗವೀರ ಸಮುದಾಯದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಾಲ.
* ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪನೆಗೆ 5 ಕೋಟಿ ರೂ ಅನುದಾನ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯಡಿ ಕಲ್ಯಾಣ ಕಚೇರಿ ಸ್ಥಾಪನೆಗೆ 4 ಕೋಟಿ ರೂ ಅನುದಾನ.
* ಗೊಲ್ಲ ಸಮುದಾಯ ಕಾಲೋನಿಗಳ ಶೈಕ್ಷಣಿಕ ಅಭಿವೃದ್ದಿಗೆ 25 ಕೋಟಿ ಹಾಗೂ ಬಂಜಾರ ಜನಾಂಗದ ಸೇವಾಲಾಲ್ ಜನ್ಮಸ್ಥಳ ಅಭಿವೃದ್ಧಿಗೆ 2 ಕೋಟಿ ಅನುದಾನ.
* ದರ್ಜಿ, ಬಡಗಿ, ಭಜಂತ್ರಿ, ಕುರುಬ, ಮೀನುಗಾರ, ನೇಕಾರ ಸಮುದಾಯಗಳ ವೃತ್ತಿ ಅಭಿವೃದ್ದಿಗೆ ಪ್ರತ್ಯೇಕ ಯೋಜನೆಗಳ ಬಳಕೆ.
* 2ಎ, 2ಬಿ, 3ಎ, 3ಬಿ, ಪ್ರವರ್ಗದ ವಿದ್ಯಾರ್ಥಿಗಳ ಆದಾಯ ಮಿತಿ ವಾರ್ಷಿಕ 1 ಲಕ್ಷಕ್ಕೆ ಹೆಚ್ಚಳ. ಪ್ರವರ್ಗ-1ಕ್ಕೆ ಸೇರಿದ ವಿದ್ಯಾರ್ಥಿಗಳ ಆದಾಯ ಮಿತಿ 2.5 ಲಕ್ಷಕ್ಕೆ ಹೆಚ್ಚಳ.
* ಹಿಂದುಳಿದ ವರ್ಗಗಳ ಧಾರ್ಮಿಕ ಹಾಗೂ ಇತರೆ ಸಂಘ-ಸಂಸ್ಥೆಗಳಿಗೆ 75 ಕೋಟಿ ರು. ಅನುದಾನ ಹಾಗೂ ಹಿಂದುಳಿದ ವರ್ಗಗಳ ಖಾಸಗಿ ಹಾಸ್ಟೆಲ್ ನಿರ್ವಗಹಣೆಗೆ ಗರಿಷ್ಟ 5 ಲಕ್ಷ ರು. ಅನುದಾನ. ಸಿನಿಮಾಗೆ ಸಿದ್ದು
* ಕನ್ನಡ ಅಮೃತ ಮಹೋತ್ಸವ ಭವನದ ಬಾಕಿ ನಿರ್ಮಾಣ ಕಾರ್ಯಕ್ಕೆ 2.5 ಕೋಟಿ
* ವರನಟ ಡಾ ರಾಜ್ ಸ್ಮಾರಕ ಕಾಮಗಾರಿ ಪೂರ್ಣಗೊಳಿಸಿ ಶೀಘ್ರವೇ ಲೋಕಾರ್ಪಣೆ
* ಡಾ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಎರಡು ಎಕರೆ ಜಮೀನು, ಸ್ಮಾರಕ ನಿರ್ಮಾಣಕ್ಕೆ ಚಾಲನೆ
* ಗುಣಾತ್ಮಕ ಚಿತ್ರಗಳಿಗೆ ನೀಡುವ ಸಹಾಯಧನ ಏರಿಕೆ
* 75 ರಿಂದ 100 ಕನ್ನಡ ಸಿನಿಮಾಗಳಿಗೆ ಸಹಾಯಧ ಘೋಷಣೆ ಬೆಂಗಳೂರಿಗೆ ಸಾರಿಗೆ:
* ಬನ್ನೇರುಘಟ್ಟ, ಸರ್ಜಾಪುರ ರಸ್ತೆ ಅಗಲಿಕರಣಕ್ಕೆ 300 ಕೋಟಿ ರು. ಅನುದಾನ
* ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೇತುವೆ ನಿರ್ಮಾಣಕ್ಕೆ 150 ಕೋಟಿ ರು.
* ಕೆಆರ್ ಪುರಂ ಸೇತುವೆ ಗ್ರೇಡ್ ಸಪರೇಟರ್‌ಗೆ ಸುಮಾರು 500 ಕೋಟಿ ರು.
* ಸೋನಿವರ್ಲ್ಡ್ ಜಂಕ್ಷನ್ ಮೇಲು ರಸ್ತೆ ನಿರ್ಮಾಣಕ್ಕೆ 200 ಕೋಟಿ, ಪಾದಚಾರಿ ಸ್ಕೈವಾಕ್ ನಿರ್ಮಾಣಕ್ಕೆ 100 ಕೋಟಿ ರು
* ಮೆಟ್ರೋ ಟ್ರೈನ್ ಲೈನ್ ಅಳವಡಿಕೆ ಕಾಮಗಾರಿ ಅಕ್ಟೋಬರ್‌ನಲ್ಲಿ ಆರಂಭ
* ನಗರದ ಸಂಪಿಗೆ ರಸ್ತೆಯಿಂದ ಪೀಣ್ಯ ನಡುವಣ 10.5 ಕಿಮೀ ರಸ್ತೆ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭ * 10 ಸಾವಿರ ವಿದ್ಯಾರ್ಥಿಗಳಿಗೆ Leadership ಅಭಿವೃದ್ಧಿ
* ವೃದ್ಧಾಶ್ರಮಗಳಿಗೆ ನೀಡಲಾಗುತ್ತಿರುವ ವಾರ್ಷಿಕ ಅನುದಾನವನ್ನು 1.96 ಲಕ್ಷದಿಂದ 8 ಲಕ್ಷ ರೂ.ಗೆ ಹೆಚ್ಚಳ
* ಐಸಿಡಿಎಸ್ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರಿಗೆ ನೀಡಲಾಗುವ ಗೌರವ ಧನವನ್ನು ಕ್ರಮವಾಗಿ 500 ರೂ. ಹಾಗೂ 250 ರೂ.ಗೆ ಹೆಚ್ಚಳ
* ಸ್ವಾತಂತ್ರ್ಯ ಯೋಧರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ
* ಕರಾವಳಿಯಲ್ಲಿ ಎಂಡೋಸಲ್ಫಾನ್ ಪೀಡಿತರ ಸಮೀಕ್ಷೆ, ಪುನರ್ವಸತಿ, ಶಾಶ್ವತ ಪರಿಹಾರ
*32.50 ಲಕ್ಷ ಯುವತಿಯರಿಗೆ ಋತುಚಕ್ರ ಸಂಬಂಧ ಶುಚಿತ್ವಕ್ಕಾಗಿ 10 ನ್ಯಾಪ್ ಕಿನ್ ಪ್ಯಾಡ್ ಉಚಿತ ವಿತರಣೆ
* ಮಾರ್ಚ್ 2014 ಒಳಗಾಗಿ ಅರ್ಕಾವತಿ ನಿವೇಶನಗಳ ಹಸ್ತಾಂತರ
* ಮಹಿಳಾ ಕಾಲೇಜು ಇಲ್ಲದ 15 ಜಿಲ್ಲೆಗಳಲ್ಲಿ ಮಹಿಳಾ ಕಾಲೇಜು ಸ್ಥಾಪನೆ ಯೋಜನೆ
* ಪ್ರತೀ ಜಿಲ್ಲೆಯ ಒಂದು ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಸ್ಥಾಪನೆ
* ಬೆಂಗಳೂರಿನಲ್ಲಿ 4 ಕಡೆ RTO ಕಚೇರಿಗಳು
* ಎಲ್ಲ ಸರಕಾರಿ ಕಾಲೇಜು, ಪಾಲಿಟೆಕ್ನಿಕುಗಳಲ್ಲಿ ಇಂಟರ್ನೆಟ್ ಸಂಪರ್ಕ
* ಕರಾವಳಿಯ ಕುಳಾಯಿ ಹಾಗೂ ಹೆಜಮಾಡಿ ಕೋಡಿಗಳಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ
* ಮೀನುಗಾರಿಕಾ ಸಲಕರಣೆಗಳ ಕಿಟ್ ಮೌಲ್ಯ 5 ಸಾವಿರ ದಿಂದ 10 ಸಾವಿರಕ್ಕೆ ಏರಿಕೆ
* 2 ಸಾವಿರ ಒಳನಾಡು ಮೀನುಗಾರರಿಗೆ ಫೈಬರ್ ಗ್ಲಾಸ್ ಹರಿಗೋಲು
* 391 ಪಶುವೈದ್ಯರು ಹಾಗೂ 642 ಪಶು ವೈದ್ಯಕೀಯ ಸಹಾಯಕರ ಹುದ್ದೆ ಭರ್ತಿ
* ಬೆಂಗಳೂರು ಉಪನಗರ ರೈಲು ನಿಗಮ ಸ್ಥಾಪನೆ
* ಒಂದನೇ ತರಗತಿಯಿಂದಲೇ ಇಂಗ್ಲೀಷ್ ಬೋಧನೆ
* ಒಂದನೇ ತರಗತಿ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹಧನ
* ಮಲ್ಲಿ ಲೆವೆಲ್ ಕಾರ್ ಪಾರ್ಕಿಗೆ 100 ಕೋಟಿ
* ಸಹಕಾರ ಇಲಾಖೆ ಕಾರ್ಯಕ್ರಮಗಳಿಗೆ 2126 ಕೋಟಿ
* ದೇವರು, ಮಠಗಳಿಗೆ ಅನುದಾನ ಇಲ್ಲ
* ಕಂಬಳಿ ನೇಕಾರರಿಗೆ 1 ಲಕ್ಷ ರೂ ಸಾಲ
* 5000 ಮಹಿಳಾ ಮೀನುಗಾರರಿಗೆ ಐಸ್ ಬಾಕ್ಸ್
* ಮೆಟ್ರಿಕ್ ಪೂರ್ವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ 150 ರಿಂದ 200 ರೂ ಗೆ ಹೆಚ್ಚು.
* ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿಗಳಿಗೆ 850 ರೂ ವಿದ್ಯಾರ್ಥಿ ವೇತನ 1000 ರೂ ಗೆ ಹೆಚ್ಚಳ.
* ಧಾರವಾಡದಲ್ಲಿ IIIT ಸ್ಥಾಪನೆಗೆ 45 ಕೋಟಿ ಅನುಧಾನ * ಉನ್ನತ ಶಿಕ್ಷಣಕ್ಕೆ – 3,243 ಕೋಟಿ ಅನುದಾನ
* ಪ್ರಾಥಮಿಕ ಶಿಕ್ಷಣ ಇಲಾಖೆಗೆ 15,680 ಕೋಟಿ
* ಸ್ಕೌಟ್ಸ್ ಆಂಡ್ ಗೈಡ್ಸ್‌ಗೆ 3 ಕೋಟಿ
* ಕ್ರಿಶ್ಚಿಯನ್ ವಿದ್ಯಾರ್ಥಿಗಳಿಗಾಗಿ 100 ಕೋಟಿ ಅನುದಾನ
* ಖಾಲಿ ಇರುವ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ
* ಒಂದನೇ ತರಗತಿಯಿಂದ ಇಂಗ್ಲೀಷ್ ಕಲಿಕೆಗೆ ಕ್ರಮ
* ರಾಜ್ಯದ 15 ಜಿಲ್ಲೆಗಳಲ್ಲಿ ಮಹಿಳಾ ಕಾಲೇಜು ಸ್ಥಾಪನೆ
* ಎಸ್‌ಸಿ/ಎಸ್‌ಟಿ ವಸತಿ ಶಾಲೆಗಳ ಮೂಲ ಸೌಕರ್ಯಕ್ಕೆ 100 ಕೋಟಿ
* 4 ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ
* ಮೀನುಗಾರರಿಗೆ ಗೃಹ ನಿರ್ಮಾಣಕ್ಕೆ ಸಹಾಯ ಧನ 60 ಸಾವಿರದಿಂದ 1.2 ಲಕ್ಷಕ್ಕೆ ಏರಿಕೆ
* ಪ್ರಕೃತಿ ವಿಕೋಪದಿಂದ ಸಾವನ್ನಪ್ಪುವ ಕುರಿ, ಮೇಕೆ ಮಾಲೀಕರಿಗೆ 3000 ರೂ ಸಬ್ಸಿಡಿ
* ಬೆಂಗಳೂರಿನ ದಂಡು ಪ್ರದೇಶದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ 8 ಕೋಟಿ
* ಸರ್ಕಾರಿ ಜಮೀನು ಒತ್ತುವರಿ ವಿರುದ್ಧ ಕಠಿಣ ಕ್ರಮ * ಸರಕಾರಿ ಆಸ್ಪತ್ರೆಗಳ ಆಧುನೀಕರಣ
* ಸ್ತ್ರೀಯರ ಮೇಲಿನ ದೌರ್ಜನ್ಯ ಇತ್ಯರ್ಥಕ್ಕೆ 10 ನ್ಯಾಯಾಲಯಗಳ ಸ್ಥಾಪನೆ
* ಕಂದಾಯ ಇಲಾಖೆಯಿಂದ ಮನಸ್ವಿನಿ ಯೋಜನೆ: -40 ವರ್ಷ ದಾಟಿದ ಅವಿವಾಹಿತ, ವಿಚ್ಛೇದಿತ ಮಹಿಳೆಯರಿಗೆ 500 ರೂ. ಮಾಸಾಶನ
* 4 ಕೋಟಿ ವೆಚ್ಚದಲ್ಲಿ ಮಂಗಳೂರಿನ ಮೀನುಗಾರಿಕಾ ಕಾಲೇಜು ಅಭಿವೃದ್ಧಿ
* ನೀರಾ ಬಳಕೆಗೆ ಅವಕಾಶ, ಅಬಕಾರಿ ನೀತಿ ಬದಲು
* ಮೈಸೂರಿನಲ್ಲಿ ವಕೀಲರ ಭವನ ನಿರ್ಮಾಣಕ್ಕೆ 2 ಕೋಟಿ ರೂ
* ಸಾವಯವ ಕೃಷಿಗಾಗಿ 25 ಕೋಟಿ ರೂ ಅನುದಾನ
* ರಿಯಾಯಿತಿ ದರದಲ್ಲಿ ಕೃಷಿ ಯಂತ್ರೋಪಕರಣ ಖರೀದಿಗಾಗಿ 150 ಕೋಟಿ ರೂ.
* ಲೈಂಗಿಕ ಅಲ್ಪಸಂಖ್ಯಾತರಿಗೆ ಮೈತ್ರಿ ಯೋಜನೆಯಡಿ ಮಾಸಿಕ 500 ರೂ
* ಚಿತ್ರಮಂದಿರಗಳಲ್ಲಿ ಸೇವಾ ಶುಲ್ಕ ಏರಿಕೆ. ಎಸಿ ಟಾಕೀಸ್ 1 ರಿಂದ 3 ರೂ ಗೆ ಟಿಕೆಟ್ ಬೆಲೆ ಏರಿಕೆ
* ಅಬಕಾರಿ ಸುಂಕದಿಂದ 12,600 ಕೋಟಿ ರೂ. ಸಂಗ್ರಹಣೆ ಗುರಿ
* ಒಟ್ಟಾರೆ ಕೃಷಿಗೆ 3065 ಕೋಟಿ ರೂ ಅನುದಾನ
* ಶಾಲಾ ಮ್ಯಾಕ್ಸಿ ಕ್ಯಾಬ್ ಗಳಿಗೆ ಶೆ. 50 ತೆರಿಗೆ ವಿನಾಯ್ತಿ
* ಸಮಾಜ ಕಲ್ಯಾಣ 5046 ಕೋಟಿ * ಮಹಿಳಾ ಮತ್ತು ಮಕ್ಕಳ ಕಲ್ಯಾಣ 3466 ಕೋಟಿ
* ಕೃಷಿ ಮತ್ತು ತೋಟಗಾರಿಕೆಗೆ 4378 ಕೋಟಿ * ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ 1903 ಕೋಟಿ ರೂ.
* ಸಾರಿಗೆ, ಒಳಾಡಳಿತಕ್ಕೆ 5315 ಕೋಟಿ. * ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 8218 ಕೋಟಿ
* ಶಿಕ್ಷಣ 18923 ಕೋಟಿ ರೂ.
* ವಾಣಿಜ್ಯ ಮತ್ತು ಕೈಗಾರಿಕೆ 885 ಕೋಟಿ
* ನಗರಾಭಿವೃದ್ಧಿ 9286 ಕೋಟಿ ರೂ.
* ಲೋಕೋಪಯೋಗಿ 5862 ಕೋಟಿ
* ಜಲಸಂಪನ್ಮೂಲ 9363 ಕೋಟಿ
* ಆರೋಗ್ಯ ಇಲಾಖೆಗೆ 5421 ಕೋಟಿ ರೂ.
* ಇಂಧನ 10312 ಕೋಟಿ ರೂ.
* ಅಬಕಾರಿ ಇಲಾಖೆಗೆ ಕಾಯಕಲ್ಪ
* ಅಬಕಾರಿ ಸುಂಕ ಶೇ. 16 ರಿಂದ 40ಕ್ಕೆ ಏರಿಕೆ
* ಪಿಗ್ಮಿ ಏಜೆಂಟರಿಗೆ ವಾರ್ಷಿಕ ಆದಾಯ ಮಿತಿ 36,000 ದಿಂದ 1.2 ಲಕ್ಷಕ್ಕೆ ಏರಿಕೆ
* ಹನಿ ನೀರಾವರಿಗೆ ಉತ್ತೇಜನ – – ಪ. ಪಂಗಡದವರಿಗೆ ಶೇ. 90ರಷ್ಟು ಮತ್ತು ಇತರರಿಗೆ ಶೇ.70ರಷ್ಟು ಸಹಾಯಧನ
* ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲು 1000 ಕೋಟಿ ರೂ. ಆವರ್ತ ನಿಧಿ ಸ್ಥಾಪನೆ
* ಕಬ್ಬು ಖರೀದಿ ತೆರಿಗೆ ಪ್ರತಿ ಟನ್‌ಗೆ ಶೇ. 20 ಇಳಿಕೆ
* ಶೇ. 1.1ರಷ್ಟು ಸೆಸ್ ಇಳಿಕೆ- ಡೀಸೆಲ್ 50 ಪೈಸೆ ಅಗ್ಗ
* ಸಕ್ಕರೆ ಮೇಲಿನ ಪ್ರವೇಶ ತೆರಿಗೆ ಶೇ. 1ರಷ್ಟು ಇಳಿಕೆ
* 300 ರೂ ವರೆಗಿನ ಪಾದರಕ್ಷೆಗಳಿಗೆ ತೆರಿಗೆ ವಿನಾಯ್ತಿ
* ರಾಜ್ಯದಲ್ಲಿ ಕೌಶಲ್ಯ ಅಭಿವೃದ್ಧಿ ಆದ್ಯತಾ ವಲಯವಾಗಿದೆ.
* ಹಿಂದಿನ ಸರಕಾರದ ಕೃಷಿ ಬಜೆಟ್ ಸಮರ್ಪಕವಾಗಿರಲಿಲ್ಲ. ಅದರಿಂದ ಏನೂ ಸಾಧನೆಯಾಗಿಲ್ಲ.
* ಗೊತ್ತುಗುರಿಯಿಲ್ಲದ ಸಾಲವು ಆರ್ಥಿಕ ಹೊರೆಗೆ ಕಾರಣವಾಗುತ್ತದೆ.
* ಪ್ರಾಕೃತಿಕ ವಿಕೋಪದಿಂದ ರೈತರ ಬೆಳೆ, ಜಾನುವಾರುಗಳಿಗಾಗುವ ಹಾನಿಯ ಪರಿಹಾರಕ್ಕಾಗಿ ವಿಕೋಪ ಉಪಶಮನ ನಿಧಿ ಸ್ಥಾಪನೆ
* ಕನಿಷ್ಠ ಬೆಂಬಲ ಬೆಲೆಗಾಗಿ ಆವರ್ತ ನಿಧಿಯ ಮೌಲ್ಯ 1 ಕೋಟಿ ರೂ ಗೆ ಏರಿಕೆ
* 97,986 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ, 22,731 ಕೋಟಿ ರೂ. ಬಂಡವಾಳ ಗುರಿ
* 1,20,717 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ
* ಕೃಷ್ಣಾ, ಕಾವೇರಿ ನೀರಿನ ಸಂಪೂರ್ಣ ಸದ್ಬಳಕೆಯ ಗುರಿ, ಕೃಷಿಕರ ಆದಾಯ ಹೆಚ್ಚಿಸಲು ಕ್ರಮ
Click this button or press Ctrl+G to toggle between Kannada and English