ಸಿದ್ದರಾಮಯ್ಯರು ಗುರಿ ಇಲ್ಲದ ಕೊರತೆಯ ಬಜೆಟ್ ಮಂಡಿಸಿದ್ದಾರೆ ; ಸಿಪಿಐಎಂ

8:55 PM, Saturday, July 13th, 2013
Share
1 Star2 Stars3 Stars4 Stars5 Stars
(4 rating, 3 votes)
Loading...

cpim opposed Budget ಮಂಗಳೂರು:  ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಂಡಿಸಿರುವ ಜನವಿರೋಧಿ ಬಜೆಟ್ ನ್ನು ವಿರೋಧಿಸಿ ಶನಿವಾರ ಜಿಲ್ಲಾಧಿಕಾರಿ ಗೇಟಿನ ಎದುರು ಸಿಪಿಐಎಂ ಪ್ರತಿಭಟನೆ ನಡೆಸಿತು.

ಸಿದ್ದರಾಮಯ್ಯ ರವರು ಮಂಡಿಸಿರುವ ಬಜೆಟ್ ನಲ್ಲಿ ಎಲ್ಲಾ ವಸ್ತುಗಳ ಬೆಲೆಗಳು ಮತ್ತಷ್ಟು ತೀವ್ರಗತಿಯಲ್ಲಿ ಏರಿಕೆಯಾಗುವಂತೆ ಪರಿಣಾಮ ಬೀರುತ್ತದೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಮತ್ತು ಸಾಮಾಜಿಕ ಭದ್ರತೆ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡದೆ ಅಭಿವೃದ್ಧಿ ಶೂನ್ಯತೆಯನ್ನು ರಾಜ್ಯದಲ್ಲಿ ನಿರ್ಮಾಣ ಮಾಡುತ್ತಿದ್ದು, ಇದು ಜನವಿರೋಧಿ ಬಜೆಟ್ ಆಗಿದೆ ಎಂದು ಸಿಪಿಎಂನ ಜಿಲ್ಲಾ ಕಾರ್ಯದರ್ಶಿ ಬಿ.ಮಾಧವ ಹೇಳಿದರು.

ರಾಜ್ಯ ಅಬಕಾರಿ ತೆರಿಗೆ ಮತ್ತು ಮಾರಾಟ ತೆರಿಗೆ ಹಾಗೂ ಸೇವಾ ತೆರಿಗೆ, ವಿದ್ಯುತ್ ಮೇಲಿನ ತೆರಿಗೆಗಳನ್ನು ತೀವ್ರಗತಿಯಲ್ಲಿ ಹೆಚ್ಚಿಸಲಾಗಿದೆ. ಮಾರಾಟ ತೆರಿಗೆಯ ಮೊತ್ತವು ರೂ.28,425 ಕೋಟಿಗಳಿಂದ ರೂ.33,590 ಕೋಟಿ, ಸೇವಾ ತೆರಿಗೆಯನ್ನು ರೂ.1492 ಕೋಟಿಗಳಿಂದ ರೂ 1797 ಕೋಟಿ ವಿದ್ಯುತ್ ಮೇಲಿನ ತೆರಿಗೆಯನ್ನು ರೂ.760 ಕೋಟಿಗಳಿಂದ ರೂ.825 ಕೋಟಿಗೆ ಹೆಚ್ಚಿಸಲಾಗಿದೆ. ಈ ಎಲ್ಲಾ ತೆರಿಗೆಗಳ ಪರಿಣಾಮವು ನೇರವಾಗಿ ತೀವ್ರ ಬೆಲೆ ಏರಿಕೆಗೆ ಕಾರಣವಾಗಲಿದೆ ಎಂದು ವಸಂತ ಆಚಾರಿ ಹೇಳಿದರು.

ಮಂಡಿಸಿರುವ ಬಜೆಟ್ 1,15,017 ಕೋಟಿ 51 ಲಕ್ಷಗಳಾಗಿದೆ ಆದಾಯ ಸಂಗ್ರಹದ ಗುರಿ ಒಟ್ಟು 98,186 ಕೋಟಿ 37 ಲಕ್ಷಗಳಾಗಿದೆ. ಇದು ಗುರಿ ಇಲ್ಲದ ಕೊರತೆ ಬಜೆಟ್ ಆಗಿದೆ ಎಂದು ಸುನಿಲ್ ಕುಮಾರ್ ಬಜಾಲ್ ಹೇಳಿದರು. ಬಾಲಕೃಷ್ಣ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English